ಕಾಂತಾರದಲ್ಲಿ ಏನೆಲ್ಲಾ ತಪ್ಪಿದೆ ಗೊತ್ತಾ.ಹಿರಿಯ ದೈವ ನರ್ತಕರು ಹೀಗಂದಿದ್ಯಾಕೆ ಗೊತ್ತಾ ? ದೈವ ನರ್ತಕ ಮೃತಪಟ್ಟರೆ - Karnataka's Best News Portal

ಶ್ರೀ ದಯಾನಂದ ಕತ್ತಲ್ ಕಾಂತಾರ ಸಿನಿಮ ನೋಡಿ ಏನಂದ್ರು….||ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ತೆರೆಕಂಡಂತಹ ಕಾಂತಾರಾ ಸಿನಿಮಾವು ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು ಅಷ್ಟರ ಮಟ್ಟಿಗೆ ರಿಷಬ್ ಶೆಟ್ಟಿ ಅವರು ತಮ್ಮ ನಿರ್ದೇಶನದಲ್ಲಿ ಈ ಒಂದು ಚಿತ್ರವನ್ನು ನಿರ್ಮಿಸಿದ್ದು ಜಗತ್ತಿನಾದ್ಯಂತ ಎಲ್ಲಾ ಭಾಷೆಯಲ್ಲಿಯೂ ಕೂಡ ಈ ಚಿತ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ ಇದರ ಯಶಸ್ಸು ರಿಷಬ್ ಶೆಟ್ಟಿ ಅವರಿಗೆ ಸೇರುತ್ತದೆ ಹಾಗೂ ರಿಷಬ್ ಶೆಟ್ಟಿ ಅವರು ಈ ಒಂದು ಚಿತ್ರವನ್ನು ನಿರ್ಮಾಣ ಮಾಡುವುದಕ್ಕೂ ಮೊದಲು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವಂತಹ ಪಂಜುರ್ಲಿ ಮತ್ತು ಗುಳಿಗ ದೈವದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಕಲೆಹಾಕಿ ಹಾಗೂ ಪಂಜುರ್ಲಿ ಮತ್ತು ಗುಳಿಕ ದೈವ ಆಹ್ವಾನೆಯಾಗುವಂತಹ ದೈವ ನರ್ತಕರು ಹಾಗೂ ಕುಟುಂಬ ವರ್ಗದವರನ್ನು ಭೇಟಿಯಾಗಿದ್ದರು.

ನಂತರ ಅವರೆಲ್ಲರ ಬಳಿ ಈ ಒಂದು ದೈವದ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಹಾಗೂ ಯಾವ ನಿಯಮವನ್ನು ಅನುಸರಿಸಬೇಕು ಮತ್ತು ಯಾವ ಯಾವ ವಿಧಾನದಲ್ಲಿ ಪಂಜರ್ಲಿ ಮತ್ತು ಗುಳಿಗ ದೈವದ ನಿಯಮವನ್ನು ಅನುಸರಿಸಬೇಕು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಂಡಿದ್ದರು ನಂತರವೇ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ವೇಷವನ್ನು ಧರಿಸಿದ್ದರು ಎಂದೇ ಹೇಳಲಾಗುತ್ತದೆ ಹಾಗೂ ರಿಷಬ್ ಶೆಟ್ಟಿ ಅವರು ಈ ಒಂದು ಚಿತ್ರವನ್ನು ತಮ್ಮ ಊರಿನಲ್ಲಿಯೇ ಚಿತ್ರೀಕರಣವನ್ನು ಮಾಡಿದ್ದು ಈ ಒಂದು ಚಿತ್ರಕ್ಕೆ ಹೆಚ್ಚಿನ ಹಣವನ್ನು ಕೂಡ ಖರ್ಚು ಮಾಡಿದ್ದಾರೆ ಹಾಗೂ ಆ ಸಮಯದಲ್ಲಿ ಕೆಲವೊಂದಷ್ಟು ತೊಂದರೆಗಳು ಎದುರಾದಂತಹ ಸಮಯದಲ್ಲಿ ಪಂಜುರ್ಲಿ ದೈವದ ಬಳಿ ಹೋಗಿ ಯಾವುದೇ ರೀತಿಯಾದಂತಹ ತೊಂದರೆ ಆಗದಂತೆ ಪೂಜೆಯನ್ನು ಮಾಡಿಸಿ ಅಲ್ಲಿ ಹರಕೆಯನ್ನು ಹೊತ್ತು ಬಂದು ಚಿತ್ರೀಕರಣವನ್ನು ಪ್ರಾರಂಭಿಸಿದ್ದರು ಎಂದು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳುತ್ತಿದ್ದರು.

ಹಾಗಾಗಿ ನಂತರದ ದಿನದಲ್ಲಿ ಯಾವುದೇ ರೀತಿಯ ತೊಂದರೆ ಆಗಲಿಲ್ಲ ಎಂಬ ವಿಚಾರವನ್ನು ಕೂಡ ಸ್ವತಹ ಅವರೇ ಹಂಚಿಕೊಂಡಿದ್ದಾರೆ ಹಾಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮೇಲೆ ಹೇಳಿದಂತೆ ತುಳುನಾಡಿನ ದೈವ ನರ್ಥಕರು ಆರಾಧಕರು ತುಳು ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಅವರು ಕಾಂತಾರ ಸಿನಿಮಾದ ಬಗ್ಗೆ ಕೆಲವೊಂದಷ್ಟು ವಿಚಾರಗಳ ನ್ನು ವ್ಯಕ್ತಪಡಿಸಿದ್ದಾರೆ ಹಾಗೂ ನಮ್ಮ ಭಾಷೆಯ ಬಗ್ಗೆ ನಮ್ಮ ಕಡೆಯ ಒಬ್ಬ ಹುಡುಗ ಅದರಲ್ಲೂ ರಿಷಬ್ ಶೆಟ್ಟಿ ಅವರು ಈ ಒಂದು ಚಿತ್ರವನ್ನು ಮಾಡಿರುವುದು ನಮ್ಮೆಲ್ಲರಿಗೂ ಕೂಡ ಒಳ್ಳೆಯ ಗೌರವವನ್ನು ತಂದು ಕೊಟ್ಟಿದೆ ಇದರಿಂದ ನಮ್ಮ ದೈವರಾಧನೆ ನಮ್ಮ ದೈವ ನರ್ತನೆ ಇದೆಲ್ಲದಕ್ಕೂ ಒಂದು ಗೌರವ ಬಂದಂತಾಗಿದೆ ಎಂದೇ ಹೇಳಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *