ಕಾಂತಾರ ಸಿನಿಮಾದಲ್ಲಿ ಈ ಸಣ್ಣ ಸಣ್ಣ ವಿಷಯಗಳನ್ನ ನೋಟಿಸ್ ಮಾಡಿದ್ದೀರ ? ಈ ವಿಡಿಯೋ ನಿಮಗೆ ಸಕತ್ ಮಜಾ ಕೊಡುತ್ತೆ - Karnataka's Best News Portal

ಕಾಂತಾರ ಸಿನಿಮಾದಲ್ಲಿ ಇದನ್ನೆಲ್ಲ ನೋಟಿಸ್ ಮಾಡಿದ್ರಾ?
ಕಾಂತರಾ ಸಿನಿಮಾ ಈ ವರ್ಷ ತೆರೆಕಂಡಂತಹ ಅತ್ಯ ದ್ಭುತ ಸಿನಿಮಾಗಳ ಸಾಲಿನಲ್ಲಿ ಮೊಟ್ಟ ಮೊದಲನೆಯ ಸ್ಥಾನದಲ್ಲಿಯೇ ಇದೆ ಎಂದು ಹೇಳಬಹುದು ಅದರಲ್ಲಿಯೂ ಈ ಹಿಂದೆ ಹೆಚ್ಚಿನ ಯಶಸ್ಸನ್ನು ಮತ್ತು ಹೆಚ್ಚಿನ ಹಣವನ್ನು ಸಂಪಾದನೆ ಮಾಡಿದಂತಹ ಎಲ್ಲಾ ಚಿತ್ರಗಳಿಗಿಂತ ಮೊಟ್ಟಮೊದಲನೆಯ ಸ್ಥಾನದಲ್ಲಿ ಈ ಕಾಂತಾರ ಸಿನಿಮಾ ಬರುತ್ತದೆ ಅಷ್ಟರಮಟ್ಟಿಗೆ ಈ ಸಿನಿಮಾ ತನ್ನ ಯಶಸ್ಸನ್ನು ಪಡೆದುಕೊಂಡಿದೆ ಹೌದು ಈ ಚಿತ್ರವನ್ನು ನಿರ್ಮಾಣ ಮಾಡಲು ರಿಷಬ್ ಶೆಟ್ಟಿ ಅವರು 17 ಕೋಟಿ ರೂಪಾಯಿಯನ್ನು ಖರ್ಚು ಮಾಡಿ ದ್ದರು ಎಂದು ಹೇಳಲಾಗುತ್ತದೆ ಆದರೆ ಈ ಸಿನಿಮಾ ಈಗ ಖರ್ಚು ಮಾಡಿದಂತಹ ಹಣಕ್ಕಿಂತ ಹೆಚ್ಚಿನ ಅಂದರೆ 100 ಕೋಟಿಗೂ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದೆ ಹೌದು ಕಾಂತಾರಾ ಸಿನಿಮಾ ವು ತನ್ನದೇ ಆದಂತಹ ವಿಷಯವನ್ನು ಸಿನಿಮಾದಲ್ಲಿ ಹೊಂದಿದ್ದು.

ಅದರಲ್ಲೂ ತುಳು ನಾಡಿನ ದೇವತೆಗಳ ಆರಾಧನೆ ಭೂತಾರಾಧನೆ ದೈವ ನರ್ತನೆ ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಿದ್ದು ಅಲ್ಲಿನ ದೇವರುಗಳ ಮಹಿಮೆ ಯನ್ನು ಈ ಚಿತ್ರದಲ್ಲಿ ತೋರಿಸಿಕೊಡಲಾಗಿದೆ ಹಾಗೂ ಕಾಂತಾರಾ ಸಿನಿಮಾವು ಇಲ್ಲಿಯವರೆಗೆ ಬಂದಿರುವ ಎಲ್ಲಾ ಸಿನಿಮಾಗಳನ್ನು ಹಿಂದೆ ಹಾಕಿ ತನ್ನದೇ ಗುರಿಯತ್ತ ಸಾಧನೆಯತ್ತ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಹಾಗೂ ಈ ಚಿತ್ರವನ್ನು ನಿರ್ಮಿಸುವುದಕ್ಕೆ ಅವರು ಕೆಲವೊಂದು ವಿಧಾನಗ ಳನ್ನು ಮತ್ತು ಸಂಪ್ರದಾಯಗಳನ್ನು ಅನುಸರಿಸುವುದರ ಮುಖಾಂತರ ಮತ್ತು ಆ ದೇವರಿಗೆ ಒಂದು ಗೌರವ ವನ್ನು ಸಲ್ಲಿಸುವುದರ ಮುಖಾಂತರ ಈ ಚಿತ್ರವನ್ನು ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹಾಗೂ ಅವರ ತಂಡದವರು ಕೂಡ ಈ ಒಂದು ಸಿನಿಮಾಗೆ ತಮ್ಮದೇ ಆದಂತಹ ಶ್ರಮವನ್ನು ಹಾಕಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಹಾಗೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧ ಪಟ್ಟಂತೆ ಈ ಕಾಂತರಾ ಚಿತ್ರದಲ್ಲಿ ಕೊನೆಯ 10 ನಿಮಿಷಗಳ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರ ಮೈ ಮೇಲೆ ಪಂಜುರ್ಲಿ ದೈವ ಆಹ್ವಾನೆಯಾಗುತ್ತದೆ ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ ಆದರೆ ಅದು ತಪ್ಪು.ಸಿನಿಮಾದಲ್ಲಿ ಮೊದಲೇ ತಿಳಿಸಿರುವ ಹಾಗೆ ಕ್ಷೇತ್ರ ಪಾಲಕನಾಗಿರುವಂತಹ ಗುಳಿಗ ದೈವನು ಕ್ಷೇತ್ರ ಹಾಗೂ ಕಾಡಿನ ಸಂರಕ್ಷಣೆಗಾಗಿ ಇರುವಂತಹ ದೈವ ಎಂದು ಹೇಳಲಾಗುತ್ತದೆ ಪಂಜುರ್ಲಿ ಗ್ರಾಮ ದೇವತೆಯಾಗಿ ಎಲ್ಲರಿಗೂ ಆಶೀರ್ವಾದವನ್ನು ಕೊಟ್ಟರೆ ಗುಳಿಗ ದೇವಾ ಅಲ್ಲಿನ ಕ್ಷೇತ್ರ ಪಾಲಕನಾಗಿ ಇರುತ್ತಾನೆ ಎಂದು ಹೇಳುತ್ತಾರೆ ಮೊದಲೇ ತಿಳಿಸಿರುವ ಹಾಗೆ ಪಂಜುರ್ಲಿ ದೈವ ಹೇಳುವಂತೆ ನಾನು ನಿನ್ನನ್ನು ಸುಮ್ಮನೆ ಬಿಟ್ಟರು ಕ್ಷೇತ್ರಪಾಲಕ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದೇ ಹೇಳಿರುವ ಹಾಗೆ ಕಾಂತರಾ ಸಿನಿಮಾದ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ ಗುಳಿಗ ದೈವ ಆಹ್ವಾನೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *