ಕಾಂತಾರ 250 ಕೋಟಿ ಕೆಜಿಎಫ್ 1250 ಕೋಟಿ ಈ ಸಿನಿಮಾಗಳಿಂದ ಬರುವ ಹಣ ಹಾಗೂ ಲಾಭ ಯಾರಿಗೆ ಹೋಗುತ್ತೆ ಗೊತ್ತಾ ? - Karnataka's Best News Portal

ಆ ಪಿಲ್ಮ್ ಅಷ್ಟು ಬಾಚಿಕೊಳ್ತು ಈ ಪಿಲ್ಮ್ ಅಷ್ಟು ಬಾಚಿಕೊಳ್ತು ಇಷ್ಟು ಕೋಟಿ ಕಲೆಕ್ಷನ್‌ ಮಾಡ್ತು ದಾಖಲೆ ಮೇಲೆ ದಾಖಲೆ ಮಾಡ್ತು ಅಂತೆಲ್ಲಾ ಕೇಳಿರಿತಿರಿ ಹಾಗಾದರೆ ಯಾವುದಾದರೂ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಹಾಗಿ ಕೋಟಿ ಕೋಟಿ ದುಡ್ಡು ಮಾಡ್ದಾಗ ಆ ಹಣ ಯಾರಿಗೆ ಹೋಗುತ್ತೆ ಅಂತ ಗೊತ್ತಾ.ಕಾಂತಾರ ಸಿನಿಮಾ ನೂರಾರು ಕೋಟಿ ಬಾಚಿಕೊಂಡಿದ್ದು ಯಾರಿಗೆ ಒಯ್ತು ರಿಷಬ್ ಶೆಟ್ಟಿ ಗಾ ವಿಜಯ್ ಕಿರಗಂದೂರ್ ಗಾ ಅಥವಾ ಬೇರೆ ಯಾರಿಗಾದರೂ ನಾ ಇವರಲ್ಲಿ ಹೆಚ್ಚು ದುಡ್ಡು ಮಾಡಿದವರು ಯಾರು ಪಿಲ್ಮ್ ಬ್ಯುಸಿನೆಸ್ ಹೇಗೆ ನಡಿಯುತ್ತೆ ಗೊತ್ತ ಎಲ್ಲವನ್ನ ತಿಳಿಸಿಕೊಡ್ತೀವಿ ಬನ್ನಿ.ಪಿಲ್ಮ್ ಬ್ಯುಸಿನೆಸ್ ಹೇಗೆ ನಡಿಯುತ್ತೆ ಅಂತ ನಿಮಗೆ ಗೊತ್ತ ಗಾಬೇಕು ಅಂದರೆ ಅದರಲ್ಲಿ ಬರುವ ಮೂವರ ಬಗ್ಗೆ ನೋಡಲೆ ಬೇಕು ನಂ.1 ಪ್ರೊಡ್ಯೂಸರ್ ಅಥವಾ ನಿರ್ಮಾಪಕರು ಪ್ರೆಂಡ್ಸ್ ಸಿನಿಮಾಗೆ ಬಂಡವಾಳ ಹಾಕೊದೆ ಇವರು ನಟ ನಟಿಯರಿಂದ ಇಡಿದು ನಿರ್ದೇಶಕರು ಟೆಕ್ನಿಶಿಯನ್ಸ್ ಇತರ ಸಿಬ್ಬಂಧಿ ಸಂಭಾವನೆ ಕೊಡೋದು ಸಿನಿಮಾ ರೆಡಿ ಆಗೊವರೆಗೆ ಅಗುವ ಎಲ್ಲಾ ಖರ್ಚು ವೆಚ್ಚಗಳನ್ನು ನೊಡಿಕೊಳ್ಳೊರೆ‌ ನಿರ್ಮಾಪಕರು ಸಿನಿಮಾ ರೆಡಿಯಾದ ಬಳಿಕ ಅದರ ಪ್ರಮೋಷನ್ ಹಾಗೂ ಜಾಹೀರಾತಿಗಾಗಿ ದುಡ್ಡು ಹಾಕ್ತಾರೆ ಇವರು ಹಾಕುವ

ಒಟ್ಟು ಹಣವನ್ನ ಸಿನಿಮಾದ ಬಜೆಟ್ ಅಂತ ಕರಿತಾರೆ. ಕಾಂತಾರ ಚಿತ್ರದ ಪ್ರ್ಯೊಡ್ಯುಸರ್ ವಿಜಯ್ ಕಿರಗಂದೂರ್ ಮತ್ತು ಅವರ ಹೊಂಬಾಳೆ ಪಿಲ್ಮ್ ಕಾಂತಾರ ಚಿತ್ರದ ನಾಯಕ ನಟ ನಿರ್ದೇಶಕ ಮತ್ತು ಸ್ಟೋರಿ ರೈಟರ್ ಎಲ್ಲಾ ಕೆಲಸವನ್ನ ನಿಭಾಯಿಸಿದ ರಿಷಬ್ ಶೆಟ್ಟಿಯ ಸಂಭಾವನೆ ಇಂದ ಇಡಿದು ಶೂಟಿಂಗ್ ಗೆ ತಗುಲಿದ ಎಲ್ಲಾ ಖರ್ಚು ವೆಚ್ಚಗಳನ್ನ ನೋಡಿಕೊಂಡಿದ್ದು ವಿಜಯ್ ಕಿರಗಂದೂರು ಇವರು ಕಾಂತಾರ ರೆಡಿ ಮಾಡಲು ಸುಮಾರು 10 ರಿಂದ 20 ಕೋಟಿ ಖರ್ಚು ಮಾಡಿದ್ದಾರೆ.ಹಾಗಾಗಿ ಕಾಂತಾರದ ಬಜೆಟ್ ಹತ್ತರಿಂದ ಇಪ್ಪತ್ತು ಕೋಟಿ ಅಂತ ಅರ್ಥ ಇಷ್ಟು ಬಂಡವಾಳ ಹಾಕಿದ್ದಕ್ಕೆ ಕಿರಗಂದೂರ್ ಗೆ ಏನು ಸಿಕ್ತು ಅನ್ನೋದನ್ನ ಮುಂದಕ್ಕೆ ಹೇಳ್ತೀವಿ ನಂ.2 ಡಿಸ್ಟ್ರಿಬ್ಯೂಟರ್ಸ್ ಅಥವಾ ವಿತರಕರು ಪಿಲ್ಮ್ ಬ್ಯುಸಿನೆಸ್ ನಲ್ಲಿರುವ ಎರಡನೆ ಕೆಟಗೆರಿ ಅಂದರೆ ಡಿಸ್ಟ್ರಿಬ್ಯುಟರ್ಸ್ ಅಥವಾ ವಿತರಕರು ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ರೆಡಿ ಮಾಡಿದ ನಿರ್ಮಾಪಕರು ತಮ್ಮ ಸಿನಿಮಾ ಗೆ ಒಂದು ರೆಟ್ ಪಿಕ್ಸ್ ಮಾಡಿ ವಿತರಕರಿಗೆ ಸೇಲ್ ಮಾಡತಾರೆ ನಿರ್ಮಾಪಕರು ಎಷ್ಟು ರೆಟ್ ಗೆ ಸೇಲ್ ಮಾಡತಾರೋ ಅದನ್ನ ಥಿಯೇಟ್ರಿಕಲ್ ಅಂತ ಕರಿತಾರೆ ಅಂದರೆ ತಾವು ನಿರ್ಮಾಣ ಮಾಡಿದ ಸಿನಿಮಾವನ್ನ ಥೀಯೆಟರ್ ಗಳಲ್ಲಿ ರಿಲಿಸ್ ಮಾಡೊದಕ್ಕೆ

ನೀಡುವ ಹಕ್ಕು ಕಾಂತಾರದ ಥೀಯೆಟ್ರಿಕಲ್ ಹಕ್ಕನ್ನ ನಿರ್ಮಾಪಕ ವಿಜಯ್ ಕಿರಗಂದೂರ್ ಕೆ ಆರ್ ಜಿ ಸ್ಟುಡಿಯೋಸ್ ಗೆ ಸೇಲ್ ಮಾಡಿದ್ದರೆ ಕೆ ಆರ್ ಜಿ ಸ್ಟುಡಿಯೋಸ್ ಅನ್ನೋದು ವಿಜಯ್ ಕಿರಗಂದೂರ್ ಅವರ ಸಹೋದರ ಕಾರ್ತೀಕ್‌ ಗೌಡ ಎಂಬವವರದ್ದು. ಇವರು ಹೊಂಬಾಳೆ ಪಿಲ್ಮ್ ನ ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ಕೂಡ ಹೌದು ಕಾಂತಾರ ಸಿನಿಮಾವನ್ನ ಸಹೋದರನಿಗೆ ಸೇಲ್ ಮಾಡಿದ ಹಾಗೆ ಆಯ್ತು ವಿಜಯ್ ಕಿರಗಂದೂರ್ ಅದರೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಅಂತ ಮಾತ್ರ ಎಲ್ಲೂ ಬಹಿರಂಗವಾಗಿಲ್ಲ ಅದು ಗೊತ್ತಾಗ್ತ ಇದ್ದರೆ ತಾವು ಹೂಡಿಕೆ‌ ಮಾಡಿದ್ದ ಹತ್ತು ಇಪ್ಪತ್ತು ಕೋಟಿಗೆ ಎಷ್ಟು ಲಾಭ ಬಂತು ಅಂತ ಗೊತ್ತಾಗ್ತಾ ಇತ್ತು.ಇನ್ನೊಂದು ವಿಚಾರ ಅಂದರೆ ನಿರ್ಮಾಪಕರು ಬೇಕಿದ್ದರೆ ನೇರವಾಗಿ ವಿತರಕರಿಗೆ ಸಿನಿಮಾವನ್ನ ಸೇಲ್ ಮಾಡದೆ ಮೂರನೇ ವ್ಯಕ್ತಿ ಮೂಲಕ ವಿತರಕರಿಗೆ ಸೇಲ್ ಮಾಡಬಹುದು.ಹಾಗೆ ಮಾಡಿದಾಗ ಸಿನಿಮಾ ರಿಲೀಸ್ ಮಾಡೋದಕ್ಕು ಮೊದಲೆ ನಿರ್ಮಾಪಕರಿಗೆ ದುಡ್ಡು ಬರುತ್ತೆ.ಜೊತೆಗೆ ಲಾಭ ನಷ್ಟವಾದರೂ ಅದು ಮೂರನೇ ವ್ಯಕ್ತಿಯ ಪಾಲಿಗೆ ಹೋಗುತ್ತೆ. ನಂ.3 ಎಕ್ಸಿಬಿಟರ್ಸ್ ಅಥವಾ ಪ್ರದರ್ಶಕರು ಅಂದರೆ ಥಿಯೇಟರ್ ಮಾಲಿಕರು ಅಂದುಕೊಳ್ಳಿ ನಿರ್ಮಾಪಕರಿಂದ ಸಿನಿಮಾ ಖರೀದಿಸಿದ ವಿತರಕರು ಆ ಸಿನಿಮಾವನ್ನ ಪ್ರದರ್ಶಿಸಲು ಥಿಯೇಟರ್ ಮಾಲಿಕರ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ.

By admin

Leave a Reply

Your email address will not be published. Required fields are marked *