ಕಣ್ಣೀರಿನಲ್ಲಿ ಮುಳುಗಿದ ದೊಡ್ಡ ಮನೆ ಕುಟುಂಬ…||
ಗಂಧದ ಗುಡಿ ಕೇವಲ ಸಿನಿಮಾ ಮಾತ್ರವಲ್ಲ ಇದು ದೊಡ್ಡ ಮನೆ ಕುಟುಂಬದ ಮಗನಾದ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾಗಿದ್ದು ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರೇ ನಿರ್ದೇಶಿಸಬೇಕು ಎಂದು ಹಲವು ದಿನಗಳ ಹಿಂದೆ ಆಸೆ ಇಟ್ಟುಕೊಂಡಿದ್ದರು ಅದರಂತೆಯೇ ಪುನೀತ್ ರಾಜ್ ಕುಮಾರ್ ಅವರು ಗಂಧದ ಗುಡಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ ಹಾಗೂ ಅವರು ನಮ್ಮ ಪರಿಸರದ ಮೇಲೆ ಮತ್ತು ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಜೀವರಾಶಿಯ ಮೇಲೆ ಪ್ರಾಣಿಗಳ ಪಕ್ಷಿಗಳ ಮೇಲೆ ಇರುವಂತಹ ಪ್ರೀತಿಯ ಬಗ್ಗೆ ಈ ಒಂದು ಚಿತ್ರದಲ್ಲಿ ತೋರ್ಪಡಿಸಿಕೊಟ್ಟಿದ್ದಾರೆ ಹಾಗೂ ತಂದೆಯಂತೆ ನಮ್ಮ ದೇಶ ನಮ್ಮ ಭಾಷೆ ನಮ್ಮ ಸಂಸ್ಕೃತಿ ನಮ್ಮ ಪರಂಪರೆಯ ಬಗ್ಗೆ ಎಷ್ಟು ಗೌರವವನ್ನು ಇಟ್ಟುಕೊಂಡಿದ್ದರೋ ಅದರಂತೆ ನಟ ಪುನೀತ್ ರಾಜ್ ಕುಮಾರ್ ಅವರು ಕೂಡ ನಮ್ಮ ಕನ್ನಡ ಭಾಷೆ ಪರಂಪರೆಯ ಬಗ್ಗೆ ಅಷ್ಟೇ ಗೌರವವನ್ನು ಇಟ್ಟುಕೊಂಡಿದ್ದಂತಹ ಒಬ್ಬ ನಟ.
ಅದರಂತೆಯೇ ಅಪ್ಪ ಕಲಿಸಿಕೊಟ್ಟಂತಹ ದಾರಿಯಲ್ಲೇ ಬಂದಿದ್ದಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಇವತ್ತಿಗೆ ಒಂದು ವರ್ಷ ಕಳೆದೆ ಹೋಯಿತು ಒಂದು ವರ್ಷ ಹೇಗೆ ಕಳೆಯಿತು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಆದರೆ ದೊಡ್ಡ ಮನೆ ಕುಟುಂಬದವರ ಕಣ್ಣೀರು ಮಾತ್ರ ಇನ್ನೂ ಕೂಡ ನಿಂತಿಲ್ಲ ಹೌದು ಈ ದಿನದಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗಂಧದ ಗುಡಿ ಸಿನಿಮಾ ತೆರೆ ಮೇಲೆ ಕಾಣಿಸಿಕೊಳ್ಳು ತ್ತಿದ್ದು ತೆರೆ ಮೇಲೆ ಪುನೀತ್ ರಾಜ್ ಕುಮಾರ್ ಅವರನ್ನು ಕಂಡಂತಹ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಕಣ್ಣೀರನ್ನು ಹಾಕುತ್ತಿದ್ದಾರೆ ಇಂತಹ ಒಳ್ಳೆಯ ಚಿತ್ರವನ್ನು ನಮಗಾಗಿ ಕೊಟ್ಟು ಈ ದಿನ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ ಎಂದು ದುಃಖಿಸುತ್ತಿದ್ದಾರೆ.
ಅದರಲ್ಲೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಗಂಧದ ಗುಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಂತಹ ದೊಡ್ಡ ಮನೆ ಕುಟುಂಬದ ಪ್ರತಿಯೊಬ್ಬ ಸದಸ್ಯರು ಕೂಡ ತಮ್ಮ ಕಣ್ಣಿನಲ್ಲಿ ನೀರನ್ನು ಹಾಕುತ್ತಿದ್ದಾರೆ ತೆರೆ ಮೇಲೆ ಕಂಡಂತಹ ಪುನೀತ್ ರಾಜ್ ಕುಮಾರ್ ಅವರು ತಕ್ಷಣವೇ ಎದ್ದು ಬಂದರೆ ಸಾಕು ಎನ್ನುವಷ್ಟರ ಮಟ್ಟಿಗೆ ಪ್ರತಿಯೊಬ್ಬರಲ್ಲಿಯೂ ಆಸೆ ಇತ್ತು ಆದರೆ ಒಬ್ಬ ಮನುಷ್ಯ ಸತ್ತ ಮೇಲೆ ಮತ್ತೆ ಯಾವತ್ತಿಗೂ ಕೂಡ ಹಿಂದೆ ಬರುವುದಿಲ್ಲ ಅದು ದೇವರ ಆಟ ಎಂದೇ ಹೇಳಬಹುದು ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಂತಹ ಅವರ ಕುಟುಂಬದ ಸದಸ್ಯರು ಮತ್ತು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕೂಡ ಇಂದಿಗೂ ಅವರ ನೆನಪಿನಲ್ಲಿಯೇ ಅವರು ನಡೆಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.