ಬೇಗ ಎದ್ದರೆ ಹಾಗೂ ತಡವಾಗಿ ಎದ್ದರೆ ನಮ್ಮ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆ ಇರುತ್ತೆ ಗೊತ್ತಾ ? ಯಾಕೆ ಬೆಳಿಗ್ಗೆ ಬೇಗ ಏಳಬೇಕು ಪ್ರತಿಯೊಬ್ಬರೂ ತಿಳಿಯಲೆಬೇಕು » Karnataka's Best News Portal

ಬೇಗ ಎದ್ದರೆ ಹಾಗೂ ತಡವಾಗಿ ಎದ್ದರೆ ನಮ್ಮ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆ ಇರುತ್ತೆ ಗೊತ್ತಾ ? ಯಾಕೆ ಬೆಳಿಗ್ಗೆ ಬೇಗ ಏಳಬೇಕು ಪ್ರತಿಯೊಬ್ಬರೂ ತಿಳಿಯಲೆಬೇಕು

ಬೆಳಗ್ಗೆ ಬೇಗ ಏಳುವುದು ಏಕೆ ಜರೂರಿಯಾಗಿದೆ!!
ಬೆಳಗ್ಗೆ ತಡವಾಗಿ ಏಳುವುದರಿಂದ ಹಾಗೂ ಬೆಳಗ್ಗೆ ಹೊತ್ತು ನಿದ್ದೆ ಮಾಡುವುದರಿಂದ ನಮ್ಮ ದೇಹಕ್ಕೆ ಆಗುವ ದುಷ್ಪರಿಣಾಮಗಳು ಅಥವಾ ನಮ್ಮ ಆರೋಗ್ಯದ ಮೇಲೆ ಆಗುವಂತಹ ದುಷ್ಪರಿಣಾಮಗಳು ಯಾವುವು? ಬೆಳಗ್ಗೆ ಹೊತ್ತು ತಡವಾಗಿ ಏಳುವುದರಿಂದ ನಮಗೆ ಉಲ್ಲಾಸವು ಕಡಿಮೆಯಾಗುತ್ತದೆ ಹಾಗೂ ಉಲ್ಲಾಸ ಇಲ್ಲದೆ ಯಾವುದೇ ಮನುಷ್ಯನು ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ಸಾಧನೆಯನ್ನು ಮಾಡದ ಮನುಷ್ಯ ಇದ್ದರೂ ಸತ್ತಂತೆ. ಬೆಳಗ್ಗೆ ತಡವಾಗಿ ಏಳುವುದರಿಂದ ನಮ್ಮಲ್ಲಿರುವ ಪ್ರಾಣಶಕ್ತಿಯು ತಗುತ್ತಾ ಹೋಗುತ್ತದೆ ಹಾಗೂ ನಿಷ್ಕ್ರಿಯ ಹಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಪ್ರಾಕೃತಿಕವಾಗಿ ಎಲ್ಲಾ ಪ್ರಾಣಿಗಳು ಕೂಡ ಸೂರ್ಯೋದಯದ ಮುಂಚೆ ಏಳುತ್ತವೆ ಆದರೆ ಮನುಷ್ಯ ಮಾತ್ರ ತಡವಾಗಿ ಎದ್ದು ಪ್ರಕೃತಿ ಧರ್ಮಕ್ಕೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಬೆಳಗ್ಗೆ ಬೇಗ ಏಳುವುದರಿಂದ ಪ್ರಾಕೃತಿಕವಾಗಿ ನೈಸರ್ಗಿಕ ಆಮ್ಲಜನಕವನ್ನು ದೇಹವು ಪಡೆದುಕೊಳ್ಳುತ್ತದೆ ಹಾಗೂ ಬೆಳಗಿನ ಸಮಯದಲ್ಲಿ ಪ್ರಾಮಿಕ್ ಶಕ್ತಿಯು ಹೆಚ್ಚಿರುತ್ತದೆ ನಮ್ಮ ದೇಹದ ದಶಪ್ರಾಣಗಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ.

ಬೆಳಗ್ಗೆ ತಡವಾಗಿ ಏಳುವುದರಿಂದ ದೇಹದ ದಶಪ್ರಾಣವೂ ಕಡಿಮೆಯಾಗುತ್ತಾ ಹೋಗುತ್ತದೆ ಈ ದಶಪ್ರಾಣಗಳು ಕಡಿಮೆಯಾಗುತ್ತ ಹೋದಲ್ಲಿ ನಮ್ಮ ಜೀವನದ ಸಾಧನೆಯನ್ನು ಮಾಡಲು ನಮ್ಮ ಪ್ರಾಣಶಕ್ತಿಯು ಸಹಾಯ ಮಾಡುವುದಿಲ್ಲ. ಬೆಳಿಗ್ಗೆ ತಡವಾಗಿ ಏಳುವುದರಿಂದ ನಮ್ಮ ದೇಹದ ವಾತಾಪಿತ್ತಗಳು ಹೆಚ್ಚಾಗುತ್ತದೆ ಏಕೆ ಎಂದರೆ ನಾವು ಬೆಳಗ್ಗೆ ಬೇಗ ಎದ್ದಾಗ ನಮ್ಮ ದೇಹದ ಮಲೀನ ಕೂಡ ಸ್ವಚ್ಛವಾಗುತ್ತದೆ. ನಾವು ಪಿತ್ತಕಾಲದಲ್ಲಿ ಅಥವಾ ವಾತ ಕಾಲದಲ್ಲಿ ಎದ್ದಾಗ ನಮ್ಮ ದೇಹವು ಮಲವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡದೇ ಮಲಬದ್ಧತೆಗೆ ಕಾರಣವಾಗುತ್ತದೆ. ಬೆಳಗಿನ ಮಲವಿಸರ್ಜನೆ ನಮ್ಮ ದೇಹವನ್ನು ಶುದ್ಧವಾಗಿರಲು ಬಹಳ ಮುಖ್ಯವಾಗಿದೆ. ಮಲವಿಸರ್ಜನೆ ಮಾಡುವುದರಿಂದ ನಮ್ಮ ದೇಹದ 300ಕ್ಕು ಹೆಚ್ಚು ಕಾಯಿಲೆಗಳು ದೂರವಾಗುತ್ತವೆ. ಬಹಳ ಜನರಿಗೆ ಮಲಬದ್ಧತೆಯ ಮೂಲ ಕಾರಣವೇ ತಿಳಿದಿರುವುದಿಲ್ಲ. ಮಲಬದ್ಧತೆಯಿಂದ ಆಮವಾಗುತ್ತದೆ, ಆಮವಾಗುವುದರಿಂದ ಹೃದಯ ಕಾಯಿಲೆ, ಲಿವರ್ ಸಮಸ್ಯೆ, ಕಿಡ್ನಿ ಸಮಸ್ಯೆಗಳಂತ ಸಮಸ್ಯೆಗಳು ಬರುತ್ತದೆ. ವಾತ ಪಿತ್ತ ಕಫದ ವಿಕಾರಗಳಿಂದಲೇ ಇನ್ವಾಲೆಂಟರಿ ಫಂಕ್ಷನ್ ಸಮಸ್ಯೆಗಳು ದೇಹದಲ್ಲಿ ಹೆಚ್ಚಾಗುತ್ತದೆ. ಇನ್ ವಾಲೆಂಟರಿ ಫಂಕ್ಷನ್ಗಳು ನಿಷ್ಕ್ರಿಯೆ ಆದಾಗ ಆಟೋ ಇಮ್ಮಯುನ್ ರೋಗಗಳು ಹೆಚ್ಚಾಗುತ್ತದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಬೆಳಗ್ಗೆ ಏಳುವುದರಿಂದ ಮನಸ್ಸಿನ ಶಕ್ತಿಯು ಕೂಡ ಕುಗ್ಗುತ್ತದೆ. ಬೆಳಗ್ಗೆ ಏಳುವುದರಿಂದ ನಮ್ಮ ಮನಸ್ಸು ಹೆಚ್ಚು ಸಾತ್ವಿಕವಾಗಿರುತ್ತದೆ ಯಾರ ಮನಸ್ಸು ಹೆಚ್ಚು ಸಾತ್ವಿಕವಾಗಿರುತ್ತದೋ ಅವರ ಸಂಕಲ್ಪಗಳು ದೃಢವಾಗಿರುತ್ತವೆ. ಬೆಳಗ್ಗೆ ತಡವಾಗಿ ಏಳುವುದರಿಂದ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಹಾಗೂ ಡಿಪ್ರೆಶನ್, ಟೆನ್ಶನ್, ಸಿಟ್ಟು ಇಂತಹ ಮನೋರೋಗಗಳು ಹೆಚ್ಚಾಗುತ್ತದೆ. ಅದಲ್ಲದೆ ನಮ್ಮ ದೇಹದ ಆಯಸ್ಸು ಕೂಡ ಕಡಿಮೆಯಾಗುತ್ತದೆ. ತಡವಾಗಿ ಏಳುವುದರಿಂದ ನೂರಾರು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಹಾಗಾಗಿ ನಾವು ಬೆಳಗ್ಗೆ ಬೇಗ ಏಳುವುದನ್ನು ರೂಢಿ ಮಾಡಿಕೊಳ್ಳಬೇಕು.

[irp]


crossorigin="anonymous">