ಉಡುಸಲಮ್ಮ ದೇವಿಯ ನೈಜ ವಿಸ್ಮಯ ಕೆಲಸ ಆಗುತ್ತೆ ಆಗೊಲ್ಲ ಕಲ್ಲಿನ ಮೂಲಕವೇ ಭವಿಷ್ಯ ತಿಳಿಯಬಹುದು...ಹರಕೆ ಕಟ್ಟಿದರೆ ಸಾಕು - Karnataka's Best News Portal

ಉಡಸಲಮ್ಮ ತಾಯಿ, ಅಂದುಕೊಂಡ ಹರಕೆ ಆಗುತ್ತೆ ಎಂದರೆ ಕೂತ ಕಲ್ಲು ತಿರುಗುತ್ತೆ!!ಸ್ನೇಹಿತರೆ ದೇವರನ್ನು ಭಕ್ತಾದಿಗಳು ಭಕ್ತಿಯಿಂದ ಪೂಜಿಸಿ ಬೇಡಿಕೆಗಳನ್ನು ಇಟ್ಟು ಅವರ ಕಷ್ಟಗಳನ್ನು ದೇವರಲ್ಲಿ ಬೇಡಿಕೊಳ್ಳುವುದು ಪ್ರಾಪಂಚಿಕ ನಂಬಿಕೆಯಾಗಿದೆ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ತರಹದ ವಿಶೇಷ ಶೈಲಿಯ ವಾಡಿಕೆಗಳು ರೂಡಿಯಲ್ಲಿದೆ. ಹಾಗೆ ಜನರ ನಂಬಿಕೆಯಂತೆ ದೇವರ ಶಕ್ತಿಗಳು ಜನರನ್ನು ಕಾಪಾಡುತ್ತಾ, ಕಷಗಳನ್ನು ಈಡೆರಿಸುತ್ತಿದೆ. ಸ್ನೇಹಿತರೆ ಇಂದು ನಾವು ಹೀಗೆ ವಿಶೇಷವಾದ ಭಕ್ತರನ್ನು ಕಾಯುತ್ತಿರುವ ಒಂದು ದೇವಿಯ ಬಗ್ಗೆ ತಿಳಿಯೋಣ ಹಾಗೂ ಅಲ್ಲಿರುವಂತಹ ರೂಢಿಗಳನ್ನು ನೋಡೋಣ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹತ್ತಿರ ಇರುವ ಒಂದು ಗ್ರಾಮದಲ್ಲಿ ಈ ಉಡುಸಲಮ್ಮ ದೇವತೆಯು ಭಕ್ತರನ್ನು ಹಾಗೂ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಿದ್ದಾಳೆ. ಇಲ್ಲಿ ಭಕ್ತರು ಅಂದುಕೊಂಡಿದ್ದನ್ನು ನೆನೆದು ಒಂದು ಕಲ್ಲಿನ ಮೇಲೆ ನಿಂತುಕೊಳ್ಳಬೇಕು, ಅಂದುಕೊಂಡಿದ್ದು ಆಗುವುದಾದರೆ ಕಲ್ಲು ತಿರುಗುತ್ತದೆ, ಅಂದುಕೊಂಡಿದ್ದು ಆಗದಿದ್ದಲ್ಲಿ ಕಲ್ಲು ತಿರುಗುವುದಿಲ್ಲ.

ಈ ದೇವಸ್ಥಾನವು ಶಿರಾ ಚಿತ್ರದುರ್ಗ ಹೆದ್ದಾರಿಯಲ್ಲಿ ಹೋಗುವಾಗ ಸರ್ವಿಸ್ ರೋಡಿನಲ್ಲಿ ಎಡ ಬದಿಯಲ್ಲಿ ಸಿಗುತ್ತದೆ. ಇದು ಸುಮಾರು ಶಿರಾದಿಂದ 10 ಕಿ.ಮೀ ದೂರದಲ್ಲಿದೆ. ಇದು ದ್ವರಾಳು ಎಂಬ ಗ್ರಾಮದಲ್ಲಿ ನೆಲೆಸಿದೆ. ಈ ದೇವರು ಹೆಚ್ಚು ಶಕ್ತಿಯುಳ್ಳ ದೇವರಾಗಿದೆ, ಈ ದೇವರಿಗೆ ಹೆಚ್ಚು ಭಕ್ತಾದಿಗಳು ಪ್ರಪಂಚದಾದ್ಯಂತ ಇದ್ದಾರೆ, ಹಾಗಾಗಿ ಪ್ರತಿ ನಿತ್ಯವೂ ಭಕ್ತಾರು ಇಲ್ಲಿಗೆ ಬರುತ್ತಾರೆ. ಇಲ್ಲಿಯ ದೇವಸ್ಥಾನಕ್ಕೆ ಯಾವ ಪೂಜಾರಿಯು ಇಲ್ಲದಿರುವುದು ವಿಶೇಷವಾಗಿದೆ. ಇನ್ನು ವಿಷಯವೆಂದರೆ ಇಲ್ಲಿ ವಿಶೇಷವಾದ ದಿನದಂದು ಮೊಸರನ್ನದ ರಾಶಿಯನ್ನು ಜನರು ಹಾಕುತ್ತಾರೆ. ಇಲ್ಲಿ ಜಾತಿ ಧರ್ಮಗಳ ಬೇಧ ಭಾವವಿಲ್ಲದೆ ಜನರು ತಮ್ಮ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಇಲ್ಲಿ ಬರುವ ಭಕ್ತರಿಗೆ ತಾಯಿ ಉಡುಸಲಮ್ಮ ಇಷ್ಟಾರ್ಥಗಳನ್ನು 101 ಪರ್ಸೆಂಟ್ ನೆರವೇರಿಸಿದ್ದಾರೆ.

ಸ್ನೇಹಿತರೆ ಈ ದೇವರಿಗೆ ಯಾವುದೇ ತರಹದ ಗುಡಿಯು ಇರುವುದಿಲ್ಲ ಇದರ ಬಗ್ಗೆ ಒಂದು ಕಥೆಯೇ ಇದೆ. ಒಂದು ದಿನ ದೇವರಿಗಾಗಿ ಗುಡಿಯನ್ನು ಕಟ್ಟಿರುತ್ತಾರೆ, ಆದರೆ ಬೆಳಗ್ಗೆ ಎದ್ದು ನೋಡಿದರೆ ಗುಡಿಯು ಬಿದ್ದು ಹೋಗಿರುತ್ತದೆ ಹಾಗೂ ತಾಯಿಯೂ ಪ್ರತ್ಯಕ್ಷವಾಗಿ ನನಗೆ ಗುಡಿಯು ಬೇಡ, ನಾನು ಹೀಗೆ ಇರಲು ಇಷ್ಟಪಡುತ್ತೇನೆ ಎಂದು ಹೇಳುತ್ತಾಳೆ. ಆಗಿನಿಂದಲೂ ಕೂಡ ಈ ತಾಯಿಗೆ ಯಾವುದೇ ತರಹದ ಗುಡಿಯು ಇರುವುದಿಲ್ಲ. ಬದಲಿಗೆ ಒಂದು ಆಲದ ಮರದ ನೆರಳು ಇದೆ. ಹಾಗೆ ಇಲ್ಲಿ ಮಂಗಳವಾರ ಹಾಗೂ ಶುಕ್ರವಾರದಂದು ಭಕ್ತಾದಿಗಳ ಸಾಗರವೇ ಇಲ್ಲಿ ಹರಿದು ಬರುತ್ತದೆ ಇಲ್ಲಿ ಹರಕೆ ತೀರಿಸಲು ಕೋಳಿ ಹಾಗೂ ಕುರಿಗಳನ್ನು ಕಡಿಯುವ ವಾಡಿಕೆಯು ರೂಢಿಯಲ್ಲಿದೆ. ಜೊತೆಗೆ ಇಲ್ಲಿ ಕಡಿದ ಕುರಿ ಕೋಳಿಯನ್ನು ಅಡುಗೆ ಮಾಡಿ ಊಟವನ್ನು ಬಡಿಸುತ್ತಾರೆ. ಹಸಿರು ಬಟ್ಟೆಯಲ್ಲಿ ಅಕ್ಕಿಯನ್ನು ಗಂಟುಕಟ್ಟಿ ದೇವರ ಮುಂದೆ ಕಟ್ಟುವುದು ಇಲ್ಲಿನ ಅಭ್ಯಾಸವಾಗಿದೆ. ಇದು ಮನೆಗೆ ಒಳ್ಳೆಯದನ್ನು ಮಾಡುತ್ತದೆ ಎಂಬ ನಂಬಿಕೆ ಇದೆ.

Leave a Reply

Your email address will not be published. Required fields are marked *