ನಮ್ಮನ್ನು ಯಾಕೆ ಪಾಕಿಸ್ತಾನಿ ತರ ನೊಡ್ತೀರಿ ನಾನು ನಿಮ್ಮವನೇ ಅಲ್ವಾ ಅಂದಿದ್ಯಾಕೆ ಸಿಂಹ..? ಸಿಂಹನ ಬಗ್ಗೆ ಅಪರೂಪದ ಮಾಹಿತಿ ಇಲ್ಲಿದೆ ನೋಡಿ - Karnataka's Best News Portal

ಸಿಂಹ ಈ ರೀತಿ ಹೇಳಿಕೆ ಕೊಟ್ಟಿದ್ದು ಅಂದ್ರೆ ಆ ಜೀವ ಅದೆಷ್ಟು ನೊಂದಿರಬೇಡ….||ಭಾರತೀಯ ಚಿತ್ರರಂಗದ ಫಿನಿಕ್ಸ್ ಪಕ್ಷಿ ಎಂಬ ಬಿರುದು ಚಿತ್ರರಂಗದಲ್ಲಿ ಯಾರಿಗಾದರೂ ಇತ್ತು ಎಂದರೆ ಅದು ನಿಶ್ಚಿತವಾಗಿ ಕೇವಲ ಸಾಹಸ ಸಿಂಹ ಅಭಿನಯ ಭಾರ್ಗವ ದಾದಾ ಹೀಗೆ ಮುಂತಾದ ಹೆಸರುಗಳಿಂದ ಪ್ರಸಿದ್ಧಿಯಾಗಿದಂತಹ ನಮ್ಮ ಕನ್ನಡದ ಹೆಮ್ಮೆಯ ನಟರಾಗಿದ್ದಂತಹ ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಮಾತ್ರ ಫಿನಿಕ್ಸ್ ಪಕ್ಷಿ ಬೆಂಕಿಯಲ್ಲಿ ಪೂರ್ಣವಾಗಿ ಸುಟ್ಟುಹೋದರು ಕೂಡ ಮತ್ತೆ ಆ ಬೂದಿಯಿಂದಲೇ ಅದು ತನ್ನ ಮರು ಜೀವವನ್ನು ಪಡೆದು ಮೇಲೆದ್ದು ನಿಲ್ಲುವಂತಹ ಗುಣ ಹೊಂದಿದೆ ಅದೇ ರೀತಿ ಡಾಕ್ಟರ್ ವಿಷ್ಣುವರ್ಧನ್ ಅವರು ಕೂಡ ತಮ್ಮ ಜೀವನದಲ್ಲಿ ಅನೇಕ ಸೋಲು ಅಪಮಾನವನ್ನು ಕಂಡರೂ ಕೂಡ ಅವೆಲ್ಲವನ್ನು ಮೀರಿ ಮೇಲೆದ್ದು ನಿಂತವರು ಭಾರತೀಯ ಚಿತ್ರರಂಗದಲ್ಲಿ ಟಾಪ್ 10 ದಿ ಮೋಸ್ಟ ಹ್ಯಾಂಡ್ಸಮ್ ಹೀರೋಗಳ ಸಾಲಿನಲ್ಲಿ ವಿಷ್ಣುವರ್ಧನ್ ಅವರ ಹೆಸರು ಕೂಡ ಇದ್ದೇ ಇರುತ್ತಿತ್ತು.

ಕನ್ನಡ ಚಿತ್ರರಂಗದಲ್ಲಿ ಸುಮಾರು 40 ವರ್ಷಗಳ ದೀರ್ಘ ಸಮಯಗಳ ಕಾಲ ತಮ್ಮ ನಟನೆಯ ಛಾಪನ್ನು ಮೂಡಿಸಿ ಹೊಸ ಹೊಸ ಅಪೂರ್ವ ದಾಖಲೆಗಳನ್ನು ಬರೆದು ಬಹುಬೇಗ ಕಣ್ಮರೆಯಾಗಿ ಹೋದಂತಹ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿಯದ ಕೆಲವೊಂದಷ್ಟು ಆಸಕ್ತಿಕರ ವಿಷಯಗಳ ಬಗ್ಗೆ ಮತ್ತು ಅಪರೂಪದ ಸಂಗತಿಗಳ ಬಗ್ಗೆ ಈ ದಿನ ತಿಳಿಯೋಣ. ಡಾಕ್ಟರ್ ವಿಷ್ಣುವರ್ಧನ್ ಅವರು ಮೂಲತಹ ಮೈಸೂರಿನವರು ಅವರು ಹೆಚ್ಎಲ್ ನಾರಾಯಣ್ ರಾವ್ ಹಾಗೂ ಕಾಮಾಕ್ಷಮ್ಮ ಎಂಬ ದಂಪತಿಗಳ ಕಿರಿಯ ಮಗನಾಗಿ 1950ರ ಸೆಪ್ಟೆಂಬರ್ 17ರಂದು ಜನಿಸುತ್ತಾರೆ ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್ ಇವರ ತಂದೆಯವರಾದ ಹೆಚ್ ಎಲ್ ನಾರಾಯಣ್ ರಾವ್ ಅವರು ಸ್ಟೇಜ್ ಕಲಾವಿದರು.

ಮ್ಯೂಸಿಕ್ ಕಂಪೋಸರ್ ಹಾಗೂ ರೈಟರ್ ಕೂಡ ಆಗಿದ್ದರು ಅದರಲ್ಲೂ 1962ರಲ್ಲಿ ತೆರೆಕಂಡಂತಹ ವಿಧಿ ವಿಲಾಸ ಚಿತ್ರಕ್ಕೆ ಚಿತ್ರಕಥೆ ಸಂಭಾಷಣೆ ಹಾಗೂ ಹಾಡುಗಳ ಲಿರಿಕ್ಸ್ ಗಳನ್ನು ಕೂಡ ಸ್ವತಹ ತಾವೇ ಬರೆದಿದ್ದರೂ ಉತ್ತಮ ಸಂಗೀತ ವಿದ್ವಾಂಸರು ಹಾಗೂ ಸಂಗೀತ ವಾದಕರು ಆಗಿದ್ದಂತಹ ಅವರ ಬಳಿ ಅನೇಕ ಸಂಗೀತದ ಉಪಕರಣಗಳು ಸಹ ಇದ್ದವು ಇವರಿಗೆ ರವಿ ಎಂಬ ಹಿರಿಯ ಸಹೋದರ ಕೂಡ ಇದ್ದರು ಹಾಗೂ ಇವರ ಸಹೋದರಿಯಲ್ಲಿ ಒಬ್ಬರಾದಂತಹ ರಮಾ ಎನ್ನುವವರು ಮೈಸೂರಿನ ಅರಮನೆಯಲ್ಲಿ ಖತಕ್ ನೃತ್ಯ ಗಾರ್ತಿಯು ಕೂಡ ಆಗಿದ್ದರು ಅನೇಕರಿಗೆ ಗೊತ್ತಿರುವಂತೆ ಡಾಕ್ಟರ್ ವಿಷ್ಣುವರ್ಧನ್ ಅವರು 1972 ರಲ್ಲಿ ತೆರೆಕಂಡಂತಹ ನಾಗರಹಾವು ಚಿತ್ರದಿಂದ ಖ್ಯಾತಿಯನ್ನು ಪಡೆಯುತ್ತಾರೆ ಇದೇ ಅವರು ಮೊದಲನೆಯದಾಗಿ ನಟಿಸಿದಂತಹ ಚಿತ್ರ ಎಂದು ಹಲವಾರು ಜನ ಭಾವಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *