ವಾರಕ್ಕೆ ಒಮ್ಮೆ ಈ ರೀತಿ ತಲೆ ಕೂದಲಿಗೆ ಮಾಡಿ.ತಲೆ ಸ್ನಾನಕ್ಕೂ 15 ನಿಮಿಷ ಮುಂಚೆ ಹೀಗೆ ಮಾಡಿದರೆ ಸಾಕು ಕೂದಲು ದಟ್ಟವಾಗಿ ಬೆಳೆಯುತ್ತೆ,ಕೂದಲು ಉದುರೋದಿಲ್ಲ - Karnataka's Best News Portal

ಕೂದಲಿನ ಆರೋಗ್ಯಕ್ಕೆ ಅದ್ಭುತವಾದ ಮನೆಮದ್ದು…
ದಟ್ಟವಾದ, ಉದ್ದವಾದ ಕಡು ಕಪ್ಪು ಬಣ್ಣದ ಶೈನಿಂಗ್ ಹೇರ್ ಹೊಂದುವುದು ಎಲ್ಲರ ಆಸೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ನಮ್ಮ ಆಹಾರ ಪದ್ಧತಿ ಹಾಗೂ ಆಧುನಿಕ ಜೀವನಶೈಲಿ ಇಂತಹ ಕಾರಣಗಳಿಂದ ಈ ರೀತಿ ಆರೋಗ್ಯಕರವಾದ ಸೋಂಪಾದ ತಲೆ ಕೂದಲು ಇರುವುದು ಬಹಳ ಅಪರೂಪ. ಆದರೆ ಹೆಣ್ಣು ಮಕ್ಕಳಿಗೆ ತಲೆ ಕೂದಲಿನ ಬಗ್ಗೆ ವಿಪರೀತ ವ್ಯಾಮೋಹ ಇರುವುದರ ಜೊತೆಗೆ ಕೂದಲು ಸೌಂದರ್ಯಕ್ಕೆ ಲಕ್ಷಣ ಆಗಿರುವುದರಿಂದ ಎಲ್ಲರೂ ಕೂಡ ಇಂತಹ ಆರೋಗ್ಯಕರ ಕೂದಲು ಬೆಳೆಸುವುದಕ್ಕೆ ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ಯಾವುದೇ ಎಣ್ಣೆ ಹಚ್ಚಿದರೂ ಶಾಂಪೂ ಬದಲಾಯಿಸಿದರು ಇನ್ನೇನೆ ಕಸರತ್ತು ಮಾಡಿದ ಮೇಲೂ ಪ್ರಯೋಜನ ಆಗುತ್ತಿಲ್ಲ ಎನ್ನುವುದಾದರೆ ಸುಲಭವಾದ ಈ ಒಂದು ಉಪಾಯ ಮಾಡಿ ನೋಡಿ. ನಮ್ಮ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕೆಲವೊಂದು ಮನೆಮದ್ದುಗಳನ್ನು ತಯಾರಿಸಿಕೊಂಡು ಅವುಗಳನ್ನು ಹಚ್ಚುವುದರಿಂದ ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದಾಗುತ್ತದೆ.

ಅಂತಹ ಮನೆಮದ್ದುಗಳಲ್ಲಿ ಈ ಮನೆ ಮದ್ದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅತಿ ಶೀಘ್ರದಲ್ಲೇ ನಿಮ್ಮ ಕೂದಲಿನ ಸಮಸ್ಯೆ ಪರಿಹರಿಸಿ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ, ಮೊದಲಿಗೆ ಮೂರು ಚಮಚದಷ್ಟು ನಿಮ್ಮ ಮನೆಯಲ್ಲಿ ಟೀ ಮಾಡಲು ಉಪಯೋಗಿಸುವ ಯಾವುದೇ ಬ್ರಾಂಡಿನ ಟೀ ಪುಡಿಯನ್ನು ತೆಗೆದುಕೊಳ್ಳಿ ಅದಕ್ಕೆ ನೀರು ಹಾಕಿ ಚೆನ್ನಾಗಿ ಕುದಿಸಿ ಡಿಕಾಕ್ಷನ್ ತಯಾರಿಸಿ. ಅದನ್ನು ಶೋಧಿಸಿಕೊಂಡು ಡಿಕಾಕ್ಷನ್ ಗೆ ನೀವು ದಿನನಿತ್ಯ ಬಳಸುವ ಶಾಂಪುವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎರಡು ಚೆನ್ನಾಗಿ ಬೆರೆತ ಬಳಿಕ ಒಂದು ನಿಂಬೆಹಣ್ಣು ತೆಗೆದುಕೊಂಡು ಅದನ್ನು ಪೂರ್ತಿಯಾಗಿ ಅದಕ್ಕೆ ಹಿಂಡಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಎ ಮತ್ತು ಸಿ ಪ್ರಮಾಣ ಹೆಚ್ಚಾಗಿ ಇರುತ್ತದೆ ಇದು ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯ ಒಳ್ಳೆಯದು ಅದೇ ರೀತಿ ಇದು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.

ಎಲ್ಲವನ್ನು ಮತ್ತೊಮ್ಮೆ ಮಿಕ್ಸ್ ಮಾಡಿದ ಬಳಿಕ ಈಗ ಈ ಅದ್ಭುತವಾದ ಔಷಧಿಯನ್ನು ಕೂದಲಿಗೆ ಹಚ್ಚಿ 15 ವರ್ಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿರಿ. ನೀವು ಎಷ್ಟೇ ಬ್ಯುಸಿ ಇದ್ದರೂ ಕೂಡ ಕನಿಷ್ಠ ವಾರಕ್ಕೆ ಎರಡು ಬಾರಿ ಆದರೂ ಈ ರೀತಿ ಮನೆ ಮದ್ದು ತಯಾರಿಸಿ ಉಪಯೋಗಿಸಿದರೆ ಕೂದಲಿನ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ವಿಪರೀತ ಕೂದಲು ಉದುರುವುದು, ಕೂದಲು ಕವಲು ಹೊಡೆಯುವುದು, ಬಿಳಿ ಕೂದಲು, ಡ್ಯಾಂಡ್ರಫ್, ತಲೆನೋವು ಇನ್ನು ಮುಂತಾದ ಅನೇಕ ಸಮಸ್ಯೆಗಳಿಗೆ ಔಷಧಿಯಾಗಿ ಈ ಮನೆ ಮದ್ದು ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *