ಹರಕೆಗಳನ್ನು ಮಾಡಿಕೊಳ್ಳುವ ಮುನ್ನ ಸಾವಿರ ಸಲ ಯೋಚನೆ ಮಾಡಿ ಇಲ್ಲವೆಂದರೆ ಗೊತ್ತಿಲ್ಲದೆ ಇಂತಹ ಕಷ್ಟಗಳಿಗೆ ಗುರಿಯಾಗ್ತೀರಾ..? - Karnataka's Best News Portal

ಹರಕೆಗಳನ್ನು ಮಾಡುವ ಮುನ್ನ ಸಾವಿರ ಸಲ ಯೋಚಿಸಿ ಮಾಡಿ ಇಲ್ಲ ಅಂದರೆ ಗೊತ್ತಿಲ್ಲದೆ ಇಂತಹ ಕಷ್ಟಗಳಿಗೆ ಗುರಿಯಾಗುತ್ತಾರೆ!!ಬಹಳ ಹಿಂದಿನ ಕಾಲದಿಂದಲೂ ಈ ಒಂದು ವಿಧಾನ ನಮ್ಮ ಮನೆತನಗಳಲ್ಲಿ ನಡೆದುಕೊಂಡು ಬಂದಿದ್ದು ಇದರ ಮುಖಾಂತರ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟಗಳನ್ನು ಹೀಗೆ ಹರಕೆ ಹೊತ್ತು ನಿವಾರಣೆ ಮಾಡಿ ಕೊಳ್ಳುತ್ತಿದ್ದರು ಅದರಂತೆಯೇ ಇವರು ಹರಕೆಯನ್ನು ಹೊತ್ತ ನಂತರ ಹರಕೆಯನ್ನು ತೀರಿಸುವುದಕ್ಕೋಸ್ಕರ ಆ ದೇವರ ಬಳಿ ಹೋಗಿ ನೀವು ಹರಕೆ ಹೊತ್ತಿದ್ದಂತಹ ಕೆಲವೊಂದು ಪದಾರ್ಥಗಳನ್ನಾಗಲಿ ಹೆಣ್ಣು ದೇವರಾ ದರೆ ಸೀರೆಗಳನ್ನು ಹೀಗೆ ಹರಕೆಯ ಪದಾರ್ಥಗಳನ್ನು ಆ ದೇವರಿಗೆ ಒಪ್ಪಿಸಿ ನಂತರ ಹರಕೆ ಮುಗಿಯಿತು ಎಂದು ದೇವರ ಪೂಜೆ ಮಾಡಿಸಿ ನಂತರ ಬರುತ್ತಿದ್ದರು ಅದರಲ್ಲೂ ಬಹಳ ಹಿಂದಿನ ಕಾಲದಲ್ಲಿ ಹರಕೆಯನ್ನು ಮಾಡುವುದಕ್ಕೂ ಮುನ್ನ ಮನೆಯನ್ನು ಶುಚಿಯಾಗಿ ಶುದ್ಧ ಮಾಡಿ ಮನೆಯ ದೇವರ ಕೋಣೆಯಲ್ಲಿ ಯಾವ ದೇವರಿಗೆ ಹರಕೆಯನ್ನು ಮಾಡುತ್ತಿರುತ್ತೀರೋ.

ಆ ದೇವರ ಹೆಸರನ್ನು ಹೇಳಿ ಒಂದು ಬಿಳಿ ಬಟ್ಟೆಯನ್ನು ಹರಿಶಿನ ಮಾಡಿ ಅದಕ್ಕೆ ಕಾಣಿಕೆ ಎಂದು ಕಟ್ಟುವುದರ ಮುಖಾಂತರ ತಮ್ಮ ಹರಕೆಯನ್ನು ಮಾಡಿಕೊಳ್ಳುತ್ತಿ ದ್ದರು ತದನಂತರ ಅದನ್ನು ನೆನಪಿನಲ್ಲಿಟ್ಟುಕೊಂಡು ಹರಕೆಯನ್ನು ತೀರಿಸಬೇಕು ಎಂದು ಕೆಲಸ ಆದ ಬಳಿಕ ಆ ದೇವಾಲಯಗಳಿಗೆ ಹೋಗಿ ಆ ಹಣವನ್ನು ದೇವರಿಗೆ ಹರಕೆಯ ಮುಖಾಂತರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಒಪ್ಪಿಸಿ ಬರುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಚಿಕ್ಕ ಪುಟ್ಟ ಕಷ್ಟ ಬಂದರೂ ಕೂಡ ಹರಕೆಯನ್ನು ಮಾಡಿಕೊಳ್ಳುತ್ತಾರೆ ಆದರೆ ಅವರು ಈ ಒಂದು ವಿಧಾನಗಳನ್ನು ಅನುಸರಿಸುವು ದಿಲ್ಲ ಬದಲಾಗಿ ಕೂತ ಕಡೆಯಲ್ಲೇ ನಿಂತ ಕಡೆಯಲ್ಲಿ ಯೇ ಹಾಗೂ ಕೆಲವೊಂದಷ್ಟು ದೇವಸ್ಥಾನಗಳಿಗೆ ಹೋದರೆ ಅಲ್ಲಿಯೇ ಹರಕೆಯನ್ನು ಮಾಡಿಕೊಂಡು ಬರುತ್ತಾರೆ ಆದರೆ ಅದು ತಪ್ಪು ಬದಲಾಗಿ ಹರಕೆಯನ್ನು ಮಾಡುವ ಮುನ್ನ ನಿಮ್ಮ ಮನೆಯಲ್ಲಿ ಆ ದೇವರ ಹೆಸರನ್ನು ಹೇಳಿ ಅದನ್ನು ಹರಕೆ ಮಾಡಿಕೊಳ್ಳಬೇಕು.

ಬದಲಾಗಿ ಕೇವಲ ಬಾಯಿ ಮಾತಿನಲ್ಲಿ ಹೇಳಿಕೊಂಡು ಬಂದರೆ ಅದು ತಪ್ಪು ಅದರಲ್ಲೂ ಕೆಲವೊಬ್ಬರು ಹರಕೆಯನ್ನು ಮಾಡಿಕೊಂಡು ಬಂದಿರುತ್ತಾರೆ ಆದರೆ ಅದನ್ನು ತೀರಿಸುವುದನ್ನೆ ಮರೆತಿರುತ್ತಾರೆ ಇದರಿಂದ ಹಲವಾರು ರೀತಿಯಾದಂತಹ ಕಷ್ಟ ನಷ್ಟ ತೊಂದರೆ ಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದಲೇ ನಿಮ್ಮ ಕೈಲಾದಷ್ಟು ಮಟ್ಟಿಗೆ ನೀವು ಹರಕೆಯನ್ನು ಮಾಡುತ್ತೇನೆ ಎಂದು ಹೇಳಿಕೊಳ್ಳಿ ಬದಲಾಗಿ ಹಣ ಕಾಸು ಆಗಿರಬಹುದು ಚಿನ್ನ ಹೀಗೆ ಬೆಲೆ ಬಾಳುವಂತಹ ವಸ್ತುಗಳನ್ನು ಹರಕೆಯ ರೂಪದಲ್ಲಿ ಕೊಡುತ್ತೇನೆ ಎಂದು ಹರಕೆಯನ್ನು ಹೊತ್ತುಕೊಳ್ಳಬಾರದು ನಿಮ್ಮ ಶಕ್ತಿಗೆ ಮೀರಿ ಹರಕೆಯನ್ನು ಮಾಡಿಕೊಳ್ಳುವುದು ತಪ್ಪು ಬದಲಾಗಿ ನಿಮ್ಮ ಕೈಲಾದಷ್ಟು ಹರಕೆಯನ್ನು ತೀರಿಸುತ್ತೇನೆ ಎಂದು ಹೇಳಿಕೊಂಡು ಆ ದೇವರಲ್ಲಿ ನಂಬಿಕೆಯನ್ನು ಇಟ್ಟು ಬರುವುದು ಬಹಳ ಮುಖ್ಯ ವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *