ಅಂದು ಯಾರಿಗೂ ಬೇಡವಾಗಿದ್ದ ಕ್ರಾಕ್ಸ್ ಇಂದು ಭಾರತೀಯ ಹುಡುಗರ ಹಾಟ್ ಫೇವರೆಟ್ ಇದರ ಟರ್ನ್ ಓವರ್ ಕೇಳಿದ್ರೆ ನಿಮ್ಮ ತಲೆ ತಿರುಗುತ್ತದೆ.. - Karnataka's Best News Portal

ಅಂದು ಯಾರಿಗೂ ಬೇಡವಾದ ಕ್ರಾಕ್ಸ್ ಇಂದು ಭಾರತೀಯ ಹುಡುಗರ ಹಾಟ್ ಫೇವರೇಟ್..2002ರ ಸಮಯದಲ್ಲಿ ಕ್ರಾಕ್ಸ್ ಸಂಸ್ಥೆಯ ಶೂಗಳು ವಿದೇಶಗಳಲ್ಲಿ ಬಹಳವೇ ಫೇಮಸ್ ಆಗಿದ್ದವು.ಇವು ನೋಡಲು ಅಷ್ಟೇನೂ ಆಕರ್ಷಿಕವಾಗಿಯೂ ಇಲ್ಲ ಅನ್ನೋದು ಸಾಮಾನ್ಯ ಜನರ ಅಭಿಪ್ರಾಯವಾಗಿತ್ತು. ಆಗ ಅನೇಕ ಪಾಪ್ ತಾರೆಯರು ಹಾಗೂ ಸಿನಿಮಾ ಸೆಲೆಬ್ರಿಟಿಗಳು ಇತರೆ ಗಣ್ಯರೆಲ್ಲ ಹೆಚ್ಚು ಇದೇ ಶ್ಯೂಗಳನ್ನು ಧರಿಸಲು ಇಚ್ಚಿಸುತ್ತಿದ್ದರು.ಇದೇ ಕಾರಣಕ್ಕೆ ಕ್ರಾಕ್ಸ್ ಸಂಸ್ಥೆಯು ಆಗ ಮಲ್ಟಿ ಬಿಲಿಯನ್ ಗಳಷ್ಟು ಟರ್ನ್ಓವರ್ ಸಾಧಿಸುವ ಬ್ರಾಂಡ್ ಆಗಿತ್ತು ಶೂ ತಯಾರಿಕೆಯಲ್ಲಿ ಏನೇನು ಸಹ ಅನುಭವವಿಲ್ಲದ ಕ್ರಾಕ್ಸ್ ಸಂಸ್ಥೆಯ ಮಾಲೀಕರು ಇಷ್ಟು ಲಾಭದಾಯಕ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಹೇಗೆ ಎಂದು ಇವತ್ತಿನ ವಿಡಿಯೋದಲ್ಲಿ ಕ್ರಾಕ್ಸ್ ಸಂಸ್ಥೆಯು ತಾನು ಬೆಳೆದು ಬಂದ ಬಗ್ಗೆ ಹಾಗೂ ಆದರೆ ಯಶಸ್ಸಿನ ಹಲವು ಆಸಕ್ತಿಕರ ಮಜಲುಗಳನ್ನ ಪರಿಚಯಿಸಿಕೊಳ್ಳೋಣ ಬನ್ನಿ.

ಅಂದು 2002ನೇ ಇಸ್ವಿಯ ಒಂದು ದಿನ ಲಿಂಡೋನ್ ಹಾನ್ಸನ್ ಎಂಬ ವ್ಯಕ್ತಿ ಒಬ್ಬ ತನ್ನ ಪತ್ನಿಯಿಂದ ದೂರವಾಗಿ ತನ್ನ ಸ್ನೇಹಿತನ ಮನೆಯಲ್ಲಿ ವಾಸವಿದ್ದ ಇದು ಆತನ ಪಾಲಿಗೆ ದುಸ್ತರದ ಸಮಯ ಕಾರಣ ಅವನು ಇದೇ ಸಮಯದಲ್ಲಿಯೇ ತನ್ನ ಕಂಪ್ಯೂಟರ್ ಹಾರ್ಡ್ವೇರ್ ಕಂಪನಿಯ ಕೆಲಸವನ್ನ ಸಹ ಕಳೆದುಕೊಂಡಿದ್ದ.ಹಾಗೂ ಕ್ಯಾನ್ಸರ್ ಇಂದ ಅವನ ತಾಯಿಯು ಸಹ ವಿಧಿವಶವಾದರೂ ಅವನ ಬದುಕು ಎಲ್ಲಾ ಕಡೆಯಿಂದಲೂ ದುರ್ಬಲವಾಗಿತ್ತು.ಸ್ಕಾಟ್ ಸೀಮಾನ್ಸ್ ಹಾಗೂ ಜಾರ್ಜ್ ಅವರ ದೀರ್ಘ ಸಮಯದ ಗೆಳೆಯರಾಗಿದ್ದರು ಅವರು ತಮ್ಮ ಮಿತ್ರನ ಪರಿಸ್ಥಿತಿಯನ್ನು ಕಂಡು ಅವನ ಮನೋಲಸಕ್ಕಾಗಿ ದೂರದ ಕೇರೇಬಿಯನ್ನ ಕಡೆಗೆ ಒಂದು ಬೋಟ್ ಟ್ರಿಪ್ ಕೈಗೊಂಡರು ಸ್ಕಾಟ್ ಓರ್ವ ಯಶಸ್ವಿ ಇನ್ವೆಂಟ್ರಿ ಆಗಿದ್ದವ ಹಲವು ವಿಧದ ಪ್ರಾಡಕ್ಟ್ಗಳ ತಯಾರಿ ಹಾಗೂ ಅವುಗಳ ಪೇಟೆಂಟ್ ನಲ್ಲಿ ಅವನು ನಿಪುಣನು ಸಹ ಆಗಿದ್ದ.48 ವರ್ಷ ವಯಸ್ಸಿನ ಅವನ ಜೀವನ ಇದರಿಂದಾಗಿ ಸುಗಮವಾಗಿತ್ತು ಅದರಲ್ಲಾಗಲೇ ಆ ಸಮಯಕ್ಕೆ ಅವನು ಸೆಮಿ ನಿವೃತ್ತಿಯನ್ನು ಸಹ ಪಡೆದು ಆರಾಮವಾಗಿ ಜೀವನ ನಡೆಸುತ್ತಿದ್ದ.

ಕೆರೆಬಿಯನ್ ಟ್ರಿಪ್ ಸಮಯದಲ್ಲಿ ಅವನು ತನ್ನ ಹೊಸ ಬ್ಯುಸಿನೆಸ್ ಯೋಜನೆಯೊಂದಿಗೆ ತನ್ನ ಸ್ನೇಹಿತರ ಬಳಿ ಚರ್ಚಿಸುತ್ತಾನೆ. ಅವನಿಗೆ ಅದಾಗಲೇ ತನ್ನ ತಲೆಯಲ್ಲಿ ಹೊಸ ಪ್ರಾಡಕ್ಟ್ ಒಂದರ ಕಲ್ಪನೆ ಹುಟ್ಟಿತ್ತು. ದೈನಂದಿನ ಬಳಕೆಗಾಗಿ ತಾನು ಹೊಸ ವಿಧದ ರಬ್ಬರ್ ಅಥವಾ ಪ್ಲಾಸ್ಟಿಕ್ ಶೂ ಮಾಡಲು ಒಂದನ್ನ ಹೊರ ತರುತ್ತಿದ್ದೇನೆಂದು ಇದರ ಬಿಸಿನೆಸ್ ಗಾಗಿಯೇ ಕೆನಡಾಗು ಸಹ ಹೊರಟಿದ್ದೇನೆಂದು ಕೂಡ ಆತ ತನ್ನ ಸ್ನೇಹಿತರಿಬ್ಬರಿಗೂ ಸಹ ತಿಳಿಸಿದ್ದ.ಸ್ಕಾಟ್ ಈ ಮುನ್ನ 2001ರಲ್ಲಿ ಕೆನೆಡಿಯ ಫೋಮ್ ಬ್ರಾಂಡ್ ಒಂದರ ಮೂಲಕ ತಾನು ಡಿಸೈನ್ ಮಾಡಿದ್ದ ಹೊಸ ಮಾದರಿಯ ಶೂಗಳಿಗೆ ಕ್ರಾಕ್ಸ್ ಎಂದು ಹೆಸರಿಟ್ಟಿದ್ದ. ಮುಂದೆ ಫೋಮ್ ಕ್ರಿಯೇಶನ್ಸ್ ಒಡೆತನದಲ್ಲಿದ್ದ ಈ ಕ್ರಾಕ್ಸ್ ಬ್ರಾಂಡ್ ತಾನು ಬೇರ್ಪಟ್ಟು ಹೊಸದೇ ಬ್ರಾಂಡ್ ಆಗಿ ಕಾಣಿಸಿಕೊಳ್ಳುತ್ತದೆ ಮುಂದೆ 2002 ರಲ್ಲಿ ಇವರು ಮೂವರು ಸೇರಿ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಅದರ ಹೊಸ ಡಿಸೈನ್ ಮಾಡೆಲ್ ಅನು ಫ್ಲೋರಿಡಾದ ಬಳಿ ನಡೆದ ಪೋರ್ಟ್ ಲ್ಯಾಡರ್ ಬೋಟ್ ಶೋನಲ್ಲಿ ಸಾರ್ವಜನಿಕವಾಗಿ ಮೊದಲ ಬಾರಿಗೆ ಅಧಿಕೃತವಾಗಿ ಲಾಂಚ್ ಮಾಡಲಾಗುತ್ತದೆ. ಇದರ ಮೊದಲ ಮಾಡಲ್ಗೆ ಇವರಿಟ್ಟ ಹೆಸರು ಕ್ರಾಕ್ಸ್ ದಿ ಬೀಚ್ ಎಂದು .

ಆರಂಭದಲ್ಲಿ ಇದನ್ನು ಬೋಟರ್ ಹಾಗೂ ಬೋಟರ್ ಪ್ರಿಯಾರಿಗಾಗಿ ಡಿಸೈನ್ ಮಾಡಿ ರಚಿಸಲಾಗಿತ್ತು. ಡಚ್ ಕ್ಲಾಗ್ ಎಂಬ ಸಂಸ್ಥೆಯಿಂದ ಪ್ರಭಾವಿತ ಗೊಂಡು ಬೋಟರ್ಸ್ಗಳು ಧರಿಸಲಿ ಎಂದು ಹೊಸ ಬಗೆಯ ಗ್ರಿಪ್ ಇರುವ ವಾಟರ್ ಪ್ರೂಫ್ ಮೆಟೀರಿಯಲ್ ಗಳನ್ನ ಬಳಸಿ ಫುಟ್ ಪ್ರೋಟೆಕ್ಷನ್ಗಾಗಿ ಈ ಶೂಗಳನ್ನ ತಯಾರಿಸಲಾಗಿತ್ತು. ಡಚ್ ಕ್ಲಾಗ್ ವಿಧಾನವನ್ನೇ ಅನುಸರಿಸಿ ಈ ಶೂ ಗಳನ್ನ ಧರಿಸಲು ಹಾಗೂ ತೆಗೆಯಲು ಈ ಎರಡು ವಿಧದಲ್ಲಿಯೂ ಸರಳವಾಗಿರಲಿ ಎಂದು ರಚಿಸಿದರು. ಇವು ಸಿ ವೋವೆಜ್ ಮಾಡುವವರೆಗೆ ಹಾಗೂ ಏರ್ರೌಂಡ ಗಳಲ್ಲಿ ನಡೆದಾಡಲು ಮತ್ತು ಓಡಲು ಬಹು ಸುಲಭ ಹಾಗೂ ಕನ್ವೀನಿಯಂಟ್ ಆಗಿದ್ದವು ಈ ಬಗೆಯ ಶೂಗಳನ್ನ ನೆಲ ಹಾಗೂ ಸಮುದ್ರ ದ ಬಳಿ ಎರಡು ಕಡೆಯಲ್ಲೂ ಉತ್ತಮವಾಗಿ ಬಳಸಬಹುದಾಗಿ ಇದನ್ನು ತಯಾರಿಸಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

Leave a Reply

Your email address will not be published. Required fields are marked *