ಧನಾಕರ್ಷಣೆ ಹೊಂದಲು ತಾಮ್ರದ ಚೊಂಬಿನಿಂದ ಈ ರೀತಿ ಮಾಡಿ ಸಾಕು…ನಮ್ಮ ಹಿಂದೂ ನಂಬಿಕೆಗಳ ಪ್ರಕಾರ ಆರ್ಥಿಕ ಸಮಸ್ಯೆಗಳಿಗೆ ಭಕ್ತಿಯಿಂದ ಲಕ್ಷ್ಮಿದೇವಿಯ ಆರಾಧನೆ ಮಾಡಿದರೆ ಖಂಡಿತ ಪರಿಹಾರ ಸಿಗುತ್ತದೆ. ಈಗಾಗಲೇ ಅನೇಕ ಬಾರಿ ಈ ರೀತಿ ಪೂಜೆ ಮಾಡಿ ಅನೇಕರು ತಮ್ಮ ಸಮಸ್ಯೆಗಳಿಂದ ಹೊರಬಂದಿರುವ ಉದಾಹರಣೆಗಳು ಕೂಡ ಇವೆ. ನಿಮ್ಮ ಕುಟುಂಬದಲ್ಲೂ ಕೂಡ ಇದೇ ರೀತಿ ಸಮಸ್ಯೆ ಇದ್ದರೆ, ನೀವು ಎಷ್ಟೇ ಹಣ ಸಂಪಾದನೆ ಮಾಡಿದರು ಅದು ಕೈಯಲ್ಲಿ ಉಳಿಯುತ್ತಿಲ್ಲ ಎಂದರೆ ಹಣ ವ್ಯರ್ಥವಾಗಿ ಅನಾರೋಗ್ಯ ಅಥವಾ ಮತ್ತಿತರ ಕಾರಣಗಳಿಂದ ವ್ಯಯವಾಗುತ್ತಿದ್ದರೆ ತಾಮ್ರದ ಚೊಂಬಿನಿಂದ ಈ ರೀತಿ ಮಾಡಿ ನೋಡಿ. ಆಶ್ಚರ್ಯಕರ ರೀತಿಯಲ್ಲಿ ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರ ಆಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ಉಳಿಯುವಂತೆ ಆಗುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ, ಮೊದಲು ಮಂಗಳವಾರದಂದು ಅಥವಾ ಶುಕ್ರವಾರದಂದು ಅಥವಾ ಇನ್ಯಾವುದೇ ಶುಭ ದಿನದಂದು ಈ ರೀತಿ ಪೂಜೆ ಮಾಡಿ.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಮೊದಲಿಗೆ ಮನೆಯೆಲ್ಲವನ್ನು ಶುದ್ಧ ಮಾಡಿಕೊಳ್ಳಿ ಈ ರೀತಿ ಕ್ಲೀನ್ ಮಾಡುವಾಗ ಆ ನೀರಿಗೆ ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ಅರಿಶಿಣ ಹಾಕಿ ಕ್ಲೀನ್ ಮಾಡುವುದರಿಂದ ಮನೆಯ ನೆಗೆಟಿವ್ ಅಂಶ ಎಲ್ಲ ಹೊರ ಹೋಗುತ್ತದೆ. ನಂತರ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಪೀಠ ಸಿದ್ಧಗೊಳಿಸಿಕೊಳ್ಳಿ. ಒಂದು ಮರದ ಚೌಕಾಕಾರದ ಮಣೆ ತೆಗೆದುಕೊಂಡು ಅದಕ್ಕೆ ಅರಿಶಿನದಿಂದ ಲೇಪನ ಮಾಡಿ. ಮಣೆಯ ಪೂರ್ತಿ ಅರಿಶಿಣದ ನೀರಿನಿಂದ ಲೇಪನ ಮಾಡಿ ಅದರ ಮೇಲೆ ಕುಬೇರ ರಂಗೋಲೆಯನ್ನು ಹಾಕಿ. ಆ ರಂಗೋಲಿಗೆ ಅರಿಶಿನ ಹಾಗೂ ಕುಂಕುಮದಿಂದ ಅಲಂಕಾರ ಮಾಡಿ ನಂತರ ಒಂದು ಶುದ್ಧವಾದ ವೀಳ್ಯದೆಲೆ ತೆಗೆದುಕೊಂಡು ಅದರ ಮೇಲು ಕೂಡ ಅರಿಶಿನ ಕುಂಕುಮ ಹಾಗೂ ಅಕ್ಷತೆ ಹಾಕಿ ಬಳಿಕ ತಾಮ್ರದ ಚೊಂಬನ್ನು ಇಟ್ಟು ಅದರ ತುಂಬಾ ಶುದ್ಧವಾದ ಮಡಿ ನೀರನ್ನು ತುಂಬಿ. ಆ ಚೊಂಬಿಗೆ ಕೂಡ ಅರಿಶಿನ ಕುಂಕುಮ ಅಥವಾ ಸ್ವಸ್ತಿಕ್ ಬರೆದು ಅಲಂಕರಿಸಿ.
ನಂತರ ಈಗ ಈ ನೀರಿನ ಒಳಗಡೆ ಅರಿಶಿನ, ಕುಂಕುಮ, ಅಕ್ಷತೆ, ಬಿಳಿ ಹಳದಿ ಹಾಗೂ ಕೆಂಪು ಬಣ್ಣದ ಹೂವುಗಳನ್ನು ಹಾಕಿ ಒಂದು ತಾಮ್ರದ ನಾಣ್ಯವನ್ನು ಹಾಕಿ ಲಕ್ಷ್ಮಿ ದೇವಿಗೆ ಪ್ರಿಯವಾದ ಪಚ್ಚ ಕರ್ಪೂರ ಮತ್ತು ಕವಡೆಯನ್ನು ಕೂಡ ಹಾಕಿ. ಈಗ ಇದರ ಪಕ್ಕದಲ್ಲಿ ಒಂದು ತಾಮ್ರದ ತಟ್ಟೆಗೆ ನವಧಾನ್ಯಗಳನ್ನು ತುಂಬಿ, ಆ ತಟ್ಟೆಯ ಮೇಲೆ ಒಂದು ತಾಮ್ರದ ದೀಪವನ್ನು ಇಟ್ಟು ಆ ದೀಪವನ್ನು ಕೂಡ ಅರಿಶಿನ ಕುಂಕುಮ ಹೂವಿನಿಂದ ಅಲಂಕರಿಸಿ ಅದನ್ನು ತಾಮ್ರದ ಚೊಂಬಿನ ಪಕ್ಕ ಇಟ್ಟು ಗಂಧದಕಡ್ಡಿ ದೀಪ ಧೂಪದಿಂದ ಆರಾಧಿಸಿ ಭಕ್ತಿ ಭಾವದಿಂದ ನಿಮ್ಮ ಕಷ್ಟವನ್ನೆಲ್ಲ ಹೇಳಿಕೊಂಡು ಪ್ರಾರ್ಥಿಸಿ. ಪ್ರತಿದಿನ ಕೂಡ ಹೂವನ್ನು ಬದಲಾಯಿಸಿ ಪೂಜೆ ಮಾಡಿ ಯಾವುದೇ ಕಾರಣಕ್ಕೂ ಮಂಗಳವಾರ ಅಥವಾ ಶುಕ್ರವಾರ ಇದನ್ನು ತೆಗೆಯಬಾರದು. ಸೋಮವಾರ ಅಥವಾ ಗುರುವಾರ ಇದನ್ನು ತೆಗೆದು ಕ್ಲೀನ್ ಮಾಡಿಕೊಂಡು ನವ ಧಾನ್ಯವನ್ನು ಹಸುಗಳಿಗೆ ನೀಡಿ, ನೀರನ್ನು ಗಿಡಗಳಿಗೆ ಹಾಕಿ ಮತ್ತೆ ಇದೇ ರೀತಿ ರೆಡಿ ಮಾಡಿಕೊಂಡು ಪೂಜೆ ಮಾಡಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.