ಕಾಂತಾರ ಸುಂದ್ರ ! ವಯಸ್ಸು 40 ಆದರೂ ಇನ್ನೂ ಮದುವೆ ಆಗಿಲ್ಲ…!ಇತ್ತೀಚಿಗೆ ಹೆಚ್ಚು ಸದ್ದನ್ನು ಮಾಡಿದಂತಹ ಕಾಂತಾರ ಸಿನಿಮಾ ಇವತ್ತು ಎಲ್ಲಾ ಕಡೆ ಅತ್ಯಂತ ಬೆಳವಣಿಗೆ ಯನ್ನು ಹೊಂದಿದೆ ಹಾಗೂ ಇನ್ನೂ ಕೂಡ ಬೆಳವಣಿಗೆ ಯಾಗುತ್ತಿದೆ ಅದರಲ್ಲೂ ಪಂಜುರ್ಲಿ ಗುಳಿಗ ದೈವದ ಬಗ್ಗೆ ಪ್ರಮುಖವಾದಂತಹ ಪಾತ್ರವನ್ನು ಇಟ್ಟುಕೊಂಡು ಮಾಡಿರುವಂತಹ ಈ ಸಿನಿಮಾ ಹೆಚ್ಚಿನ ಯಶಸ್ಸನ್ನು ಕಂಡಿದೆ ಅದರಲ್ಲೂ ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ತಾವೇ ನಿರ್ದೇಶಿಸಿ ತಾವೇ ನಟನೆಯನ್ನು ಕೂಡ ಮಾಡಿದ್ದಾರೆ ಅದರಲ್ಲೂ ತುಳುನಾಡಿನ ದೈವಗಳ ಬಗ್ಗೆ ಹಾಗೂ ದೈವಾರಾಧನೆಯ ಬಗ್ಗೆ ಮುಖ್ಯವಾದ ವಿಷಯ ಇಟ್ಟುಕೊಂಡು ಮಾಡಿರುವಂತಹ ಈ ಸಿನಿಮಾ ಇವತ್ತು ಜಗತ್ತಿನಾದ್ಯಂತ ಎಲ್ಲರಿಗೂ ಕೂಡ ಇಷ್ಟ ಆಗುತ್ತಿದೆ ಹಾಗೂ ಈ ಚಿತ್ರದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದಂತಹ ನಟರು ಹಾಗೂ ನಟಿಯರು ಈ ಚಿತ್ರದಲ್ಲಿ ನಟಿಸಿರುವುದರಿಂದ ಈ ಚಿತ್ರಕ್ಕೆ ಮತ್ತೊಂದು ತಿರುವು ಸಿಕ್ಕಿದೆ ಎಂದು ಹೇಳಬಹುದು.
ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೂ ಮುನ್ನ ಪಂಜುರ್ಲಿ ದೈವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಆ ದೈವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಈ ಸಿನಿಮಾವನ್ನು ಮಾಡಿದ್ದಾರೆ ಹಾಗೂ ಪಂಜುರ್ಲಿ ದೈವ ಆಹ್ವಾನೆಯಾಗುವಂತಹ ದೈವದ ಬಳಿ ಹೋಗಿ ಆಶೀರ್ವಾದವನ್ನು ಪಡೆದುಕೊಂಡು ದೈವ ಅಪ್ಪಣೆ ಯನ್ನು ಕೊಟ್ಟ ನಂತರವೇ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ವೇಷವನ್ನು ಧರಿಸಲು ಒಪ್ಪಿಕೊಂಡರು ಅದರಂತೆ ಈ ಸಿನಿಮಾ ಗೆಲ್ಲಲು ಬಹಳ ಪ್ರಮುಖವಾದಂತಹ ಕಾರಣ ಯಾರು ಎಂದರೆ ಪಂಜುರ್ಲಿ ದೈವ ಎಂದು ರಿಷಬ್ ಶೆಟ್ಟಿ ಹೇಳುತ್ತಾರೆ ಅದರಲ್ಲೂ ಈ ಚಿತ್ರದಲ್ಲಿ ಹಲವಾರು ತುಳುನಾಡಿನ ನಟರು ಹಾಗೂ ನಟಿಯರು ಅಭಿನಯ ಮಾಡಿದ್ದು ಅದರಲ್ಲೂ ಸುಂದ್ರ ಎಂಬ ಪಾತ್ರದಲ್ಲಿ ಕಾಣಿಸಿ ಕೊಂಡಿರುವಂತಹ ಈ ನಟ.
ತುಳುನಾಡಿನ ನಟನೆ ಆಗಿದ್ದು ಇವರು ಕೂಡ ತಮ್ಮ ಮೊದಲ ಅಭಿನಯವನ್ನು ನಾಟಕದ ಮುಖಾಂತರ ಮಾಡುವುದರಲ್ಲಿ ಈ ದಿನ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಅದರಲ್ಲೂ ಇವರು ಟಿವಿಯಲ್ಲಿ ಪ್ರಸಾರ ವಾಗುವಂತಹ ಮಜಾ ಭಾರತ ಕಾರ್ಯಕ್ರಮದಲ್ಲಿ ಇವರು ಮೊಟ್ಟ ಮೊದಲನೆಯದಾಗಿ ಅಭಿನಯಿಸಿ ದ್ದರು.ಅದರ ಮುಖಾಂತರ ಇವರು ಕೆಲವೊಂದಷ್ಟು ಸಿನಿಮಾಗಳಲ್ಲಿ ಮಾಡುವುದರ ಮುಖಾಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು ಹೌದು ಸುಂದ್ರ ಅವರು ಮೂಲತಃ ತುಳುನಾಡಿನವರೇ ಆಗಿದ್ದು ಅವರ ಚಿಕ್ಕಪ್ಪನ ನಾಟಕದ ಕಂಪನಿಯಲ್ಲಿ ನಾಟಕ ಗಳನ್ನು ಮಾಡುವುದರ ಮುಖಾಂತರ ತಮ್ಮ ನಟನೆ ಯನ್ನು ಮೊಟ್ಟ ಮೊದಲನೆಯದಾಗಿ ಪ್ರಾರಂಭಿಸಿದರು ಇವರು ತಮ್ಮ ವಯಸ್ಸು 40 ದಾಟಿದರೂ ಕೂಡ ಇನ್ನೂ ಮದುವೆಯಾಗಿಲ್ಲ ಎಂದು ಹೇಳುವುದರ ಮುಖಾಂತರ ಕೆಲವೊಂದು ಸಂದರ್ಶನದಲ್ಲಿ ತಮ್ಮ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.