ಕಾಂತಾರ ಬುಳ್ಳ ಇವರೇ ನೋಡಿ ಬ್ಯಾಂಕ್ ಮ್ಯಾನೇಜರ್ ಕೆಲಸ ಬಿಟ್ಟು ಇವರು ನಟರಾದ ಕಥೆ.ಬ್ಯಾಂಕ್ ನೌಕರ ಈಗ ಫೇಮಸ್ ನಟ…

ಕೊನೆಗೂ ಸಿಕ್ಕಿದ್ರು ಕಾಂತಾರ ಬುಳ್ಳ! ಬ್ಯಾಂಕ್ ನೌಕರ ಈಗ ಫೇಮಸ್ ನಟ||
ಕಾಂತಾರಾ ಸಿನಿಮಾ ಚಿತ್ರರಂಗದಲ್ಲಿಯೇ ಹೊಸ ಅಲೆಯನ್ನೇ ಎಬ್ಬಿಸಿದೆ ಹೌದು ಅಷ್ಟರಮಟ್ಟಿಗೆ ಈ ಸಿನಿಮಾ ಬೆಳೆದು ನಿಂತಿದೆ ಅದರಲ್ಲೂ ಕನ್ನಡದಲ್ಲಿ ತುಳು ಭಾಷೆಯ ದೈವಾರಾಧನೆ ಹಾಗೂ ಅಲ್ಲಿನ ದೈವಗಳ ಬಗ್ಗೆ ಮೊಟ್ಟಮೊದಲನೆಯದಾಗಿ ಚಿತ್ರೀಕರಣ ಮಾಡಿರುವಂತಹ ಮೊದಲ ಚಿತ್ರ ಇದಾಗಿದ್ದು ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶನ ಮತ್ತು ನಟನೆಯನ್ನು ಕೂಡ ಮಾಡಿದ್ದಾರೆ ಅದರಲ್ಲೂ ಈ ಒಂದು ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ಬಹಳ ಸಮಯವನ್ನು ತೆಗೆದುಕೊಂಡು ಈ ಸಿನಿಮಾದಲ್ಲಿ ಬರುವಂತಹ ಪ್ರತಿಯೊಂದು ಪಾತ್ರಕ್ಕೂ ಹಾಗೂ ಆ ಪಾತ್ರಕ್ಕೆ ಸೂಕ್ತವಾಗುವಂತಹ ಕಲಾವಿದರನ್ನು ಬಹಳ ಅಚ್ಚುಕಟ್ಟಾಗಿ ಹುಡುಕಿ ಈ ಸಿನಿಮಾದಲ್ಲಿ ನಟನೆಯನ್ನು ಮಾಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು ಕಲಾವಿದರು ಕೂಡ ಅಷ್ಟೇ ಅದ್ಭುತವಾದಂತಹ ನಟನೆಯನ್ನು ಮಾಡುವುದರ ಮುಖಾಂತರ ಈ ಸಿನಿಮಾದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.

ರಿಷಬ್ ಶೆಟ್ಟಿ ಅವರು ಇಲ್ಲಿಯವರೆಗೂ ಯಾವುದೇ ರೀತಿಯಾದಂತಹ ದೈವರಾಧನೆಯ ಬಗ್ಗೆ ಚಿತ್ರವನ್ನು ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಅದರಲ್ಲೂ ಅವರ ನೆಲೆಯಲ್ಲಿ ಕಂಡುಬರುವಂತಹ ದೈವಗಳ ಬಗ್ಗೆ ಈ ಚಿತ್ರವನ್ನು ಮಾಡಿರುವುದು ಅಲ್ಲಿನ ಜನಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ ಅದರಲ್ಲೂ ದೈವದ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿಯುವಂತೆ ಹಾಗೂ ಆ ದೇವರ ಪವಾಡವನ್ನು ಪ್ರತಿಯೊಬ್ಬರಿಗೂ ತಿಳಿಸಿ ಕೊಡುವುದರಲ್ಲಿ ರಿಷಬ್ ಶೆಟ್ಟಿ ಅವರು ಎಲ್ಲರಿಗಿಂತ ಒಂದು ಕೈ ಮೇಲೆ ತಮ್ಮ ಕೆಲಸವನ್ನು ಮಾಡಿದ್ದಾರೆ ಆದ್ದರಿಂದಲೇ ಆ ದೇವರೇ ಈ ಸಿನಿಮಾವನ್ನು ಇಷ್ಟು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿರಬಹುದು ಎಂದು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಅದರಲ್ಲೂ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರಿಗೆ ಆಪ್ತ ಸ್ನೇಹಿತನಾಗಿ ನಟಿಸಿರುವಂತಹ ಬುಳ್ಳ ಎಂಬ ಪಾತ್ರಧಾ ರಿ ಇವರು ಕೂಡ ತುಳುನಾಡಿನ ವ್ಯಕ್ತಿಯೇ ಆಗಿದ್ದು ಇವರು ಚಿತ್ರರಂಗದಲ್ಲಿ ಕೆಲಸ ಮಾಡುವುದಕ್ಕೂ ಮುನ್ನ ಅವರು ತಮ್ಮ ಜೀವನದಲ್ಲಿ ಬ್ಯಾಂಕ್ ಮ್ಯಾನೇಜರ್ ವೃತ್ತಿಯನ್ನು ಮಾಡುತ್ತಿದ್ದರು ಆದರೆ ಅವರಿಗೆ ಕಲೆಯಲ್ಲಿ ಮತ್ತು ಚಿತ್ರಗಳಲ್ಲಿ ಮಾಡಬೇಕು ಎಂಬ ಆಸೆ ಇದ್ದುದರಿಂದ ಅವರು ತಮ್ಮ ಕೆಲಸವನ್ನು ಬಿಟ್ಟು ನಟನೆಗೆ ಬಂದರು ಇವರು ಮೊಟ್ಟಮೊದಲನೆಯದಾಗಿ ಒಂದು ಮೊಟ್ಟೆಯ ಕಥೆಯ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಮಾಡುವುದರ ಮುಖಾಂತರ ಪರಿಚಯವಾದರು ನಂತರ ಇವರು ಈ ಚಿತ್ರದಲ್ಲಿ ಶಿವನ ಸ್ನೇಹಿತನ ಪಾತ್ರದಲ್ಲಿ ಮಾಡಿರುವುದು ಅವರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ ಆದ್ದರಿಂದ ನನಗೆ ಈ ಒಂದು ಅವಕಾಶ ಮಾಡಿಕೊಟ್ಟಂತಹ ರಿಷಬ್ ಶೆಟ್ಟಿ ಅವರಿಗೆ ಈ ಮುಖಾಂತರ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]