ಸೈಕಲ್‌ನಲ್ಲಿ ವಿಧಾನಸೌಧಕ್ಕೆ ಬಂದ ಒಬ್ಬ ರೈತನಿಗೆ ಅಲ್ಲಿರುವ ಸೇವಾ ಅಭ್ಯರ್ಥಿಯು ಅವಮಾನ ಮಾಡಿ ಹೊರಗೆ ಹಾಕುತ್ತಾನೆ ಯಾಕೆ ಆ ವ್ಯಕ್ತಿ ಈ ರೀತಿ ಮಾಡುತ್ತಾನೆ ಎಂದು ತಿಳಿಯೋಣ:ಸಾಮಾನ್ಯ ಒಂದು ಸೈಕಲ್ಲಿನಲ್ಲಿ ಆ ಬಡ ರೈತ ಬಂಧುದನ್ನು ಆ ಸೇವಾ ಸಮಿತಿಯ ಕಾರ್ಯನಿರ್ವಾಹಕ ಕಂಡು ಆ ರೈತನಿಗೆ ಅವಮಾನ ಮಾಡುತ್ತಾನೆ. ನೀನು ಯಾರು ಮತ್ತು ನಿನಗೆ ಇಲ್ಲಿ ಏನು ಕೆಲಸವಿರಲು ಸಾಧ್ಯ ಹೊರಟು ಹೋಗು ಎಂದು ಅವಾಚ್ಯವಾಗಿ ನಿಂದಿಸುತ್ತಾನೆ.ಆದರೆ ಇವರಿಬ್ಬರ ಈ ಮಾತುಕತೆಗಳನ್ನು ದೂರದಿಂದ ಆಗಮಿಸುತ್ತಿದ್ದ ಅಲ್ಲಿನ ಅಧಿಕಾರಿಗಳು ಬಂದು ಏನಾಯ್ತು? ಏನು ಸಮಸ್ಯೆ ಎಂದು ವಿಚಾರಿಸುತ್ತಾರೆ.ಅಧಿಕಾರಿಗಳು ಆ ರೈತರಿಗೆ ಸರ್ ನೀವು ಯಾರು ಮತ್ತು ಹಾಗೆಲ್ಲ ವಿಧಾನಸೌಧಕ್ಕೆ ಬರುವಂತಿಲ್ಲ ಎಂದು ಹೇಳುತ್ತಾರೆ ಆಗ ಆ ರೈತ ಹೇಳುತ್ತಾರೆ ನಾನು ಒಬ್ಬ ಎಂ ಎಲ್ ಎ ಹಾಗಾಗಿ ನನ್ನ ಕೆಲಸ ಒಳಗಡೆ ಇದೆ ಹಾಗಾಗಿ ನಾನು ಹೋಗಬೇಕು ಎಂದು ಹೇಳುತ್ತಾರೆ.ಆಗ ಅಲ್ಲಿರುವವರು ಅವರನ್ನು ಗೇಲಿ ಮಾಡಿ ನಗುತ್ತಾರೆ. ಮತ್ತು ನೀನೊಬ್ಬ ಸಾಮಾನ್ಯ ರೈತನ ಹಾಗೆ ಬಂದಿದ್ದೀಯ ಮತ್ತು ಸೈಕಲ್ಲಿನಲ್ಲಿ ಬಂದಿದ್ದೀಯಾ?
ನೀನು ಹೇಗೆ ಎಂ ಎಲ್ ಎ ಆಗಲು ಸಾಧ್ಯ ಎಂದು ಅವನನ್ನು ಆಡಿಕೊಳ್ಳುತ್ತಾರೆ. ಅವರ ಮಾತುಗಳಿಗೆ ಅವರು ಸ್ವಲ್ಪ ಕೂಡ ರೇಗದೇ ನಿಧಾನವಾಗಿಯೇ ಅವರಿಗೆ ಅರ್ಥ ಮಾಡಿಸುವ ರೀತಿ ಹೇಳುತ್ತಾರೆ ನಾನು ಒಬ್ಬ ಶಾಸಕ ಮತ್ತು ನನ್ನ ಕೆಲಸ ಒಳಗಡೆ ಇದೆ ಎಂದು ಅವರು ಮತ್ತೆ ಮತ್ತೆ ಹೇಳುತ್ತಾರೆ.ಇದಾದ ಸ್ವಲ್ಪ ಸಮಯದ ನಂತರ ಎಂ ಎಲ್ ಎ ಅವರ ಕಾರುಗಳು ಬರಲು ತೊಡಗುತ್ತದೆ ಅದರಿಂದ ಅನೇಕ ಎಂ ಎಲ್ ಎ ಗಳು ಹೊರ ಬರುತ್ತ ಇರುತ್ತಾರೆ ಅವರುಗಳಲ್ಲಿ ಒಬ್ಬರು ಇವರನ್ನು ಕಂಡು ನಮಸ್ಕಾರ ಸರ್ ನೀವೇನು ಸರ್ ಇಲ್ಲಿ ನಿಂತಿದ್ದೀರಿ ಒಳಗೆ ಬನ್ನಿ ಎಂದು ಕರೆಯುತ್ತಾರೆ.ಆಗ ಇನ್ನೊಬ್ಬ ಶಾಸಕ ಇವರನ್ನು ಯಾರು ಎಂದುಕೊಂಡಿದ್ದೀಯಾ ಮತ್ತು ಇವರನ್ನು ಹೀಗೆ ಏಕೆ ಹೊರಗಡೆ ನಿಲ್ಲಿಸಿ ಮಾತನಾಡಿಸುತ್ತಿರುವೆ ಎಂದು ಅವರ ವಿರುದ್ಧ ರೇಗುತ್ತಾರೆ.ಆಗ ಸೆಕ್ಯೂರಿಟಿ ಕೂಡ ಸರ್ ನನಗೆ ಗೊತ್ತಿಲ್ಲ ಯಾರು ಇವರು ಎಂದು ಕೇಳುತ್ತಾರೆ.
ಅವರು ಒಬ್ಬ ಎಂ ಎಲ್ ಎ ಅವರು ಯಾರು ಎಂದುಕೊಂಡಿದ್ದೀಯಾ ಸ್ವತಂತ್ರ ಪಕ್ಷದಲ್ಲಿ ನಿಂತು ಗೆದ್ದಿರುವ ಒಬ್ಬ ಶಾಸಕ ಎಂದು ಹೇಳುತ್ತಾರೆ. ಅದಾದ ನಂತರ ಆ ಸೆಕ್ಯೂರಿಟಿ ಮತ್ತು ಅಧಿಕಾರಿಗಳು ಅವರನ್ನು ಕೇಳುತ್ತಾರೆ ಸರ್ ನೀವು ಒಬ್ಬರು ಶಾಸಕರು ಎಂದು ನಮಗೆ ತಿಳಿದಿರಲಿಲ್ಲ ನೀವು ಏಕೆ ಸೈಕಲ್ ನಲ್ಲಿ ಬಂದಿದ್ದೀರಾ ಎಂದು ಕೇಳುತ್ತಾರೆ.ನಮ್ಮಿಂದ ದೊಡ್ಡ ತಪ್ಪಾಯ್ತು ಎಂದು ಆ ರೈತರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾರೆ ಆಗ ಆ ಶಾಸಕರು ನಮ್ಮ ಈ ವೇಷಭೂಷಣವನ್ನು ನೋಡಿ ನೀವು ಅಳೆಯುವ ರೀತಿ ಅದು ನಿಮ್ಮ ತಪ್ಪಲ್ಲ ಎಂದು ಹೇಳುತ್ತಾರೆ ಮತ್ತು ಈ ರೀತಿಯಲ್ಲ ಅವಮಾನಗಳನ್ನು ಮಾಡಬೇಡಿ ವಿಚಾರಿಸಿ ಅನಂತರ ಮಾತನಾಡಿ ಎಂದು ಹೇಳುತ್ತಾರೆ. ಅವರ ಬಗ್ಗೆ ಅಧಿಕಾರಿಗಳು ವಿಚಾರಿಸಿದಾಗ ಅವರಿಗೆ ಒಂದು ಸತ್ಯ ತಿಳಿಯುತ್ತದೆ ಆ ವ್ಯಕ್ತಿ ನಿಜವಾಗಲೂ ಒಬ್ಬ ಮಂತ್ರಿ ಆಗಿರುತ್ತಾರೆ ಮತ್ತು ಇಂದಿನ ತೆಲಂಗಾಣದ ಎಲ್ಲಂದೂಪ್ ಜಿಲ್ಲೆಯ ಎಂ ಎಲ್ ಎ ಆಗಿರುತ್ತಾರೆ.ಅವರ ನಾಮದೇಯ ಗುಮ್ಮಡಿ ನರಸಿಂಹಯ್ಯ ಎಂದು ಇವರ ಹೆಸರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.