ವೃಷಭ ರಾಶಿ ಡಿಸೆಂಬರ್ ಭವಿಷ್ಯ 2022 ||
ಡಿಸೆಂಬರ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದ ಕ್ಕೂ ಮೊದಲು ಡಿಸೆಂಬರ್ ತಿಂಗಳಲ್ಲಿ ಬರುವಂತಹ ವಿಶೇಷ ದಿನಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡುವುದಾದರೆ ಮೊದಲನೆಯದಾಗಿ ಡಿಸೆಂಬರ್ 3ನೇ ತಾರೀಖು ಧನಸ್ಸು ರಾಶಿಗೆ ಬುಧ ಪ್ರವೇಶ ಆಗುತ್ತಾ ಇದ್ದಾರೆ ಅಂದರೆ ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಬುಧ ಪ್ರವೇಶ ಆಗುತ್ತಾ ಇದ್ದಾರೆ ಇದು ಮೊದಲನೆಯ ಬದಲಾವಣೆ ಆದರೆ 2ನೇ ಬದಲಾವಣೆ ಡಿಸೆಂಬರ್ 5ನೇ ತಾರೀಖು ಶುಕ್ರ ಧನಸ್ಸು ರಾಶಿಗೆ ಪ್ರವೇಶ ಆಗುತ್ತಾ ಇದ್ದಾನೆ 3ನೇದಾಗಿ 16ನೇ ತಾರೀಕು ಸೂರ್ಯ ಧನಸ್ಸು ರಾಶಿ ಅಂದರೆ ವೃಶ್ಚಿಕ ರಾಶಿ ಅಂದರೆ ತನ್ನ ಮಿತ್ರನ ಮನೆಯಿಂದ ಧನಸ್ಸು ರಾಶಿಗೆ ಅಂದರೆ ತನ್ನ ಇನ್ನೊಂದು ಮಿತ್ರನ ಮನೆಗೆ ಪ್ರವೇಶವಾಗುತ್ತಾ ಇದ್ದಾರೆ ಹಾಗಾಗಿ ಈ ಮೂರೇ ಮೂರು ಬದಲಾವಣೆ ಯನ್ನು ನೀವು ಈ ಡಿಸೆಂಬರ್ ತಿಂಗಳಿನಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ.
ಹಾಗಾದರೆ ಈ ಮಾಸದ ವಿಶೇಷತೆ ಏನು ಎಂದು ನೋಡುವುದಾದರೆ ಮೊಟ್ಟಮೊದಲನೆಯದಾಗಿ 7ನೇ ತಾರೀಖು ದತ್ತಾತ್ರೇಯ ಸ್ವಾಮಿ ಜಯಂತಿ ಇದೆ ಹಾಗಾಗಿ ಈ ಒಂದು ಸಮಯದಲ್ಲಿ ಗುರುದತ್ತಾತ್ರೇಯ ಸ್ವಾಮಿಯ ದರ್ಶನವನ್ನು ಮಾಡಿ ಇದರಿಂದ ಬಹಳ ಒಳ್ಳೆಯದಾಗುತ್ತದೆ ಇನ್ನು 8 ನೇ ತಾರೀಖು ಪೌರ್ಣಮಿ ಇದೆ 15ನೇ ತಾರೀಖು ಶಾರದಾದೇವಿ ಜಯಂತಿ ಎನ್ನುವುದು ನಡೆಯುತ್ತದೆ ಈ ಒಂದು ಸಮಯದಲ್ಲಿ ವಿದ್ಯಾರ್ಥಿಗಳು ಏನಾದರೂ ತಮ್ಮ ವಿದ್ಯಾಭ್ಯಾಸದಲ್ಲಿ ತೊಂದರೆ ಇದ್ದರೆ ಹಾಗೂ ಮಕ್ಕಳಿಗೆ ಚೆನ್ನಾಗಿ ವಿದ್ಯಾ ಭ್ಯಾಸ ಆಗಬೇಕು ಎನ್ನುವವರು 15ನೇ ತಾರೀಖು ಶಾರದಾ ದೇವಿಯ ಆರಾಧನೆಯನ್ನು ಮಾಡುವುದ ರಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಕಾಣಬಹುದಾಗಿದೆ ಇನ್ನು 16ನೇ ತಾರೀಖು ಯಾರಿಗಾದರೂ ತಮ್ಮ ಜೀವನದಲ್ಲಿ ತುಂಬಾ ಭಯ ಇರುತ್ತದೆಯೋ ನಿದ್ದೆಯಲ್ಲಿ ಬೆಚ್ಚಿ ಬೀಳುವಂತದ್ದು .
ಇಂಥವರು ಕಾಲಭೈರವೇಶ್ವರನ ದೇವಾಲಯದಲ್ಲಿ ಬೂದುಗುಂಬಳಕಾಯಿಯ ದೀಪವನ್ನು ಹಚ್ಚುವುದು ಹೀಗೆ ಮಾಡುವುದರಿಂದ ಎಲ್ಲಾ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.ಇನ್ನು ವೃಷಭ ರಾಶಿಯ ಭವಿಷ್ಯವನ್ನು ನೋಡುವುದಾದರೆ ರಾಶಿಯ ಅಧಿಪತಿ ಯಾಗಿರುವಂತಹ ಶುಕ್ರ ಅಷ್ಟಮ ಸ್ಥಾನದಲ್ಲಿ ಇದ್ದಾನೆ ಹಾಗಾಗಿ ನಿಮ್ಮ ರಾಶ್ಯಾಧಿಪತಿ ಮತ್ತು ನಿಮ್ಮ ಷಷ್ಠಾಧಿಪತಿ ನಿಮ್ಮ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿ ಇಲ್ಲ ಅಂದರೆ ನಿಮ್ಮ ಆರೋಗ್ಯದಲ್ಲಿ ಕೆಲವೊಂದಷ್ಟು ಏರುಪೇರು ಉಂಟಾಗುತ್ತದೆ ಆದ್ದರಿಂದ ವೃಷಭ ರಾಶಿಯವರು ನಿಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ವನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಹೆಚ್ಚಾಗಿ ಶೀತ ಕೆಮ್ಮು ಜ್ವರ ಗಂಟಲಿನ ಸಮಸ್ಯೆ ಮೂಗಿನ ಸಮಸ್ಯೆ ಕಣ್ಣಿನ ಸಮಸ್ಯೆ ಕಿವಿಯ ಹಾಗೂ ಕಫದ ಸಮಸ್ಯೆ ಹೀಗೆ ಹಲವಾರು ತೊಂದರೆ ಗಳನ್ನು ನೀವು ಅನುಭವಿಸಬೇಕಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.