ಗಡ್ಡ ತೆಗೆಸೋದಕ್ಕೂ ದುಡ್ಡಿಲ್ಲದೆ ಪರದಾಡಿದ ತಮಿಳಿಗನೊಬ್ಬ ಅಪ್ಪಟ ಕನ್ನಡಿಗನಾಗಿ ಮೆರೆದಾಡಿದ್ದೇಗೆ ? ಯಾರು ಈ ಅಜಾತಶತ್ರು ರಮೇಶ್ ಅರವಿಂದ್ » Karnataka's Best News Portal

ಗಡ್ಡ ತೆಗೆಸೋದಕ್ಕೂ ದುಡ್ಡಿಲ್ಲದೆ ಪರದಾಡಿದ ತಮಿಳಿಗನೊಬ್ಬ ಅಪ್ಪಟ ಕನ್ನಡಿಗನಾಗಿ ಮೆರೆದಾಡಿದ್ದೇಗೆ ? ಯಾರು ಈ ಅಜಾತಶತ್ರು ರಮೇಶ್ ಅರವಿಂದ್

ಬಿರುದುಗಳೆ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಮೆರೆದ ಈ ರಮೇಶ್ ಅರವಿಂದ್ ಯಾರು? ಅವರ ಬದುಕಲ್ಲಿ ನಿಜಕ್ಕೂ ಆಗಿದ್ದೇನು?
ಬಿಎ ಗೋವಿಂದಾಚಾರಿ ಹಾಗೂ ಸರೋಜಾ ಎಂಬ ದಂಪತಿಗಳ ಮಗನಾಗಿ ರಮೇಶ್ ಅರವಿಂದ್ 1964ರ ಸೆಪ್ಟೆಂಬರ್ 10 ರಂದು ತಮಿಳುನಾಡಿನ ಕುಂಭಕೋಣಂ ಎಂಬಲ್ಲಿ ಜನಿಸುತ್ತಾರೆ ಇವರಿಗೆ ನಾಲ್ಕು ಜನ ಸಹೋದರಿಯರು ಸಹ ಇದ್ದರು ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾಗಿದ್ದಂತಹ ರಮೇಶ್ ಅವರು ಅಸಾಧ್ಯ ಪ್ರತಿಭಾವಂತರಾಗಿದ್ದರು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡಿರುವ ರಮೇಶ್ ಅವರು ತಮ್ಮ ಕಾಲೇಜು ದಿನಗಳಲ್ಲಿಯೇ ಕಾರ್ಯಕ್ರಮದ ನಿರೂಪಣೆ ಮಾಡುವುದರಲ್ಲಿ ಸಕ್ರಿಯರಾಗಿದ್ದರು ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮದಲ್ಲಿಯೂ ಕೂಡ ಹೆಚ್ಚಾಗಿ ಇವರೇ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದರು ರಮೇಶ್ ಅರವಿಂದ್ ಹಾಗೂ ತಮಿಳಿನ ಸ್ಟಾರ್ ಹೀರೋ ಆದಂತಹ ಕಮಲ್ ಹಾಸನ್ ಇವರ ಸ್ನೇಹ ಸಲುಗೆಯ ಬಗ್ಗೆ ನಿಮಗೀಗಾಗಲೇ ಗೊತ್ತೇ ಇದೆ.

ಅಂತೆಯೇ 1983 ರಲ್ಲಿ ಕಮಲ್ ಅವರ ನಟನೆಯ ಸಾಗರಸಂಗಮಂ ಚಿತ್ರದ ಸಕ್ಸಸ್ ನಲ್ಲಿ ಅದರ ಶೋ ಹೋಸ್ಟ್ ಮಾಡಲು ಆಯ್ಕೆಯಾದಂತಹ ರಮೇಶ್ ಅವರು ಆಗಲೇ ಮೊದಲ ಬಾರಿಗೆ ತಮ್ಮ ಬಹುಕಾಲದ ಸ್ನೇಹಿತರಾದ ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗುತ್ತಾರೆ ಈ ಸಮಯದಲ್ಲಿಯೇ ನಟ ರಮೇಶ್ ಕಿರುತೆರೆ ಹಾಗೂ ಟೆಲಿವಿಷನ್ ಗಳಲ್ಲಿ ತಮ್ಮ ಕರಿಯರ್ ಮುಂದುವರಿಸುತ್ತಾರೆ ಈ ಸಮಯದಲ್ಲಿ ಕನ್ನಡದಲ್ಲಿ ಒಂದು ಚಿತ್ರ ತೆರೆ ಕಾಣುತ್ತದೆ ಇದರ ಹೆಸರು ಮೌನಗೀತೆ ಎಂದು ನಟಿ ಸರಿತ ಇದರಲ್ಲಿ ಮುಖ್ಯ ಪಾತ್ರದಲ್ಲಿ ಅದರಲ್ಲೂ ದ್ವಿಪಾತ್ರದಲ್ಲಿ ನಟಿಸಿದಂತಹ ಈ ಚಿತ್ರದಲ್ಲಿ ರಮೇಶ್ ಅವರು ಕೂಡ ಒಂದು ಪ್ರಧಾನವಾದಂತಹ ಪಾತ್ರದಲ್ಲಿ ಅಭಿನಯಿಸಿದ್ದರು ಇದೇ ಸಮಯದಲ್ಲಿಯೇ ಅವರು ತಮಿಳಿನ ಖ್ಯಾತ ನಿರ್ದೇಶಕರಾಗಿದ್ದ ಎನ್ ಬಾಲಚಂದರ್ ಅವರನ್ನು ಒಮ್ಮೆ ಭೇಟಿ ಆಗುತ್ತಾರೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಆಗ ಬಾಲ ಚಂದರ್ ಅವರು 1973ರಲ್ಲಿ ತೆರೆಕಂಡಿದ್ದ ಸೊಲ್ಲಾದನ್ ನಿನೈ ಕಿರೇನ್ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲು ಇಲ್ಲಿ ಹೊಸ ಮುಖಗಳ ಹುಡುಕಾಟದಲ್ಲಿ ಇದ್ದರು ಅಲ್ಲಿ ಕಮಲ್ ಹಾಸನ್ ನಟಿಸಿದಂತಹ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡುತ್ತಾರೆಂದು ಅವರು ಹುಡುಕಾಟ ನಡೆಸುತ್ತಿರುವಾಗಲೇ ಅವರ ಕಣ್ಣಿಗೆ ನಟ ರಮೇಶ್ ಅರವಿಂದ್ ಬಿದ್ದಿದ್ದರು ಬ್ರೀಫ್ ಆಡಿಶನ್ ನಡೆದ ಮೇಲೆ ಅವರು ಬಂದಿದ್ದ ಹಲವರಲ್ಲಿ ಬಾಲಚಂದರ್ ಅವರು ಕೊನೆಯಲ್ಲಿ ಆಯ್ಕೆ ಮಾಡಿದ್ದು ಯುವಕ ರಮೇಶ್ ಅವರನ್ನು ರಮೇಶ್ ಅವರ ಕಣ್ಣುಗಳು ನನಗೆ ಆ ಸಮಯದಲ್ಲಿ ಬಹಳ ಇಷ್ಟವಾದವೆಂದು ಸ್ವತಹ ಅವರೇ ಹೇಳಿದ್ದರು ಇದರ ಮೂಲಕ ಅವರ ನಾಯಕತ್ವದಲ್ಲಿ ರಿಲೀಸ್ ಆದಂತಹ ಆ ಚಿತ್ರವೇ 1986ರ ಸುಂದರ ಸ್ವಪ್ನಗಳು ಚಿತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">