ಕಾಮಿಡಿ ಕಿಲಾಡಿಗಳು ನಯನಾ ವಿರುದ್ದ ದೂರು ದಾಖಲು..ಹಣದ ವಿಚಾರಕ್ಕೆ ಕಿರಿಕ್ ಮಾಡಿಕೊಂಡ್ರ ನಯನಾ..ಆಡಿಯೋ ವೈರಲ್‌.ಅಷ್ಟಕ್ಕೂ ಏನಾಗಿದೆ ನೋಡಿ - Karnataka's Best News Portal

ಕಾಮಿಡಿ ಕಿಲಾಡಿಗಳು ನಯನಾ ವಿರುದ್ದ ದೂರು ದಾಖಲು..ಹಣದ ವಿಚಾರಕ್ಕೆ ಕಿರಿಕ್ ಮಾಡಿಕೊಂಡ್ರ ನಯನಾ..ಆಡಿಯೋ ವೈರಲ್‌.ಅಷ್ಟಕ್ಕೂ ಏನಾಗಿದೆ ನೋಡಿ

ಧಮ್ಕಿ ವಿಚಾರಕ್ಕೆ ದೂರು, ನಯನ ಫಸ್ಟ್ ರಿಯಾಕ್ಷನ್ ಹೇಗಿತ್ತು ಗೊತ್ತಾ?ಸುವರ್ಣ ಟಿವಿಯಲ್ಲಿ ಪ್ರಸಾರವಾದ ಕಾಮಿಡಿ ಗ್ಯಾಂಗ್ ಎನ್ನುವ ಕಾರ್ಯಕ್ರಮದಲ್ಲಿ ವಿನ್ನರ್ ಹಾಗೂ ರನ್ನರ್ ಗಳಿಗೆ ಹಣದ ಮೊತ್ತವನ್ನು ಕೊಡಲಾಗಿತ್ತು ಒಂದು ತಂಡದ ಐದು ಜನರಲ್ಲಿ ಮೂರು ಜನರ ಅಕೌಂಟಿಗೆ ಹಣ ಟ್ರಾನ್ಸ್ಫರ್ ಮಾಡಿ ನಂತರ ಒಟ್ಟಾಗಿ ಸೇರಿ ಮಾತುಕತೆಯೊಂದಿಗೆ ಐದು ಜನರು ಡಿವೈಡ್ ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಈ ಹಣದ ವಿಚಾರವೂ ಈಗ ಕಲಾವಿದರು ಪೊಲೀಸ್ ಸ್ಟೇಷನ್ ಮೆಟ್ಟಿಲು ಇರುವ ತನಕ ತಲುಪಿದೆ. ಕಾರಣ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದ ಕಂಟೆಸ್ಟೆಂಟ್ ಆಗಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರು ಸೋಮಶೇಖರ್ ಎನ್ನುವ ಕಲಾವಿದನಿಗೆ ಅವಾಜ್ ಹಾಕಿದ್ದಾರೆ. ಅವ್ಯಚ ಶಬ್ದಗಳೊಂದಿಗೆ ನಿಂದನೆ ಮಾಡುವುದರ ಜೊತೆಗೆ ಹಣ ಕೊಡದೆ ಇದ್ದರೆ ನಿನ್ನನ್ನು ಏನು ಮಾಡುತ್ತಿನೋ ಗೊತ್ತಿಲ್ಲ ನಾನು ಏನು ಎನ್ನುವುದರ ಇಮ್ಯಾಜಿನೇಶನ್ ಕೂಡ ನಿನಗೆ ಇಲ್ಲ ನಯನ ಎಂದರೆ ಇಷ್ಟೇ ಎಂದು ಕೊಳ್ಳಬೇಡ, ನೀನು ಎಲ್ಲೂ ಹೋದರು ಕೂಡ ಬಿಡುವುದಿಲ್ಲ ಹೇಗೆ ವಸೂಲಿ ಮಾಡಬೇಕು ಎಂದು ಗೊತ್ತಿದೆ ಎಂದು ಧಮ್ಕಿಯನ್ನು ಕೂಡ ಹಾಕಿದ್ದಾರೆ.

ಈಗ ಅದೇ ಆಡಿಯೋ ಇಟ್ಟುಕೊಂಡು ಸೋಮಶೇಖರ್ ಎನ್ನುವ ಕಲಾವಿದ ಆರ್ ಆರ್ ನಗರದ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ನಯನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆದ ಬಳಿಕ ನಯನ ಅವರು ತನ್ನ ಮೇಲೆ ಆಗಿರುವ ದೂರಿನ ಬಗ್ಗೆ ಈ ರೀತಿ ಹೇಳಿದ್ದಾರೆ. ಸುದ್ದಿ ಮಾಧ್ಯಮದ ವರದಿಗಾರರ ಜೊತೆ ಲೈವಲ್ಲಿ ಮಾತಿಗೆ ಬಂದ ನಯನ ಅವರು ನಾವು ದುಡಿದ ಹಣ ಕೇಳುತ್ತಿದ್ದೇವೆ. ಸೋಮಶೇಖರ್ ಅವರಿಗೆ ಅವರ ಕುಟುಂಬದಲ್ಲಿ ಹೇಗೆ ಕಷ್ಟ ಇದೆಯೋ ಜವಾಬ್ದಾರಿಗಳನ್ನು ಹೊತ್ತು ಕೊಂಡಿದ್ದಾರೆ ಹಾಗೆಯೇ ಅದೇ ತಂಡದಲ್ಲಿ ಹಣ ಸಿಗಬೇಕಾದ ಚಿದು ಮತ್ತು ಅನಿಲ್ ಎನ್ನುವವರು ಸಹ ಅಷ್ಟೇ ಸಮಸ್ಯೆಯಲ್ಲಿ ಇದ್ದಾರೆ. ಅವರೇನು ಸುಮ್ಮನೆ ಹಣ ಕೇಳುತ್ತಿಲ್ಲ ಅವರುಗಳು ದುಡಿದಿರುವ ಹಣವನ್ನು ಕೇಳುತ್ತಿದ್ದಾರೆ ಆದರೆ ಸೋಮಶೇಖರ್ ಇದುವರೆಗೆ ಅವರಿಗೆ ನೇರವಾಗಿ ನಿಂತು ಉತ್ತರ ಕೊಟ್ಟಿಲ್ಲ, ಅವರು ಮಾಡುವ ಕರೆಗಳನ್ನು ಕೂಡ ಸ್ವೀಕರಿಸುತ್ತಿಲ್ಲ.

WhatsApp Group Join Now
Telegram Group Join Now
See also  ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಹೊಸ ರೈಲು,ಇನ್ನು ಮುಂದೆ ನೀವು ಸುಲಭವಾಗಿ ರಾಯರ ದರ್ಶನ ಮಾಡಬಹುದು

ಹೀಗಾಗಿ ಯಾರೇ ಆದರು ಎಷ್ಟು ದಿನ ತಾನೇ ಸಹಿಸಿಕೊಂಡು ಇರುತ್ತಾಳೆ ಎಲ್ಲರಿಗೂ ದುಡ್ಡಿನ ಅವಶ್ಯಕತೆ ಇರುತ್ತದೆ. ಹಾಗಾಗಿ ನಾನು ಈ ರೀತಿ ಮೆಸೇಜ್ ಮಾಡಿ ವಾಯ್ಸ್ ರೆಕಾರ್ಡಿಂಗ್ ಕಳಿಸಿ ಆತನನ್ನು ಎಚ್ಚರಿಸಬೇಕಾಯಿತು. ನಾನು ಪ್ರಾಕ್ಟೀಸ್ ಮಾಡುವ ವೇಳೆ ಇದಕ್ಕಿಂತಲೂ ಹೆಚ್ಚಾಗಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದೇನೆ. ನಾನು ಕೂಡ ನಮ್ಮ ಸ್ನೇಹಿತರಿಗೆ ಹಣ ಕೊಡದೆ ಮೋಸ ಮಾಡುತ್ತಿದ್ದಾರೆ ಎಂದು ದೂರು ಕೊಡಲು ಹೋಗುತ್ತಿದ್ದೇನೆ ಈ ಮೊದಲೇ ನಾವು ಆರ್ ಆರ್ ನಗರದ ಸ್ಟೇಷನ್ ಗೆ ಹೋಗಿದ್ದೆವು, ಆದರೆ ಈತನ ತಾಯಿಯ ಪರಿಸ್ಥಿತಿ ನೆನೆದು ಈತನಿಂದ ಅವರಿಗೆ ನೋವಾಗುವುದು ಬೇಡ ಎಂದು ವಾಪಸ್ ಬಂದೆವು. ಆತ ಹಣದ ಕುರಿತು ಸ್ಪಷ್ಟನೆ ನೀಡಿದ್ದರೆ ನಾನು ಈ ರೀತಿಯಲ್ಲಾ ಮಾತನಾಡುತ್ತಿರಲಿಲ್ಲ ಆ ಸಮಯದಲ್ಲಿ ನನಗೆ ಏನು ಸರಿ ಅನಿಸುತ್ತದೆ ಅದನ್ನು ಮಾತನಾಡಿದೆ ಅಷ್ಟೇ ಎಂದು ಹೇಳಿದ್ದಾರೆ.

[irp]


crossorigin="anonymous">