ಕಟಕ ರಾಶಿಯ ನವೆಂಬರ್ ತಿಂಗಳ ಮಾಸ ಭವಿಷ್ಯ 2022||ಮಾರ್ಗಶಿರ ಮಾಸಮಾರ್ಗಶಿರ ಮಾಸವು ಬಹಳ ವಿಶೇಷವಾಗಿರುವಂತಹ ಮಾಸವಾಗಿದ್ದು ಇದು. 23/11/2022 ರಿಂದ ಪ್ರಾರಂಭವಾಗಿ 23/12/2022 ರ ವರೆಗೆ ಇರುತ್ತದೆ ಹಾಗಾದರೆ ಈ ಮಾರ್ಗಶಿರ ಮಾಸದಲ್ಲಿ ಇರುವಂತಹ ಗ್ರಹ ಸ್ಥಿತಿಗಳ ಬಗ್ಗೆ ನೋಡುವುದಾದರೆ ಗ್ರಹ ಸ್ಥಿತಿಯನ್ನು ನೋಡುವುದಕ್ಕೂ ಮೊದಲು ರವಿಯನ್ನು ನೋಡೋಣ ರವಿಯು 12 ನೇ ತಾರೀಖು ಡಿಸೆಂಬರ್ ನಲ್ಲಿ ಅದರಲ್ಲೂ ಶುಕ್ರವಾರದಂದು ಧನಸ್ಸು ರಾಶಿ ಯನ್ನು ಪ್ರವೇಶ ಮಾಡುತ್ತಾನೆ ಹಾಗಾಗಿ ಈ ಒಂದು ಮಾರ್ಗಶಿರ ಮಾಸದಲ್ಲಿ ರವಿಯ ಸ್ಥಿತಿಗತಿಗಳು ವೃಶ್ಚಿಕ ಮತ್ತು ಧನಸ್ಸು ರಾಶಿಯಲ್ಲಿ ಕಂಡುಬರುವಂತದ್ದು ಇದನ್ನು ಧನುಸಂಕ್ರಮಣ ಎಂದು ಕರೆಯುತ್ತಾರೆ ಹಾಗೂ ಇದನ್ನು ಧನುರ್ಮಾಸ ಎಂದು ಕರೆದು ಈ ಒಂದು ಮಾಸದಲ್ಲಿ ಪ್ರತಿಯೊಬ್ಬರೂ ಕೂಡ ಪ್ರತಿ
ಯೊಂದು ದೇವಾನುದೇವತೆಗಳನ್ನು ಕೂಡ ಆರಾಧಿಸುತ್ತಾರೆ.
ಅದರಲ್ಲೂ ಈ ಒಂದು ಮಾಸ ದೇವರನ್ನು ಪೂಜಿಸುವು ದಕ್ಕೆ ಇರುವಂತಹ ಬಹಳ ಪ್ರಮುಖವಾದಂತಹ ಮಾಸ ಎಂದೇ ಹೇಳಬಹುದು ಅದರಲ್ಲೂ ಈ ತಿಂಗಳು ಪ್ರಾರಂಭವಾದ ಮೊದಲನೆಯ ದಿನದಿಂದ ಒಂದು ತಿಂಗಳ ತನಕ ಬೆಳಗ್ಗಿನ ಸಮಯ ಸೂರ್ಯ ಉದಯಿ ಸುವುದಕ್ಕೂ ಮುನ್ನ ಎದ್ದು ಎಲ್ಲಾ ದೇವಾನುದೇವತೆ ಗಳನ್ನು ಆರಾಧಿಸುವುದರಿಂದ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ ಅದರಂತೆ ಧನುರ್ಮಾಸದಲ್ಲಿ ಹಲವಾರು ಹರಕೆಗಳನ್ನು ಹೊತ್ತು ಪೂಜೆಯನ್ನು ಮಾಡಿದರೆ ನಿಮ್ಮ ಇಷ್ಟಾರ್ಥ ಗಳು ಸಿದ್ಧಿಯಾಗುತ್ತದೆ ಎಂದು ಶಾಸ್ತ್ರಪುರಾಣಗಳು ಹೇಳುತ್ತವೆ ಅದರಂತೆ ಎಲ್ಲರೂ ಕೂಡ ಈ ಒಂದು ಸಮಯದಲ್ಲಿ ಬಹಳ ನಿಷ್ಠೆ ಇಂದ ಪೂಜಿಸುತ್ತಾರೆ ಅದರಲ್ಲೂ ಮದುವೆಯಾಗದೆ ಇರುವಂತಹ ಹೆಣ್ಣು ಮಕ್ಕಳು ಈ ಒಂದು ಸಮಯದಲ್ಲಿ ಅರಳಿ ಮರವನ್ನು ಪೂಜಿಸುತ್ತಾ ಬಂದರೆ ನಿಮಗೆ ಶುಭ ಸಮಯ ಕೂಡಿಬರುತ್ತದೆ ಎಂದೇ ಹೇಳುತ್ತಾರೆ.
ಹಾಗಾದರೆ ಈ ಒಂದು ಮಾರ್ಗಶಿರ ಮಾಸದಲ್ಲಿ ಕರ್ಕಾಟಕ ರಾಶಿಯವರ ರಾಶಿ ಭವಿಷ್ಯವನ್ನು ನೋಡುವುದಾದರೆ ಮುಖ್ಯವಾಗಿ ಕರ್ಕಾಟಕ ರಾಶಿ ಯಲ್ಲಿ ಚಂದ್ರನು ರಾಶ್ಯಾಧಿಪತಿಯಾಗಿದ್ದು ಇವನು ಪ್ರತಿಯೊಂದೂ ರಾಶಿಯ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತಾನೆ.ಅದರಲ್ಲೂ ಕರ್ಕಾಟಕ ರಾಶಿಯವರು ಪ್ರತಿನಿತ್ಯ ನಿಮ್ಮ ತಂದೆ ತಾಯಿಗಳಿಗೆ ನಮಸ್ಕರಿಸುತ್ತಾ ಅವರ ಆಶೀರ್ವಾದವನ್ನು ಪಡೆಯುತ್ತ ಮುಂದೆ ಸಾಗುವುದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ ಅದರಲ್ಲೂ ದ್ವಿತೀಯಾಧಿಪತಿಯಾ ದಂತಹ ರವಿಯು ಪಂಚಮ ಮತ್ತು ಷಷ್ಟದಲ್ಲಿ ಇರುವಂತದ್ದು ಇದರಿಂದ ಯಾರಾದರೂ ಸರ್ಕಾರಿ ಕೆಲಸಕ್ಕೆ ಹುಡುಕಾಡುತ್ತಿದ್ದರೆ ಅಂತವರಿಗೆ ಸರ್ಕಾರಿ ಕೆಲಸ ಸಿಗುವಂತದ್ದು ಹಾಗೂ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಉನ್ನತಿ ಜೊತೆಗೆ ಶೇರ್ ಮಾರ್ಕೆಟ್ ನಡೆಸುತ್ತಿರುವವರಿಗೆ ಹೆಚ್ಚಿನ ಹಣದ ಆಗಮನ ಆಗುವಂಥದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.