ಪೆಟ್ರೋಲ್ ಡೀಸೆಲ್ ಉತ್ಪಾದನಾ ಪ್ರಕ್ರಿಯೆ||
ತುಂಬಾ ಜನ ಪೆಟ್ರೋಲ್ ಡೀಸಲ್ ಅನ್ನು ತಯಾರಿಸು ವುದು ಸುಲಭ ಎಂದುಕೊಂಡಿದ್ದಾರೆ ಆದರೆ ಇದರ ತಯಾರಿಕೆಯ ವಿಧಾನ ತುಂಬಾ ಕಷ್ಟ ಇದರ ತಯಾರಿಕೆ ಯ ವಿಧಾನದಿಂದಲೇ ಇದು ಇಷ್ಟೊಂದು ದುಬಾರಿ ಯಾಗಿದೆ ಇದಕ್ಕಾಗಿ ಕಂಪನಿಗಳು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಅದೇ ರೀತಿ ಯಾವ ಕಂಪನಿಯೂ ಕೂಡ ಭೂಮಿಯಿಂದ ನೇರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತೆಗೆಯುವುದಿಲ್ಲ ಇದಕ್ಕಾಗಿ ತುಂಬಾ ಕಷ್ಟ ಪಡಲೇ ಬೇಕಾಗುತ್ತದೆ ಈ ಪೆಟ್ರೋಲ್ ಮತ್ತು ಡೀಸೆಲ್ ನ ಮಿಶ್ರಣ ಭೂಮಿಯ ಒಳಗೆ ಕಪ್ಪು ದ್ರವದ ಹಾಗೆ ಇರುತ್ತದೆ ಇದನ್ನು ಕ್ರೂಡ್ ಆಯಿಲ್ ಎಂದು ಕರೆಯುತ್ತಾರೆ ಈ ಕ್ರೂಡ್ ಆಯಿಲ್ ನಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರವಲ್ಲದೆ ಕಿರೋಸಿನ್ ವ್ಯಾಕ್ಸ್ ಗ್ಯಾಸ್ ಪ್ಲಾಸ್ಟಿಕ್ ಈ ರೀತಿ ಆರು ಸಾವಿರ ಪ್ರಾಡಕ್ಟ್ಸ್ ಅನ್ನು ತಯಾರಿಸಬಹುದು.
ಕಾರ್ಬನ್ ಹೈಡ್ರೋಜನ್ ನೈಟ್ರೋಜನ್ ಆಕ್ಸಿಜನ್ ಸಲ್ಫಾರ್ ಐರನ್ ನಿಕಲ್ ಈ ರೀತಿ ತುಂಬಾ ಕೆಮಿಕಲ್ ಕಾಂಪೋನೆಂಟ್ಸ್ ಈ ಕ್ರೂಡ್ ಆಯಿಲ್ ನಲ್ಲಿ ಇರುತ್ತದೆ ಆದರೆ ಇಲ್ಲಿ ಬರುವ ಪ್ರಶ್ನೆ ಏನು ಎಂದರೆ ಈ ಕ್ರೂಡ್ ಆಯಿಲ್ ಹೇಗೆ ತಯಾರಾಯಿತು ಅಂತ ಲಕ್ಷಾಂತರ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ನಡೆದ ಪ್ರಕೃತಿ ವಿಕೋಪದಿಂದಾಗಿ ಆ ಕಾಲದಲ್ಲಿ ಇದ್ದಂತಹ ಮರ ಗಿಡಗಳು ಪ್ರಾಣಿ ಪಕ್ಷಿಗಳು ಸತ್ತು ಹೋಗಿ ಭೂಮಿಯ ಒಳಗೆ ಹೋಗಿಬಿಡುತ್ತದೆ ಈ ರೀತಿ ಅವುಗಳು ಭೂಮಿಯ ಒಳಗೆ ಸಾವಿರ ವರ್ಷಗಳ ತನಕ ಹಾಗೆ ಇದ್ದ ಕಾರಣ ಆ ಪ್ರೆಶರ್ ಹಾಗೂ ಅಲ್ಲಿ ಇದ್ದಂತಹ ಹೀಟ್ ಕಾರಣದಿಂದಾಗಿ ಅವು ದ್ರವರೂಪಕ್ಕೆ ಬದಲಾಗಿ ಈ ರೀತಿ ಕ್ರೂಡ್ ಆಯಿಲ್ ಆಗಿ ಬದಲಾಗಿದೆ ಎಂದು ಹೇಳಲಾಗುತ್ತೆ.
ಇಂಥ ಕ್ರೂಡ್ ಆಯಿಲ್ ಸಿಗುವಂತಹ ಪ್ರದೇಶಗಳು ಭೂಮಿಯ ಮೇಲೆ ಮತ್ತು ಸಮುದ್ರದ ಒಳಗೆ ಈಗಲೂ ಇವೆ ಈ ರೀತಿ ಮಾನವ ಕ್ರೂಡ್ ಆಯಿಲ್ ಅನ್ನು ಕಂಡು ಹಿಡಿದು ಅದರ ವಿಶೇಷತೆಗಳನ್ನು ತಿಳಿದು ಕೊಂಡ ನಂತರ ದೊಡ್ಡ ದೊಡ್ಡ ಕೊಳವೆ ಬಾವಿಗಳನ್ನು ಅಗೆದು ಕ್ರೂಡ್ ಆಯಿಲ್ ಅನ್ನು ಹೊರತೆಗೆಯಲು ಪ್ರಯತ್ನ ಪಡುತ್ತಾನೆ ಈ ರೀತಿ ಹೊರ ತೆಗೆದಂತಹ ಕ್ರೂಡ್ ಆಯಿಲ್ ಅನ್ನು ಫ್ಯಾಕ್ಟರಿಗಳಿಗೆ ತೆಗೆದುಕೊಂಡು ಹೋಗುತ್ತಾರೆ ಈ ಫ್ಯಾಕ್ಟರಿಗಳನ್ನು ಆಯಿಲ್ ರಿಫೈನರಿ ಅಥವಾ ಪೆಟ್ರೋಲಿಯಂ ರಿಫೈನರಿ ಅಂತ ಕರೆಯ ಲಾಗುತ್ತದೆ ಈ ಕ್ರೂಡ್ ಆಯಿಲ್ ಎಲ್ಲಾ ಪ್ರದೇಶಗಳಲ್ಲಿ ಯೂ ಸಿಗುವುದಿಲ್ಲ ಅಂತ ನಮಗೆಲ್ಲರಿಗೂ ಗೊತ್ತು ಇದು ಪ್ರಪಂಚದ ಕೆಲವು ದೇಶಗಳಲ್ಲಿ ಮಾತ್ರ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.