ಕಾಂತಾರ ದೈವ ಪಾತ್ರಿಯ ದುಃಖದ ಕಥೆ ಫ್ಯಾಮಿಲಿಗೆ ಕಾಂತಾರ ತೋರಿಸಲು ದುಡ್ಡು ಇರಲಿಲ್ಲ…ಒಬ್ಬ ಕಲಾವಿದನ ಕಷ್ಟದ ಜೀವನ ಹಾಗೂ ಸಮಯ ಹೇಗಿರುತ್ತೆ ನೋಡಿ

ಕಾಂತಾರ ದೈವ ಪಾತ್ರಿಯ ನವೀನ್ ಬೊಂದೇಲ್ ಪತ್ನಿ ಅವರ ದುಃಖದ ಕಥೆ!!ಕಾಂತರಾ ಸಿನಿಮಾದಲ್ಲಿ ಮಾಡಿರುವಂತಹ ಪ್ರತಿಯೊಂದು ಪಾತ್ರಗಳು ಕೂಡ ಅಷ್ಟೇ ವಿಭಿನ್ನತೆ ಯನ್ನು ಒಳಗೊಂಡಿದ್ದು ಆ ಪಾತ್ರಗಳು ಕೂಡ ಆ ಚಿತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ಈ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದೆ ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬೆಳೆದು ನಿಂತಿರುವಂತಹ ಈ ಒಂದು ಚಿತ್ರ ಕನ್ನಡ ಭಾಷೆಯಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಹೆಮ್ಮೆಯ ವಿಷಯವಾಗಿದೆ ಎಂದೇ ಹೇಳಬಹುದು ಅಷ್ಟರಮಟ್ಟಿಗೆ ಈ ಒಂದು ಚಿತ್ರ ತೆರೆ ಕಂಡಿದೆ ಅದರಲ್ಲೂ ಎಲ್ಲಾ ಭಾಷೆಯಲ್ಲಿಯೂ ಕೂಡ ತೆರೆಕಂಡಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ.

ಅದರಂತೆ ಕಾಂತಾರ ಚಿತ್ರದಲ್ಲಿ ನಟಿಸಿರುವಂತಹ ಪ್ರತಿಯೊಬ್ಬ ಕಲಾವಿದರು ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು ಪ್ರತಿಯೊಬ್ಬರಿಗೂ ಕೂಡ ಆ ಒಂದು ಪಾತ್ರ ಹೇಳಿ ಮಾಡಿಸಿದಂತೆ ಇದೆ ಅದರಂತೆ ಕಾಂತಾರ ಸಿನಿಮಾದಲ್ಲಿ ಮೊದಲನೆಯ ದಾಗಿ ಬರುವಂತಹ ದೈವಿಕ ಪಾತ್ರವನ್ನು ಮಾಡಿರುವ ನವೀನ್ ಬೋoದೇಲ್ ಅವರು ಈ ಒಂದು ಚಿತ್ರದಲ್ಲಿ ಒಂದು ಕ್ಷಣ ಬಂದು ಹೋಗುವಂತಹ ಪಾತ್ರವನ್ನು ಮಾಡಿದ್ದರು ಕೂಡ ಅವರ ಪಾತ್ರವನ್ನು ಸಿನಿಮಾ ನೋಡಿದಂತಹ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಂಡಿ ದ್ದಾರೆ ಅದರಂತೆಯೇ ಇವರು ಈ ಹಿಂದಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರೂ ಆದರೆ ಅವರು ಯಾವುದೇ ರೀತಿಯಲ್ಲಿಯೂ ಕೂಡ ಅಭಿವೃದ್ಧಿಯನ್ನು ಹೊಂದಲಿಲ್ಲ ಬದಲಾಗಿ ಅವರು ಅನೇಕ ಕಷ್ಟದ ದಿನಗಳನ್ನು ಕಳೆಯುವಂತಹ ಸನ್ನಿವೇಶಗಳನ್ನು ಎದುರಿಸಿದ್ದರು.ಅದರಂತೆ ಒಂದು ಹೊತ್ತಿನ ಊಟಕ್ಕೂ ಕೂಡ ಪರೆದಾಡುವಂತಹ ಪರಿಸ್ಥಿತಿಯನ್ನು ಎದುರಿಸಿದ್ದರು ಎಂಬ ವಿಷಯಗಳನ್ನು ಸ್ವತಹ ಅವರೇ ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಅದರಂತೆಯೇ ಇವರು ತಮ್ಮ ಕಷ್ಟದ ದಿನಗಳಲ್ಲಿ ಬಸ್ ಕಂಡಕ್ಟರ್ ಆಗಿಯೂ ಕೂಡ ಕೆಲಸವನ್ನು ನಿರ್ವಹಿಸುವುದರ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ ಹಾಗೂ ಅವರ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮೀಡಿಯಾದ ಮುಂದೆ ಮೌನವಾಗುತ್ತಾರೆ ಅಷ್ಟರ ಮಟ್ಟಿಗೆ ನವೀನ್ ಬೋಂದೆಲ್ ಅವರು ಕಷ್ಟ ಪಟ್ಟಿದ್ದಾರೆ ಹಾಗೂ ಇವರು ಕೆಲವೊಮ್ಮೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಹ ಮಟ್ಟಕ್ಕೂ ಹೋಗಿದ್ದೆ ಎಂದು ಹೇಳುತ್ತಾರೆ ಯಾರೇ ಆಗಲಿ ತಮ್ಮ ಕಷ್ಟದ ಜೀವನಗಳಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಬೇಕೇ ಹೊರತು ಇಂತಹ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ನಾನು ನಂಬಿದ ದೇವರು ನನ್ನನ್ನು ಕೈ ಬಿಡಲಿಲ್ಲ ಆದ್ದರಿಂದ ನಾನು ನನ್ನ ಜೀವನದಲ್ಲಿ ಕೊರಗಜ್ಜನನ್ನು ನೆನೆಯುತ್ತಾ ಬದುಕುತ್ತೇನೆ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]