ಪ್ರತಿನಿತ್ಯ ನಿಮಗೆ ಗೊತ್ತಿಲ್ಲದೆ ಮಾಡುತ್ತಿರುವ ಈ 10 ತಪ್ಪುಗಳಿಂದ ನಿಮ್ಮ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ.ಈ ಸಣ್ಣಪುಟ್ಟ ತಪ್ಪುಗಳು ಎಷ್ಟು ತೊಂದರೆ ತರುತ್ತದೆ ನೋಡಿ

ಹೈಜೆನಿಕ್ ವಿಷಯದಲ್ಲಿ ನಾವು ಪ್ರತಿನಿತ್ಯವೂ ಮಾಡುತ್ತಿರುವ ತಪ್ಪುಗಳು ಇವು…ಇತ್ತೀಚಿನ ದಿನಗಳಲ್ಲಿ ವಿಚಿತ್ರ ವಿಚಿತ್ರ ಕಾಯಿಲೆಗಳು ಶುರು ಆಗಿವೆ. ಎಲ್ಲವೂ ಅಶುದ್ಧತೆ ಹಾಗೂ ಅಸ್ವಚ್ಛತೆಯ ಕಾರಣದಿಂದ ಬರುತ್ತಿರುವುದರಿಂದ ನಾವು ತಿನ್ನುವ ಆಹಾರ ಆರೋಗ್ಯಕರವಾಗಿ ಶುದ್ಧವಾಗಿರಬೇಕು ಎಂದುಕೊಳ್ಳುವುದರ ಜೊತೆಗೆ ನಮ್ಮ ಸುತ್ತಲ ವಾತಾವರಣ ಕೂಡ ಅದೇ ರೀತಿ ಇರಬೇಕು ಎನ್ನುವುದರ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಇಲ್ಲವಾದಲ್ಲಿ ದೇಹಕ್ಕೆ ಅನೇಕ ವೈರಸ್ ಬ್ಯಾಕ್ಟೀರಿಯಾ ಮುಂತಾದವುಗಳ ಸೋಂಕು ಒಟ್ಟಾಗಿ ರೋಗಕ್ಕೆ ತುತ್ತಾಗಬೇಕಾಗುತ್ತದೆ. ನಾವು ಶುದ್ಧತೆಯ ಬಗ್ಗೆ ಎಷ್ಟು ಗಮನ ಕೊಟ್ಟರು ಹೈಜೆನಿಕ್ ವಿಷಯದಲ್ಲಿ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾಗಿ ಈ ತಪ್ಪುಗಳನ್ನು ಎಲ್ಲರೂ ಮಾಡೇ ಮಾಡುತ್ತಾರೆ. ಇನ್ನು ಮುಂದೆ ಆದರೂ ಅದನ್ನು ಸರಿ ಮಾಡಿಸಿಕೊಳ್ಳುವ ಪ್ರಯತ್ನ ಮಾಡಿ ಮೊದಲನೆಯದಾಗಿ ಒಂದು ಮನೆಯಲ್ಲಿ ಎಷ್ಟೇ ಜನ ಇದ್ದರೂ ಕೂಡ ಎಲ್ಲರೂ ಒಂದೇ ನೇಲ್ ಕಟರ್ ಅನ್ನು ಬಳಸುತ್ತಾರೆ ಇದು ಬಹಳ ತಪ್ಪು.

ಒಬ್ಬರು ಬಳಸಿದ ನೇಲ್ ಕಟರ್ ಅನ್ನು ಮತ್ತೊಬ್ಬರು ಬಳಸುವುದರಿಂದ ಆ ನೇಲ್ ಕಟರ್ ಮೂಲಕ ಒಬ್ಬರ ದೇಹದ ಸೋಂಕು ಮತ್ತೊಬ್ಬರ ದೇಹವನ್ನು ಸೇರಬಹುದು ಹಾಗಾಗಿ ಪ್ರತಿಯೊಬ್ಬರೂ ಇಂಡಿವಿಷಲ್ ಆಗಿ ಬೇರೆಬೇರೆ ನೇಲ್ ಕಟರ್ ಬಳಸುವುದು ಒಳ್ಳೆಯದು ಅಥವಾ ಅನಿಯವಾರ್ಯವಾಗಿ ಬೇರೆಯವರ ನೇಲ್ ಕಟರ್ ಬಳಸಲೇಬೇಕಾದ ಸಂದರ್ಭ ಬಂದಾಗ ಅದನ್ನು ನೀಟಾಗಿ ಬಿಸಿನೀರಿನಿಂದ ತೊಳೆದು ನಂತರ ಬಳಸಬೇಕು. ಜೊತೆಗೆ ನಾವು ಕಿವಿಯಲ್ಲಿರುವ ತ್ಯಾಜ್ಯವನ್ನು ತೆಗೆಯಲು ಬಡ್ಸ್ ಗಳನ್ನು ಬಳಸುತ್ತೇವೆ. ಆದರೆ ಅವುಗಳನ್ನು ಬಳಸುವುದರಿಂದ ಅವುಗಳ ಮೂಲಕವೇ ಕಿವಿಗೆ ಸೋಂಕುಗಳು ಹೋಗಬಹುದು. ಆದ್ದರಿಂದ ಸ್ನಾನ ಮಾಡುವಾಗ ಶುದ್ಧವಾದ ನೀರಿನಿಂದ ಕಿವಿಯನ್ನು ಸ್ವಚ್ಛ ಮಾಡಿದರೆ ಸಾಕು ಇಯರ್ ಬಡ್ ಇಂದ ಶುದ್ಧ ಮಾಡುವ ಅವಶ್ಯಕತೆ ಬರುವುದಿಲ್ಲ. ಮೂರನೆಯ ಹಾಗೂ ಪ್ರಮುಖ ವಿಷಯವೇನೆಂದರೆ ನಾವು ಪ್ರತಿನಿತ್ಯ ಹಲವು ವಸ್ತುಗಳನ್ನು ಬಳಸುತ್ತೇವೆ ಪೆನ್ನು, ಚಮಚ, ಮೊಬೈಲ್, ರಿಮೋಟ್, ಕೀಗಳು ಇತ್ಯಾದಿ ವಸ್ತುಗಳನ್ನು ದಿನಕ್ಕೆ ಹಲವಾರು ಬಾರಿ ಬಳಸುತ್ತೇವೆ ಮತ್ತು ಇವುಗಳನ್ನು ಟಾಯ್ಲೆಟ್ ಇಂದ ಹಿಡಿದು ಎಲ್ಲಾ ಕಡೆಗೂ ಕೂಡ ತೆಗೆದುಕೊಂಡು ಹೋಗುತ್ತೇವೆ.

WhatsApp Group Join Now
Telegram Group Join Now

ಆಗ ಅವುಗಳ ಮೇಲೆಲ್ಲಾ ಸೂಕ್ಷ್ಮಾಣು ಜೀವಿಗಳು ಕೂತಿರುವ ಸಂಭವ ಇರುತ್ತವೆ ಹಾಗಾಗಿ ಆಗಾಗ ಅವುಗಳನ್ನು ಕೂಡ ಸ್ಯಾನಿಟೈಸ್ ಮಾಡಲೇಬೇಕು ಅಥವಾ ಅವುಗಳನ್ನು ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗದೆ ಇರುವುದು ಒಳ್ಳೆಯದು. ನಾವು ಹೇಗೆ ಚಪ್ಪಲಿಗಳನ್ನು ಬೆಡ್ ಕವರ್ ಗಳನ್ನು ಇತ್ಯಾದಿಗಳನ್ನು ವಾರಕ್ಕೊಮ್ಮೆ ಶುದ್ಧಗೊಳಿಸುತ್ತೇವೋ ಹಾಗೆಯೇ ನಾವು ಬಳಸುವ ಟೂತ್ ಬ್ರಷ್ ಅನ್ನು ಕೂಡ ಸ್ವಚ್ಛಗೊಳಿಸುವುದು ಅಥವಾ ಬದಲಾಯಿಸುವುದು ಬಹಳ ಮುಖ್ಯ. ವೈದ್ಯರುಗಳು ಹೇಳುವ ಪ್ರಕಾರ ಎರಡು ಅಥವಾ ಮೂರು ತಿಂಗಳಿಗೊಮ್ಮೆ ನಮ್ಮ ಟೂತ್ ಬ್ರಷ್ ಅನ್ನು ಬದಲಾಯಿಸುವುದರಿಂದ ಅನೇಕ ಇನ್ಫೆಕ್ಷನ್ ಗಳಿಂದ ದೇಹವನ್ನು ರಕ್ಷಿಸಬಹುದು. ಇದೇ ರೀತಿಯಾಗಿ ಈ ವಿಷಯದ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]