ಮುಖ್ಯಮಂತ್ರಿ ವಸತಿ ಯೋಜನೆ 2022 – 23||
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅವರ ಕಡೆಯಿಂದ 2 B H K ಮನೆಯನ್ನು ಪಡೆಯಲು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದಕ್ಕೆ ಆಹ್ವಾನಿಸಲಾಗಿದೆ ಹಾಗಾದರೆ ಇದಕ್ಕೆ ಯಾವ ರೀತಿ ಅರ್ಜಿಯನ್ನು ಹಾಕಬೇಕು ಯಾವುದೆಲ್ಲ ದಾಖಲಾತಿ ಗಳು ಬೇಕು ಹಾಗು ಯಾರು ಯಾರು ಇದಕ್ಕೆ ಅರ್ಜಿಯನ್ನು ಹಾಕಬಹುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂದು ಆಸೆ ಪಡುತ್ತಿರುತ್ತಾರೆ ಅದರಂತೆಯೇ ಕಡಿಮೆ ಬೆಲೆಯಲ್ಲಿ ಯಾರಿಗಾದರೂ ಜಾಗ ಸಿಕ್ಕರೆ ಅವುಗಳನ್ನು ಖರೀದಿಸಿ ಬಹಳ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಪರವಾಗಿಲ್ಲ ಮನೆಯನ್ನು ಕಟ್ಟಲೇಬೇಕು ಎಂದು ನಿರ್ಧಾರ ಮಾಡಿ ತಮ್ಮ ಜೀವನದಲ್ಲಿ ಒಂದು ಮಹತ್ತರವಾದಂತಹ ಕೆಲಸವನ್ನು ಮಾಡುವುದರ ಮುಖಾಂತರ ಪ್ರತಿಯೊಬ್ಬರು ಮನೆಯನ್ನು ಕಟ್ಟುವುದರ ಮುಖಾಂತರ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ.
ಅದೇ ರೀತಿ ಎಲ್ಲರೂ ಕೂಡ ಮನೆಯನ್ನು ಕಟ್ಟುವುದಕ್ಕೆ ಆಗುವುದಿಲ್ಲ ಕೆಲವೊಬ್ಬರು ಆರ್ಥಿಕವಾಗಿ ಹಣಕಾಸಿ ನಲ್ಲಿ ಹಿಂದೆ ಇರುತ್ತಾರೆ ಅಂತವರು ತಮ್ಮ ಜೀವನವನ್ನು ಸಾಗಿಸಿಕೊಂಡು ಹೋದರೆ ಸಾಕು ಎಂಬ ಮಟ್ಟದಲ್ಲಿ ಇರುತ್ತಾರೆ ಆದರೆ ಅಂಥವರು ಮನೆ ಕಟ್ಟಲು ಆಗುವುದಿಲ್ಲ ಎಂದು ತಾವೇ ನಿರ್ಧಾರ ಮಾಡಿ ತಮ್ಮ ಬಳಿ ಇರುವಂತಹ ಹಣದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ.ಹಾಗಾಗಿ ಅಂಥವರಿಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶವನ್ನು ಸರ್ಕಾರ ನೀಡುತ್ತಿದ್ದು ಅದರಲ್ಲೂ ಇಂತಿಷ್ಟು ಎಂಬ ಹಣವನ್ನು ಮಾತ್ರ ಅವರು ಪಾವತಿಸಿ ಈ ಒಂದು ಮನೆಯನ್ನು ಅವರು ಕಟ್ಟಿಸಬಹುದಾಗಿದೆ ಹಾಗಾದರೆ ಅದಕ್ಕೆ ಯಾವುದೆಲ್ಲ ರೀತಿಯ ನಿಯಮಗಳು ಇರುತ್ತದೆ ಹಾಗೂ ಯಾವ ಯಾವ ಅರ್ಹತೆಗಳು ಇರಬೇಕು ಎಂಬಂತಹ ಮಾಹಿತಿಯನ್ನು ನೋಡುವುದಾದರೆ.
ಹಾಗಾದರೆ ಯಾವ ಯಾವ ದಾಖಲಾತಿಗಳು ಬೇಕು ಎಂದು ನೋಡುವುದಾದರೆ ಆಧಾರ್ ಸಂಖ್ಯೆ ಜಾತಿ ಪ್ರಮಾಣ ಪತ್ರ ಕುಟುಂಬದ ಪಡಿತರ ಚೀಟಿ ಸಂಖ್ಯೆ ಕುಟುಂಬದ ಆದಾಯ ಪ್ರಮಾಣ ಪತ್ರ ನೀವೇನಾದರು ಬೆಂಗಳೂರಿನಲ್ಲಿ ನೆಲೆಸಿದ್ದು ಅಲ್ಲಿಯೇ ಇರುವಂತಹವ ರಾದರೆ ನೀವು ನೆಲೆಸಿರುವಂತಹ ಸ್ಥಳದ ಐದು ವರ್ಷದ ವಾಸಸ್ಥಳ ದೃಢೀಕರಣ ಪತ್ರ ಬ್ಯಾಂಕ್ ಪಾಸ್ ಬುಕ್ ಪ್ರತಿ ಇದರ ಜೊತೆಗೆ ದಿವ್ಯಾಂಗ ಚೇತನ ಗುರುತಿನ ಚೀಟಿ ಇವೆಲ್ಲವನ್ನೂ ಕೂಡ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಈ ಒಂದು ಮನೆಯನ್ನು ಕಟ್ಟುವುದಕ್ಕೆ 14 ಲಕ್ಷ ಖರ್ಚಾಗು ತ್ತಿದ್ದು ಇದನ್ನು ನೀವು ಮೂರು ಕಂತುಗಳಲ್ಲಿ ಪಾವತಿಸ ಬಹುದಾಗಿದೆ ಮೊದಲನೆಯ ಕಂತಿನಲ್ಲಿ 3ಲಕ್ಷ ಎರಡನೆಯ ಕoತಿನಲ್ಲಿ 5 ಲಕ್ಷ ಮೂರನೇ ಕಂತಿನಲ್ಲಿ 6ಲಕ್ಷ ಹಣವನ್ನು ನೀವು ಪಾವತಿಸಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.