ನೀವು ಶಿರಡಿಗೆ ಹೋಗದಿದ್ದರೂ ಪರವಾಗಿಲ್ಲ ಈ ವಿಡಿಯೋ ಪೂರ್ತಿ ನೋಡಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ.. » Karnataka's Best News Portal

ನೀವು ಶಿರಡಿಗೆ ಹೋಗದಿದ್ದರೂ ಪರವಾಗಿಲ್ಲ ಈ ವಿಡಿಯೋ ಪೂರ್ತಿ ನೋಡಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ..

ಪವಾಡ ಪುರುಷ ಶಿರಡಿ ಸಾಯಿಬಾಬಾ ಕಥೆ!!
ಶಿರಡಿ ಸಾಯಿಬಾಬಾ ಅವರ ಭಾವಚಿತ್ರಗಳನ್ನು ನಾವು ಮನೆಗಳಲ್ಲಿ ಅಂಗಡಿ ಹೋಟೆಲ್ ಗಳಲ್ಲಿ ಮಂದಿರಗ ಳಲ್ಲಿ ವಾಹನಗಳಲ್ಲಿ ಹೀಗೆ ಬಹುತೇಕ ಕಡೆಗಳಲ್ಲಿ ನಾವು ಕಾಣಬಹುದಾಗಿದೆ ಬಾಬಾ ಅವರು ಮಹಾರಾಷ್ಟ್ರದ ಅಹಮದ್ ನಗರದ ಜಿಲ್ಲೆಯ ಶಿರಡಿಯಲ್ಲಿ ನೆಲೆಸಿದ್ದ ಓರ್ವ ಮಹಾಸಂತನೆಂದು ಸುಪ್ರಸಿದ್ಧರು ನಮ್ಮ ರಾಷ್ಟ್ರದಲ್ಲಿ ಜೀವಿಸಿ ಹೋದ ಅಘಣಿತ ಸಾಧು ಸತ್ಪುರುಷರಲ್ಲಿ ಇವರು ಅಗ್ರಗಣ್ಯರು. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೂಪ್ ಕೇಡ್ ಎಂಬ ಗ್ರಾಮದ ಛಾಯಾಂಗಬ ಎಂಬ ಪಟೇಲ ತನ್ನ ಕುದುರೆ ಯನ್ನು ಕಳೆದುಕೊಂಡ ಎಲ್ಲಿ ಹುಡುಕಿದರೂ ಸಿಗಲಿಲ್ಲ ಸುಮಾರು ಒಂದು ವಾರದ ನಂತರ ರಸ್ತೆಯ ಬದಿಯಲ್ಲಿ ಸುಮಾರು 16 ವರ್ಷದ ವಯಸ್ಸಿನ ಗಂಭೀರ ಮುಖ ಮುದ್ರೆಯ ಹೊಳೆಯುವ ಕಣ್ಣುಗಳುಳ್ಳ ಫಕೀರ ವೇಷಧಾರಿ ಯುವಕನನ್ನು ಕರೆದು ವಿಚಾರಿಸಿ ಪಟೇಲ ನಿನ್ನ ಕುದುರೆ.

ಆ ಬೇಲಿಯಿಂದ ಆಚೆ ಹುಲ್ಲು ಮೇಯುತ್ತಿದೆ ನೋಡು ಎಂದು ಒತ್ತಾಗಿ ಬೆಳೆದಂತಹ ದಟ್ಟ ಬೇಲಿಯೊಂದನ್ನು ತೋರಿಸಿದ ಛಾಂಗ್ ಬಾಯ್ ಅಲ್ಲಿ ಹೋಗಿ ನೋಡಿದಾ ಗ ಕುದುರೆ ಸದ್ದಿಲ್ಲದೆ ಹುಲ್ಲು ಮೇಯತ್ತಿರುವುದನ್ನು ಕಂಡು ಆಶ್ಚರ್ಯಗೊಂಡ ತನ್ನ ಪರಿಚಯವಿಲ್ಲದಿದ್ದರೂ ನಾನು ಪಟೇಲನೆoದು ಗುರುತಿಸಿ ನನ್ನ ಕುದುರೆಯನ್ನು ಪತ್ತೆ ಹಚ್ಚಿದಂತಹ ಈ ಹುಡುಗನಲ್ಲಿ ಅದ್ಭುತವಾದ ದೈವಾಂಶವಿದೆಯೆಂದು ಪ್ರಪ್ರಥಮವಾಗಿ ಖಚಿತ ಪಡಿಸಿಕೊಂಡ ಛಾಂಗ್ ಬಾಯ್ ತನ್ನ ಸ್ನೇಹಿತರಿಗೆ ತನ್ನ ನೆರೆಹೊರೆಯವರಿಗೂ ಈ ವಿಷಯ ತಿಳಿಸಿದ ಆಗ ಈ ಯುವಕನ ಕೀರ್ತಿ ನಾಡಿನೆಲ್ಲೆಡೆ ಹಬ್ಬಲು ಈ ಘಟನೆ ಕಾರಣವಾಯಿತು.ಕೆಲವು ತಿಂಗಳ ಬಳಿಕ ಮದುವೆಯ ತಂಡವೊಂದು ದೂಪ್ ಕೇಡ್ ಗ್ರಾಮದಿಂದ ಶಿರಡಿಗೆ ಹೊರಟಾಗ ಈ ಫಕೀರ ಹುಡುಗನು ಜೊತೆಯಲ್ಲಿ ಹೊರಟ ಶಿರಡಿಯ ಹೊರವಲಯವನ್ನು ಪ್ರವೇಶಿಸು ತ್ತಲೇ ಅಲ್ಲಿದ್ದ ಕಂಡೋಬ ದೇವಾಲಯವನ್ನು ಕಂಡು ದೇವರಿಗೆ ನಮಸ್ಕರಿಸುವ ಸಲುವಾಗಿ ತಂಡ ಅಲ್ಲಿ ಕೊಂಚ ಕಾಲ ತಂಗಿತ್ತು.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಆಗ ಕಂಡೋಬಾ ಮಂದಿರದ ಪೂಜಾರಿ ಮಾಲ್ಸಾಪತಿ ಎಂಬುವವರು ಆ ತೇಜೋಮಯ ತರುಣನನ್ನು ಗಮನಿಸಿ ಸಹಜ ಪ್ರಶಂಸೆಯೊಂದಿಗೆ ಆವೋ ಸಾಯಿ ಎಂದು ಉದ್ಘಿರಿಸಿದರು 1854ನೇ ಇಸವಿಯ ಆ ದಿನದಿಂದ ಇಲ್ಲಿಯವರೆಗೂ ಆತನ ಹೆಸರು ಜೀವಮಾನ ಪೂರ್ತಿ ಮಾತ್ರವಲ್ಲದೆ ಆತನ ಕಾಲಾ ನಂತರವೂ ಶಾಶ್ವತವಾಗಿ ಉಳಿಯಿತು ಅಂದಿನಿಂದ ಶಿರಡಿಯಲ್ಲಿಯೇ ನೆಲೆಸಿದ ಆತನ ನಿಜ ನಾಮದೇಯ ವಾಗಲಿ ಜನ್ಮಸ್ಥಳವಾಗಲಿ ಯಾರಿಗೂ ಕೂಡ ತಿಳಿಯಲೇ ಇಲ್ಲ ಶಿರಡಿಯ ಜನರು ಈ ಪಕೀರನ ಸಂಪೂರ್ಣ ಸಾಧುತ್ವವನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಅನೇಕರು ಅವನ ಭಕ್ತರಾದರು ಈ ಯುವ ಬಾಬಾ ಬೃಹತ್ ಆಗಿ ಬೆಳೆದು ಬಳಿಕ ಶಿರಡಿ ಸಾಯಿಬಾಬಾ ಎಂಬುದಾಗಿ ಪ್ರಖ್ಯಾತಿ ಪಡೆದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">