ಕೊರಗಜ್ಜ ನ ಮಹಿಮೆ ನನ್ನ ಜೀವನದಲ್ಲಿ ನನ್ನ ಅಹಂಕಾರವನ್ನು ಹೀಗೆ ತೆಗೆದರು ಕೊರಗಜ್ಜ ನನಗೆ ಯಾವ ಶಿಕ್ಷೆಯನ್ನು ನೀಡಿದರು ನನ್ನ ಕಥೆ ಕೇಳಿ - Karnataka's Best News Portal

ಕೊರಗಜ್ಜ ನಂಬಿದವರ ಪಾಲಿನ ಮಾಣಿಕ್ಯ ತುಳುನಾಡ ದೈವ ಕೊರಗಜ್ಜನ ಮಹಿಮೆ||ಕೊರಗಜ್ಜ ಮತ್ತು ಕೊರಗಜ್ಜನ ದೇವಾಲಯಗಳು ತುಳುನಾಡು ಪ್ರದೇಶದಲ್ಲಿ ಅತ್ಯಂತ ಪವಿತ್ರವಾದಂತಹ ಸ್ಥಳಗಳಲ್ಲಿ ಒಂದಾಗಿದೆ.ದಕ್ಷಿಣದಿಂದ ನಾವು ಉತ್ತರದ ಕಡೆ ಗಮನಿಸುತ್ತಾ ಬಂದರೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ ಮಂಗಳೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುತ್ತಾರೆ ಹಾಗಾಗಿ ತುಳು ನಾಡಿನಾದ್ಯoತ ಹೆಚ್ಚು ಪೂಜಿಸುವಂತಹ ದೈವವೇ ಕೊರಗಜ್ಜ ಹೌದು ಸಾಮಾನ್ಯ ಪ್ರಜೆಯಂತೆ ಇದ್ದಂತಹ ಈ ವ್ಯಕ್ತಿ ಕೆಲವು ದಿನಗಳ ನಂತರ ದೈವಿಕ ಶಕ್ತಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿ ಬದಲಾಗುತ್ತಾರೆ ಆನಂತರವೇ ಇವರಿಗೆ ಕೊರಗಜ್ಜ ಎಂಬ ಹೆಸರು ಬಂದಿತು ಎಂದು ಇವರಿಗೆ ಸಂಬಂಧಪಟ್ಟ ಹಲವಾರು ಕಥೆಗಳು ಹೇಳುತ್ತವೆ ಆದ್ದರಿಂದ ಅಂದಿನಿಂದ ಇಲ್ಲಿಯವರೆಗೂ ಕೂಡ ಕೊರಗಜ್ಜನ ಹೆಸರಲ್ಲಿ ಹಲವಾರು ಪವಾಡಗಳು ನಡೆದಿದೆ ಎಂದು ಹೇಳಲಾಗುತ್ತದೆ.

ಯಾವ ಒಬ್ಬ ವ್ಯಕ್ತಿಯೇ ಆಗಲಿ ಅವನು ತಾನು ಯಾವುದಾದರೂ ಬೆಲೆ ಬಾಳುವಂತಹ ವಸ್ತುಗಳನ್ನು ಕಳೆದುಕೊಂಡರೆ ಅಥವಾ ಅವನು ಯಾವುದಾದರು ಕೆಲಸ ಈ ಸಮಯಕ್ಕೆ ಆಗಲಿ ಎಂದು ಅಜ್ಜನ ಹೆಸರನ್ನು ಹೇಳುತ್ತಾ ಕೆಲಸವನ್ನು ನೆನಪಿಸಿಕೊಂಡರೆ ಆ ಕೆಲಸ ಆಗುತ್ತದೆ ಎನ್ನುವಂತಹ ನಂಬಿಕೆಯನ್ನು ಅಲ್ಲಿಯ ಪ್ರತಿಯೊಬ್ಬ ವ್ಯಕ್ತಿಯೂ ಇಟ್ಟಿದ್ದಾರೆ ಅದರಂತೆ ಕೊರಗಜ್ಜ ಎಲ್ಲರಿಗೂ ಕೂಡ ಒಳ್ಳೆಯದನ್ನು ಮಾಡುತ್ತ ಪ್ರತಿಯೊಬ್ಬರ ಆಸೆಯನ್ನು ನೆರವೇರಿಸುತ್ತಿದ್ದಾರೆ ಅದರಲ್ಲೂ ತುಳುನಾಡಿನಲ್ಲಿ ಯಾವುದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದರೆ ಮೊದಲು ಅಜ್ಜನ ಸ್ಥಳಕ್ಕೆ ಹೋಗಿ ಅಲ್ಲಿ ಹಲವಾರು ವಿಷಯಗಳನ್ನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದರಂತೆಯೇ ಯಾರಾದರು ಒಂದು ವಸ್ತುವನ್ನು ಕದ್ದಿದ್ದರೆ ಅದನ್ನು ಇಂಥವರೇ ಕದ್ದರು ಎಂದು ಕಂಡು ಹಿಡಿದು ಅವರಿಗೆ ಅಜ್ಜನ ಸನ್ನಿಧಾನದಲ್ಲಿಯೇ ಶಿಕ್ಷೆ ಸಿಗುತ್ತದೆ ಅಲ್ಲಿ ಎಲ್ಲರೂ ಕೋರ್ಟ್ ಮೆಟ್ಟಿಲು ಏರುವುದಿಲ್ಲ ಬದಲಾಗಿ ಅಜ್ಜನ ಸಾನಿಧ್ಯದಲ್ಲಿಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಆದ್ದರಿಂದ ಅಲ್ಲಿಯ ಜನ ಅಷ್ಟೇ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ನಾವೇನಾದರೂ ಕೆಟ್ಟ ಕೆಲಸ ಮಾಡಿದರೆ ಅಜ್ಜ ನಮ್ಮನ್ನು ಶಿಕ್ಷಿಸುತ್ತಾನೆ ಎನ್ನುವಂತಹ ಭಯದಲ್ಲಿ ತಮ್ಮ ಜೀವನವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಯಾರಿಗೂ ಮೋಸ ಮಾಡದೆ ತಮ್ಮ ಕೈಲಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಅಜ್ಜನನ್ನು ನಂಬುತ್ತಾ ತಮ್ಮ ತಮ್ಮ ಮನೆಯಲ್ಲಿ ಅಜ್ಜನ ಹೆಸರನ್ನು ಹೇಳಿ ಅವನನ್ನು ನೆನೆಯುತ್ತಿದ್ದಾರೆ ಆದ್ದರಿಂದ ಕೊರಗಜ್ಜನ ಹೆಸರು ಅಷ್ಟು ಒಳ್ಳೆಯ ಸ್ಥಾನದಲ್ಲಿ ಇದೆ ಇನ್ನು ಮುಂದೆ ಕೂಡ ಅಜ್ಜನ ಹೆಸರನ್ನು ಹೇಳಿ ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳು ತ್ತಾರೆ ಎಂಬಂತಹ ನಂಬಿಕೆಯನ್ನು ತುಳುನಾಡಿನ ಪ್ರತಿಯೊಬ್ಬರೂ ಕೂಡ ಇಟ್ಟಿದ್ದಾರೆ ಅದರಲ್ಲೂ ಇತ್ತೀಚೆಗೆ ನಮ್ಮ ಮೈಸೂರಿನಲ್ಲಿಯೂ ಕೂಡ ಅಜ್ಜನ ದೇವಾಲಯ ಸ್ಥಾಪನೆಗೊಂಡಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *