ಧಾನ್ಯಲಕ್ಷ್ಮಿ ಇರುವಂತಹ ಸ್ಥಳ ಈ ರೀತಿ ಇರಬೇಕು ಆಗ ಮಾತ್ರ ಧನಲಕ್ಷ್ಮಿ ಒಲಿಯುತ್ತಾಳೆ..ನಿಮ್ಮ ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿ ಚಮತ್ಕಾರ ನೋಡಿ - Karnataka's Best News Portal

ಧಾನ್ಯಲಕ್ಷ್ಮಿ ಇರುವಂತಹ ಸ್ಥಳ ಈ ರೀತಿ ಇರಬೇಕು||ಆಗ ಧನಲಕ್ಷ್ಮಿ ಒಲಿಯುತ್ತಾಳೆ…!!ನಾವು ಅಡುಗೆ ಮನೆಯಲ್ಲಿ ಮಾಡುವಂತಹ ಎಷ್ಟೋ ತಪ್ಪುಗಳು ನಮ್ಮ ಜೀವನದಲ್ಲಿ ಕಷ್ಟಗಳನ್ನು ತಂದುಕೊಡುತ್ತದೆ ಸಾಲಗಳನ್ನು ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಹೋಗುತ್ತೇವೆ ಅದರಲ್ಲೂ ಅಡುಗೆ ಮನೆಯಲ್ಲಿ ಕೆಲವೊಂದು ತಪ್ಪುಗಳು ನಡೆದಾಗ ಆ ತಪ್ಪುಗಳು ನಮಗೆ ಬಹಳ ತೊಂದರೆಯನ್ನು ತಂದು ಕೊಡುತ್ತದೆ ಅದರಲ್ಲಿ ನಾವು ಮಾಡುವಂತಹ ಕೆಲವೊಂದಷ್ಟು ತಪ್ಪುಗಳು ಯಾವುವು ಎಂದರೆ ಮೊದಲನೆಯದಾಗಿ ಧಾನ್ಯಗಳನ್ನು ಸಂಗ್ರಹ ಮಾಡುವ ಸ್ಥಳ ಅಂದರೆ ಅಕ್ಕಿ ಬೇಳೆ ಹೀಗೆ ದಿನ ನಿತ್ಯ ಬಳಸುವ ಧಾನ್ಯಗಳನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇರುವಂತೆ ಇಡಬೇಕು ಧಾನ್ಯದ ಡಬ್ಬಿಯ ಬೆನ್ನು ದಕ್ಷಿಣ ಭಾಗಕ್ಕೆ ಮುಖ ಮಾಡಿ ಇರಬೇಕು ಹೀಗೆ ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಇರಬೇಕು ಏಕೆ ಎಂದರೆ ಉತ್ತರದಿಕ್ಕನ್ನು ಮಾತೃ ದಿಕ್ಕು ಅಂತ ಹೇಳಲಾಗುತ್ತದೆ.

ಪೂರ್ವ ದಿಕ್ಕಿಗೆ ಪಿತೃ ದಿಕ್ಕು ಎಂದರೆ ಉತ್ತರ ದಿಕ್ಕಿಗೆ ಮಾತೃ ದಿಕ್ಕು ಎಂದು ಹೇಳುತ್ತೇವೆ ಹಾಗಾಗಿ ಈ ಒಂದು ದಿಕ್ಕಿನಲ್ಲಿ ಸಾಕ್ಷಾತ್ ಭಗವತಿ ಲಕ್ಷ್ಮಿ ದೇವಿ ನೆಲೆ ಇರುತ್ತಾ ಳೆ ಎಂದು ಹೇಳಲಾಗುತ್ತದೆ ಆದ್ದರಿಂದ ಈ ಒಂದು ನಿಯಮಗಳನ್ನು ಅನುಸರಿಸುವುದು ಬಹಳ ಉತ್ತಮ ಇದರ ಜೊತೆಗೆ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿರುವಂತಹ ಡಬ್ಬಿಗಳಿಗೆ ಧಾನ್ಯಗಳನ್ನು ತುಂಬಿಸುವಂತಹ ಸಮಯದಲ್ಲಿ ಜಗಳವಾಡುತ್ತಿರ ಬಾರದು ಯಾರನ್ನಾದರೂ ಬೈಯುತ್ತಿರಬಾರದು ಬದಲಾಗಿ ಲಕ್ಷ್ಮಿಯನ್ನು ಧ್ಯಾನಿಸುತ್ತಾ ಅನ್ನಪೂರ್ಣೇ ಶ್ವರಿ ಯನ್ನು ನೆನಪಿಸಿಕೊಳ್ಳುತ್ತಾ ಡಬ್ಬಿಗೆ ಧಾನ್ಯಗಳನ್ನು ತುಂಬಿಸಿದರೆ ನಿಮ್ಮ ಮನೆಯಲ್ಲಿ ಸದಾ ಕಾಲ ಅನ್ನ ಪೂರ್ಣೇಶ್ವರಿಯ ಆಶೀರ್ವಾದ ಇರುತ್ತದೆ ಬದಲಾಗಿ ಜಗಳವಾಡುತ್ತಾ ಬೈಯುತ್ತಾ ಧಾನ್ಯಗಳನ್ನು ತುಂಬಿದರೆ ಹಲವಾರು ತೊಂದರೆಗಳು ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಆದ್ದರಿಂದ ಧಾನ್ಯಗಳನ್ನು ತುಂಬಿಸುವಾಗ ಮನೆಯಲ್ಲಿ ಹೆಣ್ಣು ಮಕ್ಕಳು ದೇವರನ್ನು ಧ್ಯಾನಿಸುತ್ತಾ ಖುಷಿಯಿಂದ ಇಡಬೇಕು ಹೀಗೆ ಇಟ್ಟರೆ ನಿಮ್ಮ ಮನೆಯಲ್ಲಿ ಸದಾಕಾಲ ಅನ್ನಪೂರ್ಣೇಶ್ವರಿಯ ಆಶೀರ್ವಾದದ ಜೊತೆಗೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ.

ಇದರ ಜೊತೆಗೆ ಅಡುಗೆಮನೆಯನ್ನು ಸ್ವಚ್ಛವಾಗಿ ಶುಚಿಯಾಗಿ ಇಟ್ಟುಕೊಳ್ಳಬೇಕು ಪ್ರತಿನಿತ್ಯ ಬಳಸುವಂತಹ ಕೆಲವೊಂದು ಪದಾರ್ಥಗಳನ್ನು ಹಾಳಾಗದಂತೆ ನೋಡಿಕೊಳ್ಳಬೇಕು ಜೊತೆಗೆ ತಿಂಗಳಿಗೆ ಒಮ್ಮೆ ಅಡಿಗೆ ಮನೆಯಲ್ಲಿರುವಂತಹ ಎಲ್ಲಾ ಪಾತ್ರೆಗಳನ್ನು ಶುಚಿಯಾಗಿ ತೊಳೆಯುವುದು ಮುಖ್ಯ ಈ ಎಲ್ಲಾ ನಿಯಮಗಳನ್ನು ನೀವು ಅನುಸರಿಸಿದ್ದೆ ಆದಲ್ಲಿ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಎಂದೇ ಹೇಳಲಾಗುತ್ತದೆ ಬದಲಾಗಿ ನೀವು ಅಡುಗೆ ಮನೆಯನ್ನು ಗಲೀಜಾಗಿ ಸ್ವಚ್ಛತೆ ಇಲ್ಲದೆ ಇಟ್ಟುಕೊಂಡರೆ ಆ ಮನೆಯಲ್ಲಿ ದರಿದ್ರ ಸೃಷ್ಟಿಯಾಗುತ್ತದೆ ಎಲ್ಲಾ ರೀತಿಯಲ್ಲೂ ಸಂಕಷ್ಟಗಳು ಎದುರಾಗಲು ಪ್ರಾರಂಭಿಸುತ್ತದೆ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕಸ ಇರದಂತೆ ನೋಡಿಕೊಳ್ಳು ವುದು ಬಹಳ ಪ್ರಮುಖವಾದಂತಹ ಅಂಶವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *