ಒಂದ್ಸಲಾ ಕಪ್ಪು ಬೆಲ್ಲ ತಿಂದು ನೋಡಿ. ಇದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ ? ಹೇಗೆ ಹಾಗೂ ಎಷ್ಟು ಸೇವಿಸಿದರೆ ಉತ್ತಮ ಗೊತ್ತಾ ? - Karnataka's Best News Portal

ಒಂದು ಸಲ ಕಪ್ಪು ಬೆಲ್ಲ ತಿಂದು ನೋಡಿ….!
ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬ ಮಾತನ್ನು ನೀವು ಕೇಳಿರಬಹುದು. ಹೌದು ಬೆಲ್ಲ ಒಂದು ನೈಸರ್ಗಿಕ ಪದಾರ್ಥವಾಗಿದ್ದು ಕಬ್ಬಿನಿಂದ ತಯಾರಾಗುವoತಹ ಬೆಲ್ಲವನ್ನು ಹೆಚ್ಚಿನ ಜನ ಕೆಲವೊಂದಷ್ಟು ಹಬ್ಬಗಳಲ್ಲಿ ಮಾತ್ರ ನೆನಪಿಸಿಕೊಳ್ಳುತ್ತಾರೆ ಆದರೆ ಇನ್ನೂ ಕೆಲವರು ಅದರಲ್ಲಿ ಹೆಚ್ಚಾಗಿ ಹಳ್ಳಿಯಲ್ಲಿ ಬೆಲ್ಲದಿಂದ ತಯಾರಿಸಿದ ಹೀಗೆ ಬೆಲ್ಲದಿಂದ ತಯಾರಿಸಿದಂತಹ ಕೆಲವೊಂದು ಪದಾರ್ಥಗಳನ್ನು ತಿನ್ನುತ್ತಲೇ ಇರುತ್ತಾರೆ ಆದ್ದರಿಂದಲೇ ಅಲ್ಲಿರುವಂಥವರು ಹೆಚ್ಚಾಗಿ ಆರೋಗ್ಯವಂತರಾಗಿ ಯಾವುದೇ ರೀತಿಯ ಕೊರತೆ ಇಲ್ಲದೆ ಇರುತ್ತಾರೆ ಆದರೆ ಬೆಲ್ಲ ಯಾರು ಸೇವೆ ಮಾಡುವುದಿಲ್ಲವೋ ಅವರು ಹಲವಾರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಅದರಲ್ಲೂ ದೇಹದಲ್ಲಿ ಕಬ್ಬಿಣದ ಅಂಶ ಕೊರತೆಯಿಂದ ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರು ಪ್ರತಿನಿತ್ಯ ಬೆಲ್ಲದ ಉಪಯೋಗವನ್ನು ಮಾಡುವುದರಿಂದ ಬಹಳ ಒಳ್ಳೆಯದು.

ಜೊತೆಗೆ ನೀವು ಗಮನಿಸಿರಬಹುದು ಬಹಳ ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ಬಂದರೆ ಅವರು ಕೈಕಾಲು ತೊಳೆದುಕೊಂಡು ಬಂದ ತಕ್ಷಣ ಅವರಿಗೆ ಬೆಲ್ಲ ಮತ್ತು ನೀರನ್ನು ಕೊಡುತ್ತಿದ್ದರು ಹಾಗೂ ಈ ಒಂದು ಪದ್ಧತಿ ಈಗಲೂ ಕೂಡ ಕೆಲವೊಂದು ಮನೆತನ ಗಳಲ್ಲಿ ಇದೆ ಹಾಗಾಗಿ ಅವರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸುವುದಿಲ್ಲ ಅದರಲ್ಲೂ ಹೆಚ್ಚಾಗಿ ಇತ್ತೀಚಿಗೆ ಯಾರು ಕೂಡ ಬೆಲ್ಲದ ಉಪಯೋಗವನ್ನು ಪಡೆಯುತ್ತಿಲ್ಲ ಬದಲಾಗಿ ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಿದ್ದು ಸಕ್ಕರೆ ಬೆಳ್ಳಗಿದೆ ಅದರಿಂದ ಮಾಡಿದ ಪದಾರ್ಥಗಳು ರುಚಿ ಬರುತ್ತದೆ ಎಂಬ ಕಾರಣದಿಂದ ಸಕ್ಕರೆಯನ್ನು ಹೆಚ್ಚಾಗಿ ಬಳಸಿ ಇದರಿಂದ ಇಲ್ಲಸಲ್ಲದ ಕಾಯಿಲೆಗಳನ್ನು ತಂದುಕೊಳ್ಳುತ್ತಿದ್ದಾರೆ ಅದರಲ್ಲೂ ಡಯಾಬಿಟಿಸ್ ನಂತಹ ರೋಗಿಗಳು ಸ್ವಲ್ಪಮಟ್ಟಿಗೆ ಬೆಲ್ಲವನ್ನು ಸೇವಿಸಿದರೆ ಯಾವುದೇ ರೀತಿಯಾದ ತೊಂದರೆ ಆಗುವುದಿಲ್ಲ ಆದರೆ ಸಕ್ಕರೆ ಯನ್ನು ಸೇವಿಸಿದರೆ ತಕ್ಷಣವೇ ಅವರಿಗೆ ಆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ಆದ್ದರಿಂದಲೇ ಬೆಲ್ಲದ ಉಪಯೋಗವನ್ನು ಪ್ರತಿಯೊಬ್ಬ ರೂ ಮಾಡುವುದು ಬಹಳ ಒಳ್ಳೆಯದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬೆಲ್ಲದ ಉಪಯೋಗ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಿದೆ ಎಂದೇ ಹೇಳಲಾಗುತ್ತದೆ ಅದರಲ್ಲೂ ಹೆಚ್ಚಾಗಿ ಹಳ್ಳಿಗಳಲ್ಲಿ ಬೆಲ್ಲದಿಂದ ಮಾಡಿದಂತಹ ಟೀಯನ್ನು ಪ್ರತಿನಿತ್ಯ ಸೇವಿಸುತ್ತಿರುತ್ತಾರೆ ಆದರೆ ಪಟ್ಟಣ ಪ್ರದೇಶದಲ್ಲಿರುವ ವರು ಸಕ್ಕರೆ ಬಳಸಿ ಕಾಫಿ ಟೀ ಸೇವಿಸುತ್ತಾರೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಆದ್ದರಿಂದ ಬೆಲ್ಲದ ಉಪಯೋಗವನ್ನು ಮಾಡುವುದರಿಂದ ಬಹಳ ಒಳ್ಳೆಯದು ಅದರಲ್ಲೂ ದೇಹದಲ್ಲಿ ಕಬ್ಬಿಣದ ಅಂಶ ಕೊರತೆ ಇದ್ದರೆ ಪ್ರತಿನಿತ್ಯ ಒಂದು ಚಿಟಿಕೆ ಬೆಲ್ಲವನ್ನು ತಿನ್ನುತ್ತಾ ಬನ್ನಿ ನಿಮ್ಮ ಸಮಸ್ಯೆ ದೂರವಾಗುತ್ತದೆ ಜೊತೆಗೆ ಹೆಣ್ಣು ಮಕ್ಕಳು ತಮ್ಮ ತಿಂಗಳಿನ ಸಮಯ ದಲ್ಲಿ ಬೆಲ್ಲವನ್ನು ತಿಂದರೆ ಹೊಟ್ಟೆಯಲ್ಲಿ ಬರುವಂತಹ ನೋವು ಶಮನ ವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *