ಗ್ಯಾಸ್ಟ್ರಿಕ್‌ ಸಮಸ್ಯೆ ಅಸಿಡಿಟಿ ಈ ಸಲಹೆ ಪಾಲಿಸಿ ನಿಮ್ಮ ಜನ್ಮದಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಬರೋದಿಲ್ಲ ಅಸಿಡಿಟಿಗೆ ಹೇಳಿ ಗುಡ್ ಬೈ - Karnataka's Best News Portal

ಗ್ಯಾಸ್ಟಿಕ್ ಬರೋದಕ್ಕೆ ನೀವು ಮಾಡೋ ಆ ತಪ್ಪುಗಳೇ ಕಾರಣ||ಗ್ಯಾಸ್ಟಿಕ್ ಪರಿಹಾರಕ್ಕೆ ಇದೇ ಸರಳ ಸೂತ್ರ!!
ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಅಜೀರ್ಣತೆ ಮತ್ತು ಅಸಿಡಿಟಿ ಈ ರೀತಿಯ ಸಮಸ್ಯೆ ಇದೆ ಎಂದು ಹೇಳಿ ಕೊಳ್ಳುತ್ತಾರೆ ಹಾಗಾದರೆ ಅಸಿಡಿಟಿ ಎಂದರೆ ಏನು ಅದು ಹೇಗೆ ಬರುತ್ತದೆ ಹಾಗೂ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ನಾವು ಯಾವ ರೀತಿಯ ವಿಧಾನ ಅನುಸರಿಸಬೇಕು ಹಾಗೂ ಅದನ್ನು ಸಂಪೂರ್ಣವಾಗಿ ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಅಸಿಡಿಟಿ ಎಂದರೆ ಏನು ಎನ್ನುವುದನ್ನು ತಿಳಿಯೋಣ ನಾವು ತಿಂದಂತಹ ಆಹಾರ ಪದಾರ್ಥಗಳು ಜಠರದಲ್ಲಿ ಜೀರ್ಣವಾಗುವುದಕ್ಕೆ ಅಂತ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪತ್ತಿಯಾಗುತ್ತದೆ ನಾವು ಸರಿಯಾದ ಸಮಯದಲ್ಲಿ ಆಹಾರ ತಿನ್ನುವಂತಹ ಸಮಯದಲ್ಲಿ ಈ ಒಂದು ಆಮ್ಲ ಉತ್ಪತ್ತಿಯಾಗುತ್ತದೆ ಬದಲಾಗಿ ನಾವು ಆ ಸಮಯದಲ್ಲಿ ಊಟ ತಿಂಡಿ ಮಾಡದೇ ಇದ್ದರೆ ಜಠರದಲ್ಲಿ ಉತ್ಪಾದನೆಯಾಗುವ ಹೈಡ್ರೋಕ್ಲೋರಿಕ್ ಆಮ್ಲವು ಜಠರದಲ್ಲಿಯೇ ಶೇಖರಣೆಯಾಗುತ್ತದೆ.

ಈ ರೀತಿ ಶೇಖರಣೆಯಾಗುವುದನ್ನೇ ನಾವು ಅಸಿಡಿಟಿ ಅಥವಾ ಹೈಪರ್ ಅಸಿಡಿಟಿ ಎಂದು ಕರೆಯುತ್ತೇವೆ ಹಾಗಾದರೆ ಅಸಿಡಿಟಿಯ ಲಕ್ಷಣಗಳೇನು ಎಂದು ನೋಡುವುದಾದರೆ ಈ ಒಂದು ಲಕ್ಷಣ ಪ್ರತಿಯೊಬ್ಬ ರಲ್ಲೂ ವಿಭಿನ್ನವಾಗಿರುತ್ತದೆ ಒಬ್ಬರಿಗೆ ಹೊಟ್ಟೆ ಉಬ್ಬರ ಕಾಣಿಸಿ ಕೊಂಡರೆ ಮತ್ತೊಬ್ಬರಿಗೆ ಹೊಟ್ಟೆ ಖಾಲಿಯಾ ದಂತೆ ಅನ್ನಿಸುತ್ತದೆ ಜೊತೆಗೆ ವಾಕರಿಕೆ ಬರುವಂತದ್ದು ವಾಂತಿ ಆಗುವುದು ಹುಳಿತೇಗು ಬರುವಂತದ್ದು ಎದೆಯ ಭಾಗದಲ್ಲಿ ಉರಿ ಬರುವಂಥದ್ದು ಪದೇ ಪದೇ ಮಲ ವಿಸರ್ಜನೆಗೆ ಹೋಗುವಂತೆ ಅನುಭವ ಕೆಲ ವೊಮ್ಮೆ ಮಲಬದ್ಧತೆ ಕೂಡ ಹೌದು ಹೀಗೆ ಹಲವಾರು ಲಕ್ಷಣಗಳನ್ನು ನಾವು ಕಾಣಬಹುದು ಹಾಗಾದರೆ ಈ ಒಂದು ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳು ವುದು ಎಂದು ನೋಡುವುದಾದರೆ.

ಮೊದಲನೆಯದಾಗಿ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದು ಇದರ ಜೊತೆಗೆ ಈಗಾಗಲೇ ಗ್ಯಾಸ್ಟಿಕ್ ಅಸಿಡಿಟಿ ಬಂದಿದೆ ಎಂದರೆ ಅಂಥವರು ಪ್ರತಿನಿತ್ಯ ಬೆಳಗಿನ ಸಮಯ ಬೇಗ ಎದ್ದು ಯೋಗ ಧ್ಯಾನ ಪ್ರಾಣಾಯಾಮಗಳ ಅಭ್ಯಾಸ ಮಾಡುವಂಥದ್ದು ಹೀಗೆ ಮಾಡುವುದರಿಂದ ನಿಮಗೆ ಶಾರೀರಿಕವಾಗಿ ಮತ್ತು ಆಂತರಿಕವಾಗಿ ಮಾನಸಿಕ ನೆಮ್ಮದಿ ಎನ್ನುವುದು ಸಿಗುತ್ತದೆ ಹಾಗಾಗಿ ಇದೆ ಅದಕ್ಕೆ ಪ್ರಮುಖವಾದಂತಹ ಔಷಧೀ ಎಂದೇ ಹೇಳಬಹುದು.ಇದರ ಜೊತೆಗೆ ಆಯುರ್ವೇದದ ಕೆಲವೊಂದು ಅಂಶಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಅದರಂತೆಯೇ ವಾರಕ್ಕೆ ಒಮ್ಮೆಯಾದರೂ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಬೂದುಗುಂಬಳಕಾಯಿಯ ಜ್ಯೂಸ್ ಅನ್ನು ಕುಡಿಯುವುದು ಅಸಿಡಿಟಿಗೆ ಪರಮ ಔಷಧಿ ಎಂದೇ ಹೇಳಬಹುದಾಗಿದೆ ಜೊತೆಗೆ ಪ್ರತಿನಿತ್ಯ ಎದ್ದ ತಕ್ಷಣ ಕಾಫಿ ಟೀ ಇವೆಲ್ಲವನ್ನು ಕೂಡ ಕಡ್ಡಾಯವಾಗಿ ಬಿಡಬೇಕು ಆಗ ಮಾತ್ರ ಒಬ್ಬ ಮನುಷ್ಯ ಯಾವುದೇ ರೀತಿಯ ತೊಂದರೆ ಇಲ್ಲದೆ ಆರೋಗ್ಯವಾಗಿ ಇರಲು ಸಾಧ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *