ಈ ಕನ್ನಡಿನನ್ನ ಮುಟ್ಟುವ ಗಂಡೇ ಹುಟ್ಟಿಲ್ಲ ಅಂದು ಸಾಲ ಮಾಡಿ ಹಾಕಿದ್ದ ಒಂದು ಲಾರಿ ಇಂದು 4500 ಲಾರಿ - Karnataka's Best News Portal

ಈ ಕನ್ನಡಿನನ್ನ ಮುಟ್ಟುವ ಗಂಡೇ ಹುಟ್ಟಿಲ್ಲ ಅಂದು ಸಾಲ ಮಾಡಿ ಹಾಕಿದ್ದ ಒಂದು ಲಾರಿ ಇಂದು 4500 ಲಾರಿ

ಈ ಕನ್ನಡಿಗನನ್ನ ಮುಟ್ಟುವ ಗಂಡೇ ಇನ್ನು ಹುಟ್ಟಿಲ್ಲ…! ಯಾರು ಈ ವಿಜಯ್ ಸಂಕೇಶ್ವರ್? ಅವರ ಸಾಮ್ರಾಜ್ಯದ ಬಗ್ಗೆ ಗೊತ್ತಾ?ತನ್ನ ಟೀನೇಜ್ ಮಗ ತನಗೆ ತಿಳಿಯದ ಉದ್ಯಮಕ್ಕೆ ಕೈಹಾಕಿ ಅದರಲ್ಲಿ ಯಶಸ್ಸನ್ನು ಕಾಣುತ್ತಾನೆ ಎನ್ನುವ ನಂಬಿಕೆ ಆ ತಂದೆಗೆ ಇರಲಿಲ್ಲ ಎಲ್ಲಿ ತನ್ನ ಮಗ ಈ ಉದ್ಯಮದಲ್ಲಿ ನೆಲಕಚ್ಚುವನೋ ಎನ್ನುವ ಆತಂಕ ಅವರಲ್ಲಿ ಇತ್ತು ಆದರೆ ಅವರ ಈ ಅಳುಕು ಸುಳ್ಳೆಂದು ಆ ಮಗ ನಿರೂಪಿಸಿದ ಒಂದು ಸಣ್ಣ ಟ್ರಕ್ ನ ಮುಖಾಂತರ ಶುರುವಾದಂತಹ ಸಾರಿಗೆ ಉದ್ಯಮವು ಮುಂದೆ ಸಾವಿರಾರು ಕೋಟಿ ರೂಪಾಯಿಗಳ ಟರ್ನೋ ವರ್ ನ ಭಾರತದ ಬೃಹತ್ ಖಾಸಗಿ ಸಾರಿಗೆಯ ಉದ್ಯಮಿಯಾಗಿ ಬೆಳೆದು ನಿಂತದ್ದು ಇಂದಿಗೆ ಇತಿಹಾಸವೇ ಸರಿ ಹಾಗೆ ಬೆಳೆದು ನಿಂತ ಆ ಸಾರಿಗೆ ಸಂಸ್ಥೆಯೇ ದೇಶದ ವಿಖ್ಯಾತ ಸಾರಿಗೆ ಸಂಸ್ಥೆಯಾದ ವಿ ಆರ್ ಎಲ್ ಸಾರಿಗೆ.ಇದರ ನೇತಾರರು ಗದಗಿನ ಮೂಲದ ಶ್ರೀ ವಿಜಯ್ ಶಂಕೇಶ್ವರ್ ಪ್ರಸ್ತುತ ವಿಜಯ್ ಶಂಕೇಶ್ವರ್ ಅವರು 4000ಕ್ಕೂ ಹೆಚ್ಚು ಟ್ರಕ್ ಹಾಗೂ 700ಕ್ಕೂ ಹೆಚ್ಚು ಖಾಸಗಿ ಬಸ್ ಗಳ ಮಾಲೀಕರು

ಹಾಗೂ ರಾಜ್ಯದ ಅತ್ಯುತ್ತಮ ದೈನಿಕವಾದ ವಿಜಯವಾಣಿಯ ಸಂಪಾದಕರು ಕೂಡ ಹೌದು ತಮ್ಮ ಶ್ರಮ ಹಾಗೂ ಅಚಲ ಪ್ರಯತ್ನಗಳಿಂದ ಇಂದು ಕೀರ್ತಿಯ ಶಿಖರ ವೇರಿರುವ ಇವರು ದೇಶದ ಬಹುದೊಡ್ಡ ಉದ್ಯಮಿ ಹಾಗೂ ಇಂಡಸ್ಟ್ರಿಯಲಿಸ್ಟ್ ಎಂಬುವುದೇ ರಾಜ್ಯದ ಹೆಮ್ಮೆಯ ಸಂಗತಿ ಗದಗ್ ಮೂಲದವರಾದ ವಿಜಯ್ ಶಂಕೇಶ್ವರ್ 1950ರ ಆಗಸ್ಟ್ ಎರಡರಂದು ಬಸವಣ್ಣಪ್ಪ ಹಾಗೂ ಚಂದ್ರಮ್ಮ ಇವರ ಮಗನಾಗಿ ಗದಗ್ ನಲ್ಲಿ ಜನಿಸುತ್ತಾರೆ ಈ ದಂಪತಿಗಳಿಗೆ ಒಟ್ಟು ಏಳು ಜನ ಮಕ್ಕಳು ಅವರಲ್ಲಿ ವಿಜಯ್ ಶಂಕೇಶ್ವರ್ ಅವರು ಕೂಡ ಒಬ್ಬರು ಇವರ ತಂದೆ ಬಸವಣ್ಣಪ್ಪ ಗದಗ್ ನಲ್ಲಿ ಬಿಜಿ ಪ್ರಿಂಟರ್ ಸಿ ಎಂಬ ಮುದ್ರಣಾಲಯವನ್ನು ನಡೆಸುತ್ತಿದ್ದರು.

See also  ಮದುವೆ ಆದ ವಾರಕ್ಕೆ ನನ್ನ ಗಂಡ ಮಿಲಿಟರಿಗೆ ಹೋಗಿ ಯುದ್ದದಲ್ಲಿ ಸತ್ತು ಹೋದ ಮನೆಯವರೆಲ್ಲಾ ಸೇರಿ ಮೈದುನನ ಜೊತೆ ಮದುವೆ ಮಾಡಿದ್ರು..

ವಿಜಯ್ ಅವರ ಹಿರಿಯ ಸಹೋದರರೊಬ್ಬರು ಸಹ ತಂದೆಯ ಜೊತೆ ಈ ಮುದ್ರಣಾಲಯದ ಉಸ್ತುವಾರಿ ಯನ್ನು ವಹಿಸಿಕೊಂಡಿದ್ದರು ಮೊದಲಿನಿಂದಲೂ ಓದಿನಲ್ಲಿ ಮುಂದೆ ಇದ್ದಂತಹ ವಿಜಯ್ ಶಂಕೇಶ್ವರ್ ಅವರು 1972ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪೂರೈಸಿದರು ಇವರು ಗದಗಿನ ಆದರ್ಶ ಶಿಕ್ಷಣ ಸಮಿತಿ ಎಂಬ ಕಾಮರ್ಸ್ ಕಾಲೇಜಿನಲ್ಲಿ ತಮ್ಮ ಪದವಿ ಪಡೆದರು ಬಿಕಾಂ ಪದವಿ ಮುಗಿದ ಬಳಿಕ ವಿಜಯ್ ಸಂಕೇಶ್ವರ್ ಅವರು ತಮ್ಮ ತಂದೆಯ ಮುದ್ರಣಾಲಯ ದಲ್ಲಿ ಕೆಲ ಕಾಲ ಮಾರ್ಕೆಟಿಂಗ್ ಕೆಲಸದಲ್ಲಿ ತೊಡಗಿ ಕೊಂಡರು ಒಂದೇ ಕುಟುಂಬದ ಮೂರು ಜನ ಅಲ್ಲಿ ಯೇ ಕೆಲಸದಲ್ಲಿ ಇದ್ದುದ್ದರಿಂದ ಒಂದೇ ಕುಟುಂಬದ ಎಲ್ಲರೂ ಕೂಡ ಒಂದೇ ಕಡೆ ಕೆಲಸದಲ್ಲಿ ಇರುವುದು ಬೇಡ ಎಂದು ಸಂಕೇಶ್ವರ್ ಅವರು ಸ್ವಂತವಾಗಿ ಏನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.