ಡಿಸೆಂಬರ್ ತಿಂಗಳು ಯಾವ ರಾಶಿಗೆ ಡೇಂಜರ್..ಯಾವ ರಾಶಿಗಿದೆ ಅದೃಷ್ಟ ಮುಂದಿನ ದಿನಗಳಲ್ಲಿ ಹಣ ಉದ್ಯೋಗ ಆರೋಗ್ಯದಲ್ಲಿ ಏನೆಲ್ಲಾ ಆಗಲಿದೆ ನೋಡಿ - Karnataka's Best News Portal

ಡಿಸೆಂಬರ್ ತಿಂಗಳು ಯಾವ ರಾಶಿಗೆ ಯಾವ ರೀತಿಯ ಫಲ ನೀಡಲಿದೆ ಗೊತ್ತಾ?ನಾವೀಗ ವರ್ಷದ ಅಂತ್ಯದ ತಿಂಗಳಿನಲ್ಲಿದ್ದೇವೆ, ಕಡೆ ತಿಂಗಳಾದ ಡಿಸೆಂಬರ್ ಹಲವರಿಗೆ ಲಕ್ ತರಬಹುದು, ಕೆಲವರು ತಾಳ್ಮೆಯಿಂದ ಕಾದು ಹೊಸ ವರ್ಷದಲ್ಲಿ ಹೊಸ ಉರುಪಿನೊಂದಿಗೆ ಮತ್ತೆ ಪ್ರಯತ್ನ ಮಾಡಬೇಕಾಗಿ ಬರಬಹುದು ಹಾಗಾಗಿ ದ್ವಾದಶ ರಾಶಿಗಳಲ್ಲಿ ಯಾರ್ಯಾರಿಗೆ ಯಾವ ಯಾವ ರೀತಿ ಫಲ ಈ ತಿಂಗಳಲ್ಲಿ ಇದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಅದರ ಪ್ರಯತ್ನವಾಗಿ ಮೇಷ ರಾಶಿಯವರಿಗೆ ಖಾಲಿ ಸೈಟು ನಿವೇಶನಗಳನ್ನು ಕೊಳ್ಳುವ ಭಾಗ್ಯ ಇರಲಿದೆ, ಈ ತಿಂಗಳ ನಾಲ್ಕು ಮಂಗಳವಾರಗಳಲ್ಲಿ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ 900 ಗ್ರಾಂ ತೊಗರಿ ಬೆಳೆಯನ್ನು ಕೆಂಪು ವಸ್ತ್ರ ಹಾಗೂ ಕೆಂಪು ಹೂವಿನ ಜೊತೆ ಕೊಟ್ಟರೆ ದೋಷಗಳೆಲ್ಲ ಪರಿಹಾರವಾಗಿ ಶುಭವಾಗುತ್ತದೆ. ವೃಷಭರಾಶಿಯವರಿಗಂತೂ ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲವಿದು, ನೀವು ಅನ್ನದಾನವನ್ನು ಹೆಚ್ಚಾಗಿ ಮಾಡಿದರೆ ಉನ್ನತ ಸ್ಥಾನಕ್ಕೆ ಹೋಗುತ್ತೀರಿ. ಮಿಥುನರಾಶಿಯವರಿಗೆ ಸ್ವಲ್ಪ ಪರೀಕ್ಷೆಯ ದಿನಗಳಾಗಿದ್ದು ಯಾವುದೇ ಹೊಸ ಕೆಲಸವನ್ನು ಆರಂಭಿಸದಿರುವುದು ಒಳ್ಳೆಯದು.ಸಾಧ್ಯವಾದಷ್ಟು ಶನಿವಾರಗಳಂದು ವೃದ್ದಾಶ್ರಮಗಳಿಗೆ ಹೋಗಿ ಅವಶ್ಯಕ ಸಾಮಾಗ್ರಿಗಳನ್ನು ದಾನ ನೀಡಿದರೆ ನಿಮ್ಮ ದೋಷಗಳು ಪರಿಹಾರ ಆಗುತ್ತದೆ.

ಕರ್ಕಾಟಕರಾಶಿಯವರಿಗೆ ಪೂರ್ವದ ಪುಣ್ಯದ ಫಲದಿಂದ ಅತ್ಯಂತ ಉತ್ತಮವಾದ ಸಮಯವಾಗಿದ್ದು, ಎಲ್ಲಾ ಕಾರ್ಯಗಳು ಕೈಗೂಡುತ್ತವೆ. ನೀವು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ ಇನ್ನು ಹೆಚ್ಚಿನ ಒಳಿತು ನಿಮಗಾಗುತ್ತದೆ. ಸಿಂಹ ರಾಶಿಯವರಿಗೆ ಗುರುಬಲ ಕಡಿಮೆ ಆಗಿರುವುದರಿಂದ ಯಾವುದೇ ಕೆಲಸಗಳಲ್ಲಿ ಆಸಕ್ತಿ ಮತ್ತು ಕಾನ್ಫಿಡೆನ್ಸ್ ಇರುವುದಿಲ್ಲ. ಆದರೆ ಈ ಸಮಯ ನಿಮ್ಮ ಶತ್ರುನಾಶದ ಸಮಯವಾಗಿರ್ತದೆ. ಅನಾಥಾಶ್ರಮ ಅಥವಾ ದೇವಸ್ಥಾನಗಳಲ್ಲಿ ಅನ್ನದಾನದ ಕಾರ್ಯ ಮಾಡುವುದರಿಂದ ನಿಮ್ಮ ದೋಷಗಳು ಪರಿಹಾರವಾಗುತ್ತದೆ. ಕನ್ಯಾರಾಶಿಯವರಿಗೆ ಕೈಗೊಂಡ ಕಾರ್ಯಗಳು ಪೂರ್ತಿಗೊಳ್ಳದೆ ಅರ್ಧಕ್ಕೆ ನಿಂತು ಹೋಗುತ್ತವೆ. ಪರಿಹಾರವಾಗಿ ನೀವು ಬೀದಿ ನಾಯಿಗಳಿಗೆ ಆಹಾರ ಹಾಕುವುದನ್ನು ಮಾಡಬಹುದು
ಅಥವಾ ಸೋಮವಾರದಂದು ಶಿವನ ದೇವಸ್ಥಾನಕ್ಕೆ 700 ಗ್ರಾಂ ಹುರುಳಿಕಾಳು ಕೊಟ್ಟು ಪೂಜೆ ಮಾಡಿಸಿ ಪೌರಕಾರ್ಮಿಕರಿಗೆ ಅಥವಾ ಬಡವರಿಗೆ ದಾನ ಮಾಡಿದರೆ ದೋಷ ಕಡಿಮೆ ಆಗುತ್ತದೆ.

ತುಲಾರಾಶಿಯವರಿಗೆ ಧನಾಗಮನದ ಸಮಯ ಆಗಿದ್ದು ನಿಮ್ಮ ಕೋಪದ ಕಾರಣದಿಂದ ಆರೋಗ್ಯಕ್ಕೆ ಕೆಡಬಹುದು. ಹಸುಗಳಿಗೆ ಆಲೂಗೆಡ್ಡೆ ಬೇಯಿಸಿ ಕೊಡುವುದು ಅಥವಾ ಅಕ್ಕಿ ಬೆಲ್ಲ ಕೊಡುವುದರಿಂದ ದೋಷಗಳು ಪರಿಹಾರವಾಗುತ್ತದೆ. ವೃಶ್ಚಿಕರಾಶಿಯವರು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದರೆ ಪರಿಹಾರವಾಗುವ ಸಮಯವಾಗಿದೆ. ಪ್ರತಿನಿತ್ಯವು ತಪ್ಪದೆ ಸೂರ್ಯ ನಮಸ್ಕಾರ ಮಾಡುವುದು ಹಾಗೂ ಪ್ರತಿ ಭಾನುವಾರದಂದು ವೆಂಕಟೇಶ್ವರ ದೇವಸ್ಥಾನಕ್ಕೆ ಸಾಧ್ಯವಾದಷ್ಟು ದಾಳಿಂಬೆ ಹಣ್ಣನ್ನು ಕೊಡುವುದರಿಂದ ನಿಮ್ಮ ದೋಷಗಳು ಪರಿಹಾರವಾಗುತ್ತದೆ. ಧನಸು ರಾಶಿಯವರು ಸರ್ಪದೋಷ ಸಂಬಂಧಿತ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತೀರಿ. ನಿವು ಸಪೋಟ ಅಥವಾ ತೆಂಗಿನಕಾಯಿ ದಾನ ನೀಡುವುದರಿಂದ ದೋಷ ಕಡಿಮೆ ಆಗುತ್ತದೆ. ನೀವು ಸಹ ವೃದ್ಧಾಶ್ರಮಗಳಿಗೆ ಆಹಾರ ಅಥವಾ ಸಾಮಗ್ರಿಗಳನ್ನು ದಾನ ನೀಡಿದರೆ ಒಳ್ಳೆಯದಾಗುತ್ತದೆ. ಕುಂಭ ರಾಶಿಯವರಿಗೆ ಕನಸು ನನಸಾಗುವ ಸಮಯವಾಗಿದ್ದು ಶನಿಮಹಾತ್ಮ ದೇವಾಲಯಗಳಿಗೆ ಎಳ್ಳೆಣ್ಣೆಯನ್ನು ದಾನ ಕೊಡಿ. ಮೀನ ರಾಶಿಯವರಿಗೆ ಸಹ ತಾಳ್ಮೆಯಿಂದ ಇರಬೇಕಾದ ಸಮಯವಾಗಿದ್ದು ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ನಿಮ್ಮ ದೋಷ ಪರಿಹಾರಕ್ಕಾಗಿ ಬಡವರಿಗೆ ಹಾಲು ದಾನ ಮಾಡಿ ಅಥವಾ ಶಿವನ ದೇವಾಲಯದಲ್ಲಿ ನಿಮ್ಮ ಹೆಸರಿನಲ್ಲಿ ರುದ್ರಾಭಿಷೇಕ ಮಾಡಿಸಿ.

By admin

Leave a Reply

Your email address will not be published. Required fields are marked *