ಶ್ರೀಮಂತ ಶಾಸಕ ಸಚಿವರು ಎಷ್ಟು ಶ್ರೀಮಂತರು ಗೊತ್ತಾ ? ಕರ್ನಾಟಕದ ಕುಬೇರರು ಇವರೆ ನೋಡಿ » Karnataka's Best News Portal

ಶ್ರೀಮಂತ ಶಾಸಕ ಸಚಿವರು ಎಷ್ಟು ಶ್ರೀಮಂತರು ಗೊತ್ತಾ ? ಕರ್ನಾಟಕದ ಕುಬೇರರು ಇವರೆ ನೋಡಿ

ಕರ್ನಾಟಕದ ಕುಬೇರರು ಇವರೇ ನೋಡಿ||
ರಾಜಕಾರಣಿಗಳೆಲ್ಲರೂ ಶ್ರೀಮಂತರೇ ಅದರಲ್ಲಿ ಎರಡು ಮಾತಿಲ್ಲ ಬಡ ರಾಜಕಾರಣಿಗಳು ಸಿಗುವುದು ಅಪರೂಪದಲ್ಲಿ ಅಪರೂಪ ಹಾಗಾದರೆ ಈ ದಿನ ಕರ್ನಾಟಕದ ಟಾಪ್ 10 ಶ್ರೀಮಂತ ಶಾಸಕರು ಮತ್ತು ಸಚಿವರು ಯಾರು ಅವರ ಆಸ್ತಿ ಎಷ್ಟು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ ಮೊದಲನೆಯದಾಗಿ ಮೊದಲ ಸ್ಥಾನದಲ್ಲಿರುವಂತಹ ಸಚಿವರು ಎಂ ಟಿ ಬಿ ನಾಗರಾಜ್ ಹೌದು ಶ್ರೀಮಂತ ಶಾಸಕರು ಮತ್ತು ಸಚಿವರ ಪಟ್ಟಿಯಲ್ಲಿ ಎಂಟಿಬಿ ನಾಗರಾಜ್ ಮೊದಲ ಸ್ಥಾನದಲ್ಲಿ ಇದ್ದಾರೆ ಇವರು 2018 ರಲ್ಲಿ ಕಾಂಗ್ರೆಸ್ ನಿಂದ ಹೊಸಕೋಟೆ ಕ್ಷೇತ್ರದಲ್ಲಿ ವಿಧಾನ ಸಭೆಯ ಚುನಾವಣೆಗೆ ನಿಂತಿದ್ದರು ಆಗ ತಮ್ಮ ಮತ್ತು ತಮ್ಮ ಪತ್ನಿಯ ಆಸ್ತಿ ಬರೋಬ್ಬರಿ 1015 ಕೋಟಿ ಎಂದು ಘೋಷಿಸಿಕೊಂಡಿದ್ದರು ನಂತರ ಒಂದು ವರ್ಷದ ಬಳಿಕ ನಂತರ 2019ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡರು.

ಇದರ ಪರಿಣಾಮ ಹೊಸಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಬಿಜೆಪಿಯಿಂದ ನಿಂತಿದ್ದರು ಆಗ ಇವರ ಆಸ್ತಿ 1201 ಕೋಟಿ ಗೆ ಏರಿಕೆಯಾಗಿತ್ತು ಆದರೆ ಆ ಎಲೆಕ್ಷನ್ ನಲ್ಲಿ ಸೋತು ಹೋಗಿದ್ದರಿಂದ ಎಂಎಲ್ಎ ಆಗುವುದು ಮಿಸ್ ಆಯ್ತು ನಂತರ ಬಿಜೆಪಿ ಯಿಂದ ಎಂ ಎಲ್ ಸಿ ಅಥವಾ ವಿಧಾನ ಪರಿಷತ್ ಎಲೆಕ್ಷನ್ ಗೆ ನಿಂತರು ಆಗ ಇವರ ಕುಟುಂಬದ ಆಸ್ತಿ 1220 ಕೋಟಿ ಗೆ ಹೋಗಿತ್ತು ಎಂ ಎಲ್ ಸಿ ಆದ ನಂತರ ಇವರನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಲಾಯಿತು ಈ ಮೂಲಕ ರಾಜ್ಯದ ಶ್ರೀಮಂತ ರಾಜಕಾರಣಿ ಎಂದೆನಿಸಿ ಕೊಂಡಿದ್ದಾರೆ ಎಂಟಿಬಿ ನಾಗರಾಜ್ ಬರಿ ಕರ್ನಾಟಕ ಮಾತ್ರವಲ್ಲದೆ ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಇವರು ಕೂಡ ಸ್ಥಾನವನ್ನು ಪಡೆದು ಕೊಂಡಿದ್ದಾರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಎರಡನೆಯದಾಗಿ ಡಿಕೆ ಶಿವಕುಮಾರ್ 2018ರ ವಿಧಾನ ಸಭೆಯ ಚುನಾವಣೆಗೆ ಕನಕಪುರ ಕ್ಷೇತ್ರದಿಂದ ನಿಲ್ಲುವಾಗ ತಮ್ಮ ಕುಟುಂಬದ ಆಸ್ತಿ 840 ಕೋಟಿ ಎಂದು ಘೋಷಿಸಿಕೊಂಡಿದ್ದರು ಮೂರನೇಯ ಸ್ಥಾನದಲ್ಲಿ ಬೈರತಿ ಸುರೇಶ್ ಅವರು ಇದ್ದಾರೆ ಇವರು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಇವರ ಕುಟುಂಬದ ಬಳಿ 416 ಕೋಟಿ ಮೌಲ್ಯದ ಆಸ್ತಿ ಇದೆ ಈ ಮೂಲಕ ರಾಜ್ಯದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ನಾಲ್ಕನೇಯದಾಗಿ ಆರ್ ಶಂಕರ್ ಇವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಅಥವಾ KPJP ಯಿಂದ 2018ರ ವಿಧಾನಸಭೆಯ ಚುನಾವಣೆಗೆ ಹಾವೇರಿ ಜಿಲ್ಲೆಯಲ್ಲಿ ಬರುವ ರಾಣೆಬೆನ್ನೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿದರು ಈ ವೇಳೆ ತಮ್ಮ ಕುಟುಂಬದ ಆಸ್ತಿ 265 ಕೋಟಿ ಎಂದು ಘೋಷಿಸಿಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">