ಒಂದು ಹನಿ ಎಣ್ಣೆಯೂ ಬೇಡ ಹೀಗೆ ಮಾಡಿ ರುಚಿಕರ ಮಸಾಲೆ ಶೇಂಗಾ ಎಣ್ಣೆ ಇಲ್ಲದೆ ಸ್ಪೆಷಲ್ ಮಸಾಲೆ ಹಾಕಿ ಮಾಡಿದ ಶೇಂಗಾ ಹುರಿಗಾಳು - Karnataka's Best News Portal

ಎಣ್ಣೆ ಇಲ್ಲದೆ ಸ್ಪೆಷಲ್ ಮಸಾಲೆ ಪೇಸ್ಟ್ ಹಾಕಿ ಮಾಡಿದ ಶೇಂಗಾ ಹುರಿಗಾಳು||ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಹೊಸ ತಿಂಡಿ ತಿನ್ನಲೇಬೇಕು ಎಂದು ಅನಿಸುತ್ತಿರುತ್ತದೆ ಅದರ ಜೊತೆ ಸಂಜೆ ಕಾಫಿ ಟೀ ಸಮಯಕ್ಕೆ ಯಾವುದಾದರೂ ತಿಂಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದು ಸಾಮಾನ್ಯ ಅದೇ ರೀತಿ ಪ್ರತಿಯೊಬ್ಬರೂ ಕೂಡ ಎಣ್ಣೆಯಲ್ಲಿ ಕರಿದಂತಹ ಪದಾರ್ಥ ಬಜ್ಜಿ ಬೋಂಡ ವಡೆ ಹೀಗೆ ಇವುಗಳನ್ನು ತಿನ್ನುತ್ತಿರುತ್ತಾರೆ ಆದರೆ ಅದು ನಮ್ಮ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ ಬದಲಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಪದಾರ್ಥವನ್ನು ನೀವು ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು ಹಾಗೂ ಇದನ್ನು ಮಾಡುವುದು ಬಹಳ ಸುಲಭದ ವಿಧಾನವಾಗಿದ್ದು ಅದನ್ನು ಹೇಗೆ ಮಾಡುವುದು ಎಂಬ ಮಾಹಿತಿಯನ್ನು ತಿಳಿಯೋಣ.

ಹೌದು ಶೇಂಗಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿ ಯೊಂದು ತಿಂಡಿಗಳಿಗೂ ಕೂಡ ಸಾಮಾನ್ಯವಾಗಿ ಬಳಸುವಂತಹ ಪದಾರ್ಥ ಇದಾಗಿದ್ದು ಇದನ್ನು ಹಾಕುವುದರಿಂದ ಅಡಿಗೆಯ ರುಚಿ ಹೆಚ್ಚಾಗುತ್ತದೆ ಜೊತೆಗೆ ಪ್ರತಿಯೊಂದು ತಿಂಡಿಯಲ್ಲಿಯೂ ಕೂಡ ಶೇಂಗಾ ಬೀಜವನ್ನು ಹುಡುಕುತ್ತಲೇ ಇರುತ್ತಾರೆ ಅದರಲ್ಲೂ ಹೆಚ್ಚಾಗಿ ಮಕ್ಕಳು ಚಿತ್ರನ್ನ ಅವಲಕ್ಕಿ ಪುಳಿಯೋಗ್ಗರೆ ಇಂತಹ ತಿಂಡಿಗಳಲ್ಲಿ ಶೇಂಗಾ ಇಲ್ಲದೆ ಇದ್ದರೆ ಅವರು ತಿಂಡಿಯನ್ನೇ ಮಾಡುವುದಿಲ್ಲ ಅಷ್ಟರ ಮಟ್ಟಿಗೆ ಅವರು ಶೇಂಗಾವನ್ನು ಇಷ್ಟಪಡುತ್ತಿರುತ್ತಾರೆ ಅದೇ ರೀತಿ ಈ ದಿನ ನಾವು ಮಾಡುವಂತಹ ಈ ಒಂದು ಪದಾರ್ಥ ಮಸಾಲೆ ಶೇಂಗಾ ಆಗಿದ್ದು ಇದಕ್ಕೆ ಯಾವು ದೇ ರೀತಿಯ ಎಣ್ಣೆ ಬಳಸದೆ ಸುಲಭವಾಗಿ ಶೇಂಗಾ ರೆಸಿಪಿ ತಯಾರಿಸಬಹುದು ಅದನ್ನು ಹೇಗೆ ಮಾಡು ವುದು ಎಂದರೆ.

ಮೊದಲು ನಿಮಗೆ ಎಷ್ಟು ಬೇಕೋ ಅಳತೆ ಯಷ್ಟು ಕಡಲೆ ಬೀಜವನ್ನು ತೆಗೆದು ಚೆನ್ನಾಗಿ ಹುರಿದು ಅಗಲವಾದ ತಟ್ಟೆಗೆ ಹಾಕಿಕೊಳ್ಳಬೇಕು ನಂತರ ಒಂದು ಚಿಕ್ಕ ಬೌಲಿನಲ್ಲಿ ಒಂದು ಚಮಚ ಅಚ್ಚಕಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಒಂದು ಚಿಟಿಕೆ ಇಂಗು ಕಾಲು ಚಮಚ ಅರಿಶಿಣ ಮತ್ತು ಮಾವಿನ ಕಾಯಿ ಪುಡಿ ಅಥವಾ ಎರಡು ಚಮಚ ನಿಂಬೆಹಣ್ಣಿನ ರಸ ಇಷ್ಟನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೇಸ್ಟ್ ತಯಾರಿಸಿ ಕೊಳ್ಳಿ ನಂತರ ಈ ಪೇಸ್ಟ್ ಅನ್ನು ಹುರಿದು ಇಟ್ಟಂತಹ ಶೇಂಗಾ ಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ಆಗ ಮಸಾಲೆ ಶೇಂಗಾ ತಯಾರಾಗುತ್ತದೆ ಇದನ್ನು ಗಾಳಿ ಆಡದಿರುವ ಡಬ್ಬಿಯಲ್ಲಿ ಶೇಖರಿಸಿ ಇಟ್ಟು ಕೊಂಡು ಸಂಜೆಯ ಸಮಯ ಟೀ ಕಾಫಿ ಕುಡಿಯುವಾಗ ತಿಂದರೆ ಇದರ ರುಚಿ ಅದ್ಭುತವಾಗಿರುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *