ಚರಣ್ ರಾಜ್ ಅವರ ಮಗ ಕೂಡ ಕನ್ನಡದ ಖ್ಯಾತ ನಟ ಯಾರು ಗೊತ್ತಾ ? ಮೊದಲ ಬಾರಿಗೆ ನೋಡಿ ಈ‌ ವಿಡಿಯೋ - Karnataka's Best News Portal

ಚರಣ್ ರಾಜ್ ಅವರ ಮಗ ಕೂಡ ಕನ್ನಡದ ನಟ ಯಾರು ಗೊತ್ತಾ!!ಚರಣ್ ರಾಜ್ ವಯಸ್ಸು 60 ವರ್ಷ ದಾಟಿದರೂ ಕೂಡ ಈಗಲೂ ಕೂಡ ಯುವಕನಂತೆ ಶಕ್ತಿಶಾಲಿಯಾಗಿ ಕಾಣುವ ನಟ ಚರಣ್ ರಾಜ್ ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟಿದರು ಸಹ ನಟ ಚರಣ್ ರಾಜ್ ಅವರು ಸಿನಿಮಾದಲ್ಲಿ ತುಂಬಾ ಬೆಳದದ್ದು ಬೆಳಗಿದ್ದು ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳು ನಾಡಿನಲ್ಲಿ ಕನ್ನಡದ ಆಶಾ ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿ ಪ್ರಾರಂಭ ಮಾಡಿದರು ನಂತರ ತಾಳಿಯ ಭಾಗ್ಯ ಸಿನಿಮಾದಲ್ಲಿ ನಟಿಸಿದ್ದರು ಅಗಾಧ ಪ್ರತಿಭೆಯನ್ನು ಹೊಂದಿದ್ದರೂ ಕೂಡ ಕನ್ನಡದಲ್ಲಿ ಚರಣ್ ರಾಜ್ ಅವರಿಗೆ ಅಷ್ಟಾಗಿ ಹೇಳಿಕೊಳ್ಳುವಷ್ಟು ಅವಕಾಶಗಳು ಸಿಗಲಿಲ್ಲ ನಂತರ ಇವರ ಪ್ರತಿಭೆಯನ್ನು ಗುರುತಿಸಿದ ತೆಲುಗಿನ ಚಿತ್ರರಂಗದ ಅಂದಿನ ಸಿನಿಮಾ ನಿರ್ದೇಶಕರು ಅವರನ್ನು ಕರೆದು ಅವಕಾಶವನ್ನು ಕೊಡುತ್ತಾರೆ.

ತೆಲುಗು ಹಾಗೂ ತಮಿಳುನಲ್ಲಿ ಹೆಚ್ಚಾಗಿ ನಟಿಸಿದ್ದರು ಚರಣ್ ರಾಜ್ ಅವರು ಕನ್ನಡ ಚಿತ್ರರಂಗವನ್ನು ಮರೆಯಲಿಲ್ಲ ಕನ್ನಡದಲ್ಲಿ ನಾಯಕ ನಟರಾಗಿ ಪೋಷಕ ನಟರಾಗಿ ಖಳನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಕನ್ನಡದಲ್ಲಿ ಆಫ್ರಿಕಾದಲ್ಲಿ ಶೀಲಾ ಎಂಬ ಚಿತ್ರದಲ್ಲಿ ಹಾಗೂ ಗಂಧದ ಗುಡಿ ಭಾಗ ಎರಡು ಸಮರ ಅಣ್ಣಾವ್ರ ಮಕ್ಕಳು ಪಾಪಿಗಳ ಲೋಕದಲ್ಲಿ ಇನ್ನೂ ಮುಂತಾದ ಚಿತ್ರಗಳು ಇವರಿಗೆ ಇನ್ನು ಹೆಚ್ಚಿನ ಹೆಸರನ್ನು ತಂದುಕೊಟ್ಟವು ಕನ್ನಡದಲ್ಲಿ 25ಕ್ಕೂ ಹೆಚ್ಚು ತಮಿಳಿ ನಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಚರಣ್ ರಾಜ್ ತೆಲುಗಿನಲ್ಲಿ 30ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ ಮಲಯಾಳಂ ಹಿಂದಿ ಚಿತ್ರಗಳಲ್ಲಿಯೂ ಕೂಡ ತಮ್ಮ ನಟನೆಯ ಖದರ್ ಅನ್ನು ತೋರಿಸಿದ್ದಾರೆ ನಟರಾಗಿ ನಿರ್ದೇಶಕರಾಗಿ ಸಂಗೀತ ನಿರ್ದೇಶಕರಾಗಿ ಬರಹಗಾರರಾಗಿ ನಿರ್ಮಾಪಕರಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ.

ಇನ್ನೂ ಚರಣ್ ರಾಜ್ ಅವರ ಮಗ ಕೂಡ ತಮಿಳು ಚಿತ್ರರಂಗದಲ್ಲಿ ನಾಯಕ ನಟರಾಗಿ ಮಿಂಚುತ್ತಾ ಇದ್ದಾರೆ ಚರಣ್ ರಾಜ್ ಅವರ ಮಗ ತೇಜ್ ರಾಜ್ ಅವರು ಕೂಡ ತಮಿಳಿನ 90 ಎಂಎಲ್ ಸಿನಿಮಾದಲ್ಲಿ ಇತ್ತೀಚಿಗೆ ನಾಯಕನಟನಾಗಿ ನಟಿಸಿದ್ದರು ಜೊತೆಗೆ ತಮಿಳಿನ ಇನ್ನು ಎರಡು ಮೂರು ಸಿನಿಮಾಗಳಲ್ಲಿ ತೇಜ್ ರಾಜ್ ಬಣ್ಣ ಹಚ್ಚಿದ್ದಾರೆ ಕನ್ನಡದಲ್ಲಿ ಭರತ ಬಾಹುಬಲಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟ ತೇಜ್ ರಾಜ್ ಒಟ್ಟಾರೆಯಾಗಿ ನಮ್ಮ ಕನ್ನಡದ ನಟರು ಯಾವ ಭಾಷೆಗೂ ಕೂಡ ಕಡಿಮೆ ಇಲ್ಲ ಎಂಬಂತೆ ಎಲ್ಲಾ ಚಿತ್ರ ರಂಗದಲ್ಲಿಯೂ ಕೂಡ ತಮ್ಮದೇ ಆದಂತಹ ಪ್ರತಿಭೆ ಗಳನ್ನು ತೋರಿಸುವುದರ ಮುಖಾಂತರ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *