ಎಷ್ಟೇ ಕಷ್ಟ ಬಂದ್ರು ಯಾರ ಮುಂದೆನೂ ಕೈ ಚಾಚಲ್ಲ ಕೇಳಿದರೆ ದುಡ್ಡು ಕೋಡೊಕೆ ಫ್ರೆಂಡ್ಸ್ ಫ್ಯಾನ್ಸ್ ಇದ್ದಾರೆ ಕಣ್ಣೀರು ಹಾಕಿದ್ದು ನನ್ನ ಕಥೆ ನಿಮಗೆ ಗೊತ್ತಾಗ್ಲಿ ಅಂತ.. - Karnataka's Best News Portal

‘ನಾನು ಕೂಡಿಟ್ಟಿಲ್ಲ ಅಷ್ಟೇ, ಸಂಪಾದನೆ ಮಾಡಿದ್ದೀನಿ, ನಾನು ಯಾರ ಮುಂದೆ ಕೈ ಚಾಚ ಬೇಕಿಲ್ಲ’ ಎಂದ ರವಿಚಂದ್ರನ್.ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಎಂದೆ ಹೆಸರುವಾಸಿಯಾದ ರವಿಚಂದ್ರನ್ ರವರು ಈಗಾಗಲೇ ಹಲವು ಸಿನಿಮಾಗಳನ್ನು ಮಾಡಿ ಪ್ರಸಿದ್ಧವಾಗಿದ್ದಾರೆ ಅಲ್ಲದೆ ಇವರ ಪ್ರೇಮಲೋಕ, ಸಿಪಾಯಿ, ಮಲ್ಲ ಹಲವು ಸಿನಿಮಾಗಳು ಜನಮನ ಗೆದ್ದಿರುವ ಚಿತ್ರವಾಗಿವೆ. ಇತ್ತೀಚಿಗೆ ದೀಪೋತ್ಸವದ ಅಂಗವಾಗಿ ರವಿಚಂದ್ರನ್ ರವರನ್ನು ಕಾರ್ಯಕ್ರಮ ಒಂದಕ್ಕೆ ಅತಿಯಾಗಿ ಕರೆಸಿದ್ದರು‌.

ಆ ಸಮಯದಲ್ಲಿ ರವಿಚಂದ್ರನ್ ರವರು ಕೆಲವು ಮಾತುಗಳನ್ನು ಭಾವುಕದಿಂದ ಮಾತನಾಡಿದ್ದಾರೆ.ಹೌದು ವೇದಿಕೆಯ ಮೇಲೆ ರವಿಚಂದ್ರನ್ ರವರು ಅಭಿಮಾನಿಗಳನ್ನು ಹೊಗಳಿದ್ದಾರೆ, ರವಿಚಂದ್ರನ್ ಎಂದಿಗೂ ಸೋಲಿಗೆ ಹೆದರಿಲ್ಲ ಬದಲಾಗಿ ಅವಮಾನಕ್ಕೆ ಎದುರು ನಿಲ್ಲುತ್ತಾರೆ ಎಂದು ಹೇಳಿದ್ದಾರೆ ಅಲ್ಲದೆ ರವಿಚಂದ್ರನ್ ರವರು ಸಿನಿಮಾ ಗಾಗಿ ಅವರ ಜೀವನವನ್ನು ಮುಡಿಪಿಟಿದ್ದಾರಂತೆ.

ರವಿಚಂದ್ರನ್ ರವರು ತಮ್ಮ ತಂದೆಯ ನೆರಳಿನಲ್ಲಿ ಬೆಳೆದವರು ಹಾಗೂ ಅವರ ತಂದೆಯ ಮೂಲಕವೇ ಸಿನೆಮಾ ರಂಗಕ್ಕೆ ಬಂದವರು ಅಲ್ಲದೆ ತಮ್ಮ ತಂದೆಯ ಸಾವಿನ ನಂತರವೂ ಅವರಿಗೆ ತಂದೆಯ ಮಾತುಗಳು ಯಶಸ್ಸಿನ ದಾರಿಗೆ ನಡೆಯಲು ಹಾದಿ ಮಾಡಿಕೊಟ್ಟಿದೆ. ರವಿಚಂದ್ರನ್ ರವರಿಗೆ ಅಳಲು ಈಗಲು ಬರುವುದಿಲ್ಲವಂತೆ ರವಿಚಂದ್ರನ್ ಕೂಡ ರಾತ್ರಿ ಎರಡಕ್ಕೆ ಮಲಗಿ ಬೆಳಗ್ಗೆ 5:00 ಏಳುತ್ತಾರಂತೆ ಅವರಿಗೆ ಸಿನಿಮಾ ಬಿಟ್ಟು ಬೇರೆ ವಿಷಯವೇ ಗೊತ್ತಿಲ್ಲವಂತೆ.

ರವಿಚಂದ್ರನ್ ರವರ ಮೊದಲ ಸಿನಿಮಾ ಆದ ನಾನೇ ರಾಜ ಚಿತ್ರದಿಂದ ಈವರೆಗೂ ನಿಜ ಜೀವನದಲ್ಲೂ ಅವರು ರಾಜರಂತೆ ಇದ್ದಾರೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ರವಿಚಂದ್ರನ್ ರವರು ಎಂದಿಗೂ ಯಾರ ಮುಂದೆ ಕೈ ಚಾಚಿಲ್ಲ ಕೈ ಚಾಚಲು ಅವರ ಅಭಿಮಾನಿಗಳು ಕೈ ಬಿಡೋದಿಲ್ಲ ಎಂದು ಅಭಿಮಾನಿಗಳನ್ನು ಹೊಗಳಿದ್ದಾರೆ. ರವಿಚಂದ್ರನ್ ರವರು ಎಂದಿಗೂ ನಾಳೆಯ ಬಗ್ಗೆ ಯೋಚಿಸೇ ಇಲ್ಲವಂತೆ, ನಾಳೆಯ ದುಡಿಮೆಯ ಬಗ್ಗೆ ಯೋಚನೆ ಇಲ್ಲವಂತೆ ಬದಲಿಗೆ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಎಂದು ವೇದಿಕೆ ಮೇಲೆ ಹೇಳಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿಯನ್ನು ತಂದಿದ್ದಾರೆ.ರವಿಚಂದ್ರನ್ ರವರಿಗೆ ಬಂಧುಗಳಿಗಿಂತ ಸ್ನೇಹಿತರು ಕೈಹಿಡಿದು ನಡೆಯುತ್ತಾರಂತೆ ಅವರಿಗೆ ಕಷ್ಟ ಬಂದಾಗ ಸ್ನೇಹಿತರು ನಾನಿದ್ದೇನೆ ಎಂದು ಹೇಳಿದ್ದಾರೆ ಅದೇ ಅವರ ಸಂಪಾದನೆ ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಈ ಹಿಂದೆ ಕೆಲವೊಂದು ಮಾಧ್ಯಮಗಳಲ್ಲಿ ರವಿಚಂದ್ರನ್ ರವರಿಗೆ ನಟ ನಟಿಯರು ಸಹಾಯ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹೊರಡಿಸಿದ್ದರಂತೆ ಅವರಿಗೂ ಇಲ್ಲಿಯವರೆಗೂ ಯಾರಿಂದಲೂ ಸಹಾಯ ಬಂದಿಲ್ಲವಂತೆ ಅಂತ ಪರಿಸ್ಥಿತಿಯು ಅವರಿಗೆ ಎದುರಾಗಿಲ್ಲ ಎಂದು ಹೇಳಿದ್ದಾರೆ.ನಾನು ಕಣ್ಣೀರು ಹಾಕಿದ್ದು ನನ್ನ ಕಷ್ಟ ಅರ್ಥ ಆಗಲಿ ಅಂತ ಯಾರೂ ನನಗೆ ಕರುಣೆ ತೋರಿಸಲಿ ಅಂತ ಅಲ್ಲ ಎಂದು ವೇದಿಕೆಯ ಮೇಲೆ ಹೇಳಿದ್ದಾರೆ.

Leave a Reply

Your email address will not be published. Required fields are marked *