ಶರೀರದಲ್ಲಿ ಈ ಸಮಸ್ಯೆಗಳು ಇವೆಯಾ ? ವಿಟಮಿನ್ ಬಿ 12 ಇವತ್ತಿನಿಂದಲೇ ಸರಿ ಮಾಡಿಕೊಳ್ಳಿ ಆಹಾರಗಳ ಪಟ್ಟಿ & ಮನೆಮದ್ದುಗಳು ಇಲ್ಲಿವೆ ನೋಡಿ - Karnataka's Best News Portal

ಸರಿಯಾದ ಅನೇಕ ಸಮಸ್ಯೆಗಳಿಗೆ ಬಿ12 ವಿಟಮಿನ್ ಕೊರತೆ ಕಾರಣ ಇದನ್ನು ಸರಿಪಡಿಸಿಕೊಳ್ಳುವ ಆಹಾರ ಕ್ರಮ ಹೀಗಿದೆ ನೋಡಿ.ವಿಟಮಿನ್ ಬಿ12 ಎನ್ನುವುದು ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶ. ಇದು ದೇಹದ ನರವ್ಯೂಹದ ಮೇಲೆ ಪ್ರಧಾನ ನಿಯಂತ್ರಣವನ್ನು ಹೊಂದಿರುತ್ತದೆ. ಮೆದುಳು, ಹೃದಯ, ದೊಡ್ಡ ಕರುಳು, ಕಿಡ್ನಿ ಸೇರಿದಂತೆ ಶರೀರದ ಒಳಗಿರುವ ಎಲ್ಲಾ ಪ್ರಮುಖ ಆರ್ಗನ್ ಗಳಿಗೂ ಶಕ್ತಿಯನ್ನು ವೃದ್ಧಿ ಮಾಡುವ ಕೆಲಸ ಬಿ12 ವಿಟಮಿನ್ ಇಂದ ಆಗುತ್ತದೆ.

ಇದರ ಕೊರತೆ ಉಂಟಾದಾಗ ಶರೀರ ನರ್ವಸ್ ಆಗುತ್ತದೆ, ಸುಸ್ತು, ನಿಶಕ್ತಿ, ತಲೆಸುತ್ತು, ದಿನಪೂರ್ತಿ ಆಯಾಸ, ಯಾವುದರಲ್ಲೂ ಆಸಕ್ತಿಯೇ ಇಲ್ಲದಿರುವುದು ತಲೆನೋವು, ಮೈ ಕೈ ನೋವು, ನರ ದೌರ್ಭಲ್ಯತೆ, ಜ್ಞಾಪಕ ಶಕ್ತಿ ಕೊರತೆ ಇವೆಲ್ಲವೂ ಕಾಣಿಸಿಕೊಳ್ಳುತ್ತದೆ. ರಕ್ತ ಹೀನತೆ ಸಮಸ್ಯೆ ಮತ್ತು ಕಣ್ಣಿನ ಸಮಸ್ಯೆಯೂ ಕಾಣಿಸಿಕೊಳ್ಳುವ ಜೊತೆಗೆ ವ್ಯಕ್ತಿಯ ಜೀವನೋತ್ಸವ ಕುಸಿದು ಹೋಗುತ್ತದೆ ಎನ್ನಬಹುದು.

ಇದಕ್ಕಿರುವ ಉತ್ತಮ ಪರಿಹಾರ ಎಂದರೆ ವಿಟಮಿನ್ ಬಿ12 ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು. ಅದರಲ್ಲೂ ಆಯುರ್ವೇದದಲ್ಲಿ ವೇಗವಾಗಿ ಈ ಕೊರತೆಯನ್ನು ನಿಭಾಯಿಸುವ ಕೆಲವು ಆಹಾರ ಪದಾರ್ಥಗಳನ್ನು ಗುರುತಿಸಲಾಗಿದೆ. ಬ್ರೊಕಾಲಿ, ಬೆಣ್ಣೆ, ತುಪ್ಪ ಮತ್ತು ನೆನಸಿರುವ ಡ್ರೈ ಫ್ರೂಟ್ಸ್ ಗಳು ದೇಹಕ್ಕೆ ಅಧಿಕವಾಗಿ ಬಿ ಟ್ವೆಲ್ ಅನ್ನು ಕೊಡುತ್ತವೆ.

ಇದಲ್ಲದೆ ಆಯುರ್ವೇದದಲ್ಲಿ ಕಷಾಯಗಳನ್ನು ಕೊಟ್ಟು ದೇಹದಲ್ಲಿಯೇ ಬಿ12 ಹೆಚ್ಚಾಗಿ ಉತ್ಪತ್ತಿ ಆಗುವಂತೆ ಚಿಕಿತ್ಸೆ ನೀಡಲಾಗುತ್ತದೆ. ಅಮೃತ ಬಳ್ಳಿಯ, ಕಷಾಯ ಗರಿಕೆ ಕಷಾಯ ಕುಡಿಯುವುದರಿಂದ ರಕ್ತದ ವಿಕಾರಗಳು ದೂರ ಹೋಗಿ ಶುದ್ಧಿ ಆದಾಗ ತನ್ನಿಂದ ತಾನೇ ವಿಟಮಿನ್ ಬಿ12 ದೇಹದಲ್ಲಿ ಬ್ಯಾಲೆನ್ಸ್ ಆಗುತ್ತದೆ. ಇದೇ ರೀತಿ ದೃಶ್ಯಗಳಲ್ಲಿ ಸಹ ವಿಟಮಿನ್ ಬಿ12 ಕೊರತೆ ಅನ್ನು ನೀಗಿಸುವ ಅಂಶಗಳು ಯಥೇಚ್ಛವಾಗಿರುತ್ತದೆ.

ಹೆಸರು ಕಾಳು, ಉದ್ದಿನ ಕಾಳು, ಹುರುಳಿ ಕಾಳು ಮತ್ತು ಸಿರಿ ಧಾನ್ಯಗಳು ಇವುಗಳ ಸೇವನೆ ಮಾಡುವುದರಿಂದ ಮತ್ತು ಪಾಲಿಶ್ ಮಾಡದೆ ಇರುವ ಅಕ್ಕಿ ಹಾಗೂ ಪಾಲಿಶ್ ಮಾಡದೆ ಇರುವ ಜೋಳ ಸೇವನೆ ಮಾಡುವುದರಿಂದ ಕೂಡ ವಿಟಮಿನ್ ಬಿ 12 ಕೊರತೆ ಸರಿ ಹೋಗುತ್ತದೆ. ಹಾಗೆಯೇ ವಿಟಮಿನ್ b12 ಕೊರತೆ ಯಾಕೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ.

ಅಜೀರ್ಣ, ಮಲಬದ್ಧತೆ, ಅತಿಯಾದ ಮಾನಸಿಕ ಒತ್ತಡ, ನಿದ್ರಾಹೀನತೆಯಿಂದ ಈ ಸಮಸ್ಯೆ ಬರುತ್ತದೆ. ಹಾಗಾಗಿ ಇವುಗಳನ್ನೆಲ್ಲ ಸರಿ ಮಾಡಿಕೊಂಡು ಉತ್ತಮವಾದ ಆಹಾರ ಪದ್ಧತಿ ಹಾಗೂ ಉತ್ತಮವಾದ ಜೀವನ ಶೈಲಿ ರೂಢಿಸಿಕೊಂಡರೆ ಯಾವ ವಿಟಮಿನ್ ಕೊರತೆ ಕೂಡ ಬರುವುದಿಲ್ಲ ಎನ್ನುತ್ತದೆ ಆಯುರ್ವೇದ. ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *