Dr ಬ್ರೋ ಜೊತೆ ಬಿಗ್ ಸ್ಕ್ಯಾಮ್ ನಂ 1 ಪಟ್ಟಕ್ಕೇರಲು ಮೋಸ ಮಾಡಿದ್ರಾ ಲೋಹಿತ್ ಕನ್ನಡ ಯೂಟ್ಯೂಬರ್ಸ್ ಬಿಗ್ ಸಮಸ್ಯೆ... - Karnataka's Best News Portal

Dr BRO ಗೆ ಮೋಸ ಮಾಡಿದ ಯೂಟ್ಯೂಬರ್
ಡಾಕ್ಟರ್ ಬ್ರೋ ಈ ಹೆಸರು ಸೋಶಿಯಲ್ ಮೀಡಿಯಾ ದ ಮುಖಾಂತರ ಎಲ್ಲರಿಗೂ ಚಿರಪರಿಚಿತ ಹೌದು ವಿವಿಧ ದೇಶಗಳ ಕುರಿತಾಗಿ ವ್ಲಾಗಿಂಗ್ ಮಾಡುವವರ ವಿಡಿಯೋ ನೋಡುವಂತಹ ಪ್ರತಿಯೊಬ್ಬರಿಗೂ ಚಿರಪರಿಚಿತವಾದಂತಹ ಹೆಸರು ಡಾಕ್ಟರ್ ಬ್ರೋ ಎಂದೇ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದಿರುವ ಈ ಯುವಕ ಗಗನ್ ಶ್ರೀನಿವಾಸ್ ಅವರು ತಮ್ಮದೇ ಆದಂತಹ ವಿಶಿಷ್ಟ ಶೈಲಿಯಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಾ.

ಜಗತ್ತಿನಲ್ಲಿರುವಂತಹ ನಾನಾ ದೇಶಗಳಿಗೆ ಹೋಗಿ ಅಲ್ಲಿನ ಪರಿಚಯಗಳನ್ನು ಜನರಿಗೆ ಮಾಡಿಕೊಡುವ ತಮ್ಮ ವಿಶಿಷ್ಟ ವಿಡಿಯೋಗಳನ್ನು ಇಂದು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು ಯೂಟ್ಯೂಬ್ ನಲ್ಲಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದ್ದಾರೆ ಆದರೆ ಇದೀಗ ಡಾಕ್ಟರ್ ಬ್ರೋ ಅವರು ಬೇರೆಯವರಿಗೆ ಸಹಾಯ ಮಾಡಿ.

ಅವರಿಂದಲೇ ತನಗೆ ನಂಬಿಕೆ ದ್ರೋಹ ಆಯಿತು ಅನ್ನೋ ವಿಚಾರವನ್ನು ಒಂದು ಸುಧೀರ್ಘ ಪೋಸ್ಟ್ ನಲ್ಲಿ ಸ್ವ ವಿವರವಾಗಿ ಬರೆದುಕೊಂಡು ತಮ್ಮ ಮನಸ್ಸಿನ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಹೌದು ಗಗನ್ ಶ್ರೀನಿವಾಸ ಅವರು ಈ ಹಿಂದೆ ಆಫ್ಘಾನಿಸ್ತಾನದ ತಾಲಿಬಾನ್ ದೇಶದಿಂದ ಹೆದರಿ ದುಬೈಗೆ ಓಡಿ ಬಂದಿದ್ದ ಮತ್ತೊಬ್ಬ ವ್ಲಾಗರ್ ಲೋಹಿತ್ ಕನ್ನಡ ಟ್ರಾವೆಲರ್ ಗೆ ಧೈರ್ಯ ತುಂಬಿ ಅವರ ಚಾನಲ್ ನಲ್ಲಿ ಅವರೊಂದಿಗೆ ವಿಡಿಯೋ ಮಾಡಿ ಅವರಿಗೆ ಸಪೋರ್ಟ್ ಮಾಡಿದ ವಿಷಯದ ಬಗ್ಗೆ ತಿಳಿಸಿದ್ದಾರೆ.

ಆದರೆ ಈಗ ತಾನು ಸಪೋರ್ಟ್ ಮಾಡಿದಂತಹ ಈ ವ್ಲಾಗರ್ ನಿಂದಲೇ ಮೋಸ ಹೋಗಿರುವಂತಹ ವಿಷಯದ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ ಗಗನ್ ಅವರು. ಹೌದು ಡಾಕ್ಟರ್ ಬ್ರೋ ತಾಂಜೀನಿಯಕ್ಕೆ ಹೋಗುವಾಗ ಲೋಹಿತ್ ಅವರು ತಾಂಜೀನಿಯಾದ ಹಾರ್ಟ್ ಟ್ರೀ ಟ್ರೈನ್ ಬಗ್ಗೆ ವಿಡಿಯೋವನ್ನು ಮಾಡುತ್ತೀರಾ ಎಂದು ಕೇಳಿದಾಗ ಡಾಕ್ಟರ್ ಬ್ರೋ ಹೌದು ನಾನು ಈಗ ಅದರ ಬಗ್ಗೆ ರಿಸರ್ಚ್ ಮಾಡುತ್ತಾ ಇದ್ದು ಭಾನುವಾರ ಅಲ್ಲಿಗೆ ಹೋಗುವುದಾಗಿ ಮೊದಲೇ ಹೇಳಿದರಂತೆ.

ಆದರೆ ಲೋಹಿತ್ ಅವರು ತಾನು ಈಗಾಗಲೇ ಮೊದಲು ಇದ್ದ ಕಡೆಯಿಂದ ಬಹಳ ಬೇಗ ಬಂದು ತಾಂಜೀನಿಯಾಕೆ ಬಂದು ಡಾಕ್ಟರ್ ಬ್ರೋ ಎಡಿಟ್ ಮಾಡುತ್ತಾ ಇದ್ದಂತಹ ಹಾರ್ಟ್ ಜಿ ಟ್ರಬ್ ನ ಕುರಿತಾಗಿ ಹೊಸ ವಿಡಿಯೋ ವನ್ನು ಮಾಡಿ ಮಾರನೇ ದಿನವೇ ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಒಂದು ವಾರದಿಂದ ಅಲ್ಲೇ ಇದ್ದು ಡಾಕ್ಟರ್ ಬ್ರೋ ಅವರು ಮಾಡಿದ ಎಲ್ಲಾ ಕೆಲಸವನ್ನು.

ಹಾಳು ಮಾಡಿದ್ದಾರೆ ಹೌದು ಇದೇ ವಿಚಾರವಾಗಿ ಡಾಕ್ಟರ್ ಬ್ರೋ ಅವರು ಬೇಸರದಿಂದ ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂತಹ ಕೆಲಸವನ್ನು ಮಾಡುತ್ತಾ ಇರಲಿಲ್ಲವೇನೋ ಎಲ್ಲ ನ್ಯೂಸ್ ಚಾನೆಲ್ ಅವರು ಇಂಟರ್ ವ್ಯೂ ಗೆ ಕರೆದಿದ್ದರು ಕನಿಷ್ಠ ನೂರು ಜನ ಯೂಟ್ಯೂಬರ್ಸ್ ಕೊಲ್ಯಾಬರೇಶನ್ ಗೆ ಕರೆದಿದ್ದರು ಎಲ್ಲವನ್ನು ಬಿಟ್ಟು ಲೋಹಿತ್ ಕನ್ನಡ ಟ್ರಾವೆಲರ್ ಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ.

ಆದರೆ ಅವರು ಈ ದಿನ ನನಗೆ ಕೊಟ್ಟಂತಹ ಬಹುಮಾನ ಇದು ಧನ್ಯವಾದ ಹೇಳುತ್ತಾ ಲೋಹಿತ್ ಕನ್ನಡ ಟ್ರಾವೆಲರ್ ಧನ್ಯವಾದ ನಿಮಗೆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಇನ್ನು ಮುಂದೆ ಯಾದರೂ ಸಹಾಯ ಮಾಡಿದವರಿಗೆ ಯಾವತ್ತಿಗೂ ನಂಬಿಕೆ ದ್ರೋಹವನ್ನು ಮಾಡಬೇಡಿ ಎನ್ನುವಂತಹ ವಿಷಯವನ್ನು ಬರೆದಿದ್ದಾರೆ.

Leave a Reply

Your email address will not be published. Required fields are marked *