ಪ್ರತಿದಿನ ರಾತ್ರಿ ತಡವಾಗಿ ಬರುತ್ತಿದ್ದ ಗಂಡನನ್ನು ಹಿಂಬಾಲಿಸಿಕೊಂಡು ಹೋದ ಹೆಂಡತಿ ಗಂಡನ ಸತ್ಯ ಗೊತ್ತಾಗಿ ಹೆಂಡತಿ ಮಾಡಿದ್ದೇನು ? - Karnataka's Best News Portal

ಪ್ರತಿದಿನ ತಡವಾಗಿ ಬರುತ್ತಿದ್ದ ಗಂಡನನ್ನು ಹಿಂಬಾಲಿಸಿದ ಹೆಂಡತಿ ಸತ್ಯ ತಿಳಿದು ಆಶ್ಚರ್ಯ ಪಟ್ಟಳು!!ಸ್ನೇಹಿತರೆ ಪ್ರತಿ ದಿವಸ ಗಂಡನು ತಡವಾಗಿ ಬರುವುದನ್ನು ಕಂಡು ಹೆಂಡತಿಯು ಗಂಡನನ್ನು ಹಿಂಬಾಲಿಸುತ್ತಾಳೆ. ಅಲ್ಲಿ ನಡೆದಂತಹ ಘಟನೆ ಎಲ್ಲರಿಗೂ ಆಶ್ಚರ್ಯವನ್ನು ತರುತ್ತದೆ ಅಂತಹ ಘಟನೆ ಬಗ್ಗೆ ಇಂದು ತಿಳಿದುಕೊಳ್ಳೋಣ. ಮುಂಬೈನ ದೊಡ್ಡ ನಗರದಲ್ಲಿ ಸುಷ್ಮಾ ಹಾಗೂ ರಾಜೇಶ್ ಶುಕ್ಲ ಎಂಬ ಇಬ್ಬರು ಪ್ರೇಮಿಗಳು ಇರುತ್ತಾರೆ. ಇಬ್ಬರು ಕೂಡ ಗಾರ್ಮೆಂಟ್ಸ್ ನಲ್ಲಿ ಕೆಲಸವನ್ನು ಮಾಡುತ್ತಾ ಇರುತ್ತಾರೆ.

ಅಲ್ಲಿ ಇವರಿಬ್ಬರ ಮಧ್ಯೆ ಪ್ರೀತಿಯು ಮೂಡುತ್ತದೆ ಇಬ್ಬರು ಕೂಡ ಅನ್ಯ ಜಾತಿ ಆದ ಕಾರಣ ಇಬ್ಬರೂ ಮನೆಯಲ್ಲಿ ಕೂಡ ಇದಕ್ಕೆ ವಿರೋಧವನ್ನು ಮಾಡುತ್ತಾರೆ. ಮನೆಯವರ ವಿರೋಧದ ನಡುವೆ ಕೂಡ ಈ ಜೋಡಿಯು ಮದುವೆಯಾಗಿ ಹೊಸ ಜೀವನವನ್ನು ಶುರು ಮಾಡುತ್ತದೆ ಕೆಲವು ದಿನಗಳ ನಂತರ ವರ್ಷದ ಒಳಗೆ ಸುಷ್ಮಾಳು ಕೂಡ ಗರ್ಭವತಿಯಾಗುತ್ತಾಳೆ. ಈ ವಿಷಯವನ್ನು ಕೇಳಿ ಸುಷ್ಮಾ ಮನೆಯವರು ಒಪ್ಪಿಕೊಂಡು ಬಾಣಂತಿಯ ಶಾಸ್ತ್ರಕ್ಕಾಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ.

ಇನ್ನು ಈ ಜೋಡಿಗೆ ಒಂದು ಹೆಣ್ಣು ಮಗು ಕೂಡ ಜನಿಸುತ್ತದೆ. ಈ ವಿಷಯದಿಂದ ಖುಷಿಯಾಗಿದ್ದ ರಾಜೇಶ್ ಕೂಡ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಭಿಷೇಕ ಮಾಡಿಸಿ ಖುಷಿಯಿಂದ ಇರುತ್ತಾನೆ. ಬಾಣಂತನದ ದಿವಸಗಳನ್ನು ಮುಗಿಸಿಕೊಂಡು ತುಂಬಾ ದಿನಗಳ ನಂತರ ಸುಷ್ಮಾಳು ತನ್ನ ಗಂಡನ ಮನೆಗೆ ಮತ್ತೆ ಹಿಂದಿರುತ್ತಾಳೆ. ರಾಜೇಶ್ ಗಾರ್ಮೆಂಟ್ಸ್ ತುಂಬಾ ಹತ್ತಿರ ಇರುವ ಕಾರಣ 6:30ಗೆ ತನ್ನ ಕೆಲಸ ಮುಗಿದ ನಂತರ 7:30 ಒಳಗೆ ಮನೆಯನ್ನು ಸೇರುತ್ತಿದ್ದನು.

ಆ ಒಂದು ದಿವಸ ರಾಜೇಶ್ ಏಳುವರೆ ಆದರೂ ಕೂಡ ಮನೆಯನ್ನು ತಲುಪಿರುವುದಿಲ್ಲ ಬಹಳ ತಡವಾಗಿ ಮನೆಗೆ ತುಂಬಾ ಸುಸ್ತಾಗಿ ಬರುತ್ತಾನೆ ಇದು ದಿನನಿತ್ಯವು ಮತ್ತೆ ಮತ್ತೆ ನಡೆಯುತ್ತಾ ಇರುತ್ತದೆ. ಇದನ್ನು ಕಂಡ ಸುಷ್ಮಳಿಗೆ ಸ್ವಲ್ಪ ಭಯವಾಗುತ್ತದೆ. ತನ್ನ ಗಂಡ ಯಾವುದಾದರು ತಪ್ಪು ದಾರಿಗೆ ಹೋಗಿರಬಹುದು ಎಂದು. ಹೀಗೆ ಒಂದು ದಿವಸ ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ಗಂಡನನ್ನು ಸುಷ್ಮಾ ಹಿಂಬಾಲಿಸುತ್ತಾಳೆ.

ಗಂಡನು ತನ್ನ ಗಾರ್ಮೆಂಟ್ಸ್ನ ಮುಗಿಸಿಕೊಂಡು ಒಂದು ಬಸ್ ಅನ್ನು ಹತ್ತಿಕೊಳ್ಳುತ್ತಾನೆ ನಂತರ ಬಸ್ಸನ್ನು ಇಳಿದ ನಂತರ ಯಾವುದೋ ಒಂದು ಸಣ್ಣ ಜಾಗಕ್ಕೆ ಹೋಗಿ ಆ ಜಾಗದಲ್ಲಿ ಇರುವಂತಹ ಬಾರಲ್ಲಿ ಕೆಲಸ ಮಾಡುತ್ತಾ ಇರುತ್ತಾನೆ ಇದನ್ನು ಕಂಡ ಸುಷ್ಮಾಳಿಗೆ ಬಹಳ ಆಶ್ಚರ್ಯವಾಗುತ್ತದೆ ಏನೆಂದರೆ ಎರಡು ಕಡೆ ದುಡಿದರು ಮನೆಗೆ ಹಣವನ್ನು ನೀಡುತ್ತಿಲ್ಲ ಹಣವನ್ನು ಏನು ಮಾಡುತ್ತಿರಬಹುದು ಎಂಬ ಅನುಮಾನಕ್ಕೆ ಸುಷ್ಮಾಳು ಒಳಗಾಗುತ್ತಾಳೆ. ಇದರ ಬಗ್ಗೆ ವಿಚಾರಿಸಿದ ಸುಷ್ಮಾ ರಾಜೇಶ್ ಅವರ ಬಳಿ ರಾಜೇಶ್ ಬೇಗನೆ ಉತ್ತರಿಸುವುದಿಲ್ಲ ಮಗುವಿನ ಮೇಲೆ ಆಣೆ ಮಾಡಿದ ಕಾರಣ ಸತ್ಯವನ್ನು ಹೇಳುತ್ತಾನೆ.

ಅವನಿಗೆ ಕಾರ್ಡ್ಯೂವಾಸ್ಕ್ಯುಲರ್ ಎಂಬ ಕಾಯಿಲೆ ಇದ್ದು ಅದು ವಾಸಿಯಾಗದೆ ಇರುವ ಕಾರಣ ತುಂಬಾ ದಿನಗಳವರೆಗೂ ರಾಜೇಶ್ ಬದುಕುವುದಿಲ್ಲ ಎಂದು ತಿಳಿದು ಅದಕ್ಕಾಗಿ ಹೆಂಡತಿ ಮಗುವಿಗಾಗಿ ಮನೆಯನ್ನು ಕರುಣಿಸುವ ವ್ಯವಸ್ಥೆಯನ್ನು ಮಾಡಲು ಹಾಗೂ ಮುಂದಿನ ಮಗಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿ ಇಡಲು ರಾಜೇಶ್ ಎರಡು ಕಡೆ ಕೆಲಸವನ್ನು ಮಾಡುತ್ತಿರುತ್ತಾನೆ. ನಂತರ 3-4 ವರ್ಷಗಳ ನಂತರ ರಾಜೇಶ್ ನಿಧನವಾಗುತ್ತಾನೆ ಆದರೂ ತನ್ನ ಹೆಂಡತಿಗಾಗಿ ಒಂದು ಮನೆಯನ್ನು ಖರೀದಿಸುತ್ತಾರೆ.

Leave a Reply

Your email address will not be published. Required fields are marked *