ಮೇಷ ರಾಶಿ ವರ್ಷ ಭವಿಷ್ಯ 2023 ಶನಿ‌ ಮಕರ ರಾಶಿಯಿಂದ ಕುಂಭ ರಾಶಿಗೆ ಬಂದಿದ್ದಾರೆ ಎಚ್ಚರಿಕೆ ಗುರು ಇಂದ ಬಹಳ ಲಾಭ ಹಣದ ಸಮಸ್ಯೆ ಇಲ್ಲ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿಯವರ 2023 ರ ವಾರ್ಷಿಕ ಭವಿಷ್ಯ!!
2023 ಜನವರಿ ಒಂದರಿಂದ ಡಿಸೆಂಬರ್ 31 2023ರ ವರೆಗೂ ಮೇಷ ರಾಶಿಯವರ ಭವಿಷ್ಯವನ್ನು ನೋಡೋಣ. ಜನವರಿ 17ರಂದು ಶನಿ ಗ್ರಹವು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಹೋಗುತ್ತಿದ್ದಾನೆ. ಹೌದು ಒಂದು ರಾಶಿಯಲ್ಲಿ ಶನಿಮಹಾತ್ಮನು ಎರಡುವರೆ ವರ್ಷದವರೆಗೂ ಇರುತಾನಂತೆ. ಸದ್ಯ ಇಲ್ಲಿಯವರೆಗೂ ಶನಿ ಗ್ರಹವು ಮೇಷ ರಾಶಿಯವರಿಗೆ ದಶಮ ಸ್ಥಾನದಲ್ಲಿ ಇದ್ದ ಕಾರಣ ಎಲ್ಲವೂ ಒಳಿತು ಆಗಿದೆ.

ಸದ್ಯ ಜನವರಿ 17ರ ನಂತರ ಶನಿ ಮಹಾತ್ಮನು ಕುಂಭ ರಾಶಿಯನ್ನು ಸೇರಲು ಸುಮಾರು ಫೆಬ್ರವರಿ ಹತ್ತರವರೆಗೂ ಸಮಯವನ್ನು ತೆಗೆದುಕೊಳ್ಳಬಹುದು ಈ ಸಮಯದ ನಂತರ ಮೇಷ ರಾಶಿಯವರಿಗೆ ಶನಿ ಗ್ರಹವು 11ನೇ ಸ್ಥಾನದಲ್ಲಿ ಇರುವ ಕಾರಣ ಮುಂದೆ ಯಾವ ಪರಿಸ್ಥಿತಿಗಳು ಬರಲಿವೆ ಎಂದು ನೋಡಬೇಕಾಗಿದೆ.

11ನೇ ಸ್ಥಾನವು ಬಾದಕ ಸ್ಥಾನವಾದ ಕಾರಣ ಶನಿ ಮಹಾತ್ಮನು ಬಾದಕnಗಿ ಮೇಷ ರಾಶಿಯವರಿಗೆ ಕಾಣಿಸಿಕೊಳ್ಳುತ್ತಾನ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಹೌದು 11ನೇ ರಾಶಿ ಅಧಿಪತಿ 11ನೇ ರಾಶಿಯಲ್ಲಿ ಇರುವ ಕಾರಣ ಮೇಷ ರಾಶಿಯವರಿಗೆ ಶುಭವನ್ನು ತರಲಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ರಕ್ಷಣಾ ಸಂಸ್ಥೆಯಲ್ಲಿ ಇರುವವರಿಗೆ ಶುಭಸುದ್ದಿ ಕೇಳಲಿದ್ದಾರೆ.

ಇನ್ನು ಮೇಷ ರಾಶಿ ಇಲ್ಲಿರುವ ಸಣ್ಣ ವ್ಯಾಪಾರಸ್ಥರಿಗೂ ಹಾಗೂ ದ್ರವ್ಯ ಪರವಾಗಿ ಉದ್ಯಮ ಮಾಡುತ್ತಿರುವವರಿಗು ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿರುವವರಿಗು 2023 ಬಹಳ ಆದಾಯಕವಾಗಿದೆ. ಇನ್ನು ಶನಿಯು ಬಾದಕಾಪದಿ ಆದ ಕಾರಣ ಮೇಷ ರಾಶಿಯವರು ಬಹಳ ಎಚ್ಚರದಿಂದ ಹೆಜ್ಜೆಯನ್ನು ಇಡಬೇಕಾಗಿದೆ ಅಲ್ಲದೆ ಪ್ರತಿ ಶನಿವಾರ ಶನಿ ಮಹಾತ್ಮನ ದೇವಾಲಯಕ್ಕೆ ಹೋಗಿ ಬರುವುದು ಒಳ್ಳೆಯದು.

ಇನ್ನು ಗುರುಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಏಪ್ರಿಲ್ ತಿಂಗಳಲ್ಲಿ ಬರಲಿದ್ದಾನೆ. ಆದರೆ ಗುರುವಿನ ಜೊತೆ ರಾಹು ಇರುವ ಕಾರಣ ಅಕ್ಟೋಬರ್ ತಿಂಗಳವರೆಗೂ ಸ್ವಲ್ಪ ಕೆಡುಕುಗಳು ಉಂಟಾಗಬಹುದು ಆದರೆ ಗುರು ಗ್ರಹವು ಕುಜ ಗ್ರಹಕ್ಕೆ ಮಿತ್ರಗ್ರಹ ಆದ ಕಾರಣ ವೇಷಯಾ ರಾಶಿಯವರಿಗೆ ಒಳ್ಳೆಯದೇ ಆಗಲಿದೆ ಆದರೆ ಅಕ್ಟೋಬರ್ ತಿಂಗಳನ್ನು ಕಳೆದ ನಂತರ ರಾಹು ಮೀನ ರಾಶಿಗೆ ಹೋಗಲಿದ್ದಾನೆ. ಆಗ ಗುರುಗ್ರಹವು ಸಂಪೂರ್ಣ ಒಳಿತನ್ನು ಮೇಷ ರಾಶಿಯವರಿಗೆ ತರಲಿದ್ದಾನೆ.

ಗುರುವು ಯಾವುದೇ ರಾಶಿಯಲ್ಲಿದ್ದರೂ ಯಾವುದೇ ತರಹದ ಕೆಡುಕುಗಳನ್ನು ಕೊಡುವುದಿಲ್ಲ ಬದಲಿಗೆ ಮನೆಯಲ್ಲಿ ಶುಭ ಆರಂಭಗಳು ಸಮಾರಂಭಗಳು, ಸಂತಾನ ಅಪೇಕ್ಷೆ ಇರುವಂತಹ ರೀ ಸಂತಾನ ವೈವಾಹಿಕ ಜೀವನಕ್ಕೇ ಕಾಲಿಡುವವರಿಗೆ ಶುಭ ಸುದ್ದಿಯನ್ನು ತರಲಿದ್ದಾನೆ. ಯಾವುದೇ ತರಹದ ಶಾಂತಿ ಮಾಡಿಸದೆ ಅಕ್ಟೋಬರ್ ತಿಂಗಳ ನಂತರ ಮೇಷ ರಾಶಿಯವರು ನೆಮ್ಮದಿಯಿಂದ ಅಂದುಕೊಂಡ ಹಾಗೆ ಜೀವನ್ನು ಸಾಗಿಸಬಹುದಾಗಿದೆ. ಆದರೆ ಶನಿದೇವನನ್ನು ಪ್ರಾರ್ಥಿಸುವುದನ್ನು ಬಿಡಬಾರದು ಜೊತೆಗೆ ಅಕ್ಟೋಬರ್ ವರೆಗೂ ಸ್ವಲ್ಪ ಎಚ್ಚರದಿಂದ ಇರಬೇಕು.

Leave a Reply

Your email address will not be published. Required fields are marked *