ಕನ್ಯಾ ರಾಶಿ 2023 ಶನಿ ಬುಧ ಏನು ಮ್ಯಾಜಿಕ್ ಮಾಡ್ತಾರೆ ಗೊತ್ತಾ ? 2023 ರ ಕನ್ಯಾ ರಾಶಿಯ ಜನವರಿ ತಿಂಗಳ ಭವಿಷ್ಯ ನೋಡಿ - Karnataka's Best News Portal

ಕನ್ಯಾ ರಾಶಿಯವರ 2023ರ ಜನವರಿ ತಿಂಗಳ ಮಾಸ ಭವಿಷ್ಯ… ಕನ್ಯಾ ರಾಶಿಯ ಅಧಿಪತಿ ಆದ ಬುಧನು ಚತುರ್ಥದಲ್ಲಿ ಅಂದರೆ ಧನಸ್ಸು ರಾಶಿಯಲ್ಲಿ ಇರುವುದರಿಂದ ಆತ ಅಲ್ಲಿಂದ ನಿಮಗೆ ಅನಿಷ್ಟ ಫಲಗಳನ್ನು ನೀಡುತ್ತಿದ್ದಾನೆ. ಅಲ್ಲಿಂದಲೇ ನಿಮ್ಮ ದಶಮ ಸ್ಥಾನವನ್ನು ಕೂಡ ನೋಡುತ್ತಿದ್ದಾನೆ. ದಶಮ ಸ್ಥಾನ ಎಂದರೆ ಕೆಲಸದ ಸ್ಥಾನ, ದಶಮ ಸ್ಥಾನದಲ್ಲಿರುವ ಬುಧನು ಶುಭಫಲ ನೀಡುತ್ತಿದ್ದು ಕೆಲಸ ಸ್ಥಳದಲ್ಲಿ ಉನ್ನತ ಸ್ಥಾನಕ್ಕೆ ಏರಿಸುತ್ತಾರೆ.

ನಿಮ್ಮ ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ, ಉದ್ಯೋಗದಲ್ಲಿ ಪ್ರಮೋಷನ್ ಸಿಗುವುದು ಅಭಿವೃದ್ಧಿ ಆಗುವುದು ಮತ್ತು ಒಂದು ಕೆಲಸ ಮಾತ್ರವಲ್ಲದೆ ಹೆಚ್ಚು ಹಣ ತರುವಂತಹ ಎರಡು ಮೂರು ಕೆಲಸಗಳನ್ನು ನೀವು ಮಾಡಲು ಸಾಧ್ಯವಾಗುತ್ತದೆ. ಫೈನಾನ್ಸ್ ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಇತ್ಯಾದಿಗಳಿಂದ ಕೂಡ ಹಣದ ಲಾಭ ಕಂಡು ಬರುತ್ತದೆ. ಒಟ್ಟಿನಲ್ಲಿ ಹಣಕಾಸಿಗಾಗಿ ಹಲವು ದಾರಿಗಳನ್ನು ದಶಮ ಸ್ಥಾನದಲ್ಲಿ ಇರುವ ಬುಧನು ಗುರುವಿನ ಸಹಾಯದೊಂದಿಗೆ ತೋರಿಸುತ್ತಾನೆ.

ಬುಧ ಮತ್ತು ಗುರುವಿನ ಫಲಗಳು ಜನವರಿ ತಿಂಗಳಲ್ಲಿ ನಿಮಗೆ ಅನುಕೂಲಕರವಾಗಿರುತ್ತದೆ. ಸುಖ ಸ್ಥಾನದಲ್ಲಿ ಇರುವ ಬುಧನಿಂದ ಸುಖವು ಸಹ ಅಭಿವೃದ್ಧಿ ಆಗುತ್ತಿದೆ ವಾಹನಗಳಿಂದ, ಉದ್ಯೋಗದಿಂದ ಹಾಗೂ ಕುಟುಂಬದಿಂದ ಸುಖ ಸಿಗುತ್ತದೆ. ದ್ವಿತಿಯಾಧಿಪತಿ ಅಂದರೆ ಹಣ ಮತ್ತು ವಿದ್ಯೆ ಅಧಿಪತಿ ಆದ ಶುಕ್ರನು ಪಂಚಮ ಸ್ಥಾನದಲ್ಲಿ ಇರುತ್ತಾನೆ. ಶುಕ್ರನಿಂದ ಧನ ಲಾಭ ಪುತ್ರ ಲಾಭ ಯೋಗ ಇದೆ.

ನಿಮ್ಮ ಮಕ್ಕಳು ನೀವು ಹೇಳಿದ ಮಾತು ಕೇಳುವುದು ಅಥವಾ ಅವರು ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದಿ ಶುಭ ಸುದ್ದಿ ತರುವುದು ಇತ್ಯಾದಿಗಳು ನಡೆಯುತ್ತದೆ. ಡಿಸೈನಿಂಗ್ ಮಾಡುವವರು, ಬಟ್ಟೆಗಳ ವ್ಯಾಪಾರ ಮಾಡುವವರು ಜನವರಿ ತಿಂಗಳಿನಲ್ಲಿ ಒಳ್ಳೆಯ ಲಾಭಗಳಿಸುತ್ತಾರೆ. ಪಂಚಮದಲ್ಲಿ ಇರುವ ಬುಧ ಹಾಗೂ ಭಾಗ್ಯ ಅಧಿಪತಿ ಆಗಿರುವ ಶುಕ್ರ ಇಬ್ಬರು ಸೇರಿ ಉದ್ಯಮದಲ್ಲಿ ಹಣಕಾಸಿನ ವಿಚಾರದಲ್ಲಿ ಒಳಿತನ್ನು ಮಾಡುತ್ತಾರೆ

ಶನಿಯು ಸಹ ಈಗ ಮನೆ ಬದಲಾಯಿಸುತ್ತಿದ್ದಾರೆ. ಮೊದಲು ಶನಿ ಕನ್ಯಾ ರಾಶಿಯವರಿಗೆ ಪಂಚಮ ಸ್ಥಾನದಲ್ಲಿದ್ದ, ಅದರ ಪ್ರಭಾವದಿಂದ ಮನೆಯಲ್ಲಿ ಜಗಳಗಳು, ಪುತ್ರ ದೂರ ಉಳಿಯುವುದು ಮತ್ತು ಇನ್ನೂ ಕೆಟ್ಟ ಫಲಗಳನ್ನು ಅನುಭವಿಸಿದ್ದಾರೆ. ಆ ಎರಡುವರೆ ವರ್ಷ ಈ ಎಲ್ಲ ಕಷ್ಟಗಳನ್ನು ನೀವು ಒಬ್ಬರೇ ಅನುಭವಿಸಿದ್ದೀರಿ. ಜನವರಿ ತಿಂಗಳ 17 ರಿಂದ ಶನಿ ತನ್ನ ಸ್ಥಾನ ಬಿಟ್ಟು ಪಂಚಮಿಯಿಂದ ಷಷ್ಟಿಗೆ ಹೋಗುತ್ತಿದ್ದಾರೆ.

ಶನಿಯ ನಿಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾರೆ ಅಲ್ಲದೆ ಸಣ್ಣಪುಟ್ಟ ಅನೇಕ ಕಾಯಿಲೆಗಳಿಂದ ಕೂಡ ರಕ್ಷಣೆ ನೀಡುತ್ತಾರೆ. ಷಷ್ಠಿ ಅಲ್ಲಿರುವ ಶನಿಯು ರೋಗಕ್ಕೆ ಹಾನಿ ಉಂಟು ಮಾಡುತ್ತಾರೆ. ಪಂಚಮದಲ್ಲಿ ಇದ್ದಾಗ ನೀವು ಅನುಭವಿಸದೆ ಎಲ್ಲಾ ಯಾತನೆಗೂ ಪರಿಹಾರ ಸಿಗುವ ದಿನಗಳಾಗಿದ್ದು ಶನಿ ಷಷ್ಠಿಯಲ್ಲಿ ಇರುವಾಗ ನೀವು ಎಲ್ಲ ರೀತಿಯಲ್ಲಿ ಏಳಿಗೆ ಆಗುತ್ತೀರಿ. ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *