ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ ಉಳಿತಾಯದ ಟಿಪ್ಸ್ ಎಲ್ಲಾರೂ ಆಶ್ಚರ್ಯ ಪಟ್ಟ ಟಿಪ್ಸ್ ನಿಮ್ಮ‌ ಮನೆಯ ದೊಡ್ಡ ಕೆಲಸಗಳಿಗೆ ಬರುತ್ತೆ. - Karnataka's Best News Portal

ಅಪ್ಪಿ ತಪ್ಪಿಯು ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯಲೇ ಬೇಡಿ ಇದರ ಉಪಯೋಗ ಬಹಳ ಇದೆ||ಮೇಲೆ ಹೇಳಿದಂತಹ ವಿಷಯವನ್ನು ನೀವು ಗಮನಿಸಿದರೆ ಏನಿದು ಆಶ್ಚರ್ಯ ಎಂದು ತಿಳಿದು ಕೊಳ್ಳಬಹುದು ಹೌದು ಪ್ರತಿನಿತ್ಯ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಈರುಳ್ಳಿಯನ್ನು ಬಳಸುತ್ತಲೇ ಇರುತ್ತೇವೆ ಹಾಗೂ ಪ್ರತಿಯೊಂದು ಪದಾರ್ಥಗಳಿಗೂ ಕೂಡ ಈರುಳ್ಳಿ ಅಷ್ಟೇ ಪ್ರಮುಖವಾಗಿರುತ್ತದೆ ಏಕೆಂದರೆ ಅದರಲ್ಲಿ ಇರುವಂತಹ ರುಚಿ ಅಡುಗೆಗಳಿಗೆ ಹೆಚ್ಚಿನ ರುಚಿಯನ್ನು ಕೊಡುತ್ತದೆ ಎಂಬ ಕಾರಣದಿಂದಲೂ ಕೂಡ ಅದನ್ನು ಬಳಸುತ್ತಿರುತ್ತೇವೆ.

ಆದ್ದರಿಂದ ಈರುಳ್ಳಿ ಎನ್ನುವುದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸಿಗುವಂತಹ ಪದಾರ್ಥವಾಗಿದ್ದು ಈರುಳ್ಳಿ ಸಿಪ್ಪೆಯನ್ನು ಕೂಡ ಹೇಗೆ ಉಪಯೋಗಿಸಬಹುದು ಹಾಗೂ ಅದರಿಂದ ಯಾವ ಉಪಯೋಗವನ್ನು ಪಡೆದುಕೊಳ್ಳಬಹುದು ಎಂಬ ವಿಷಯ ಯಾರಿಗೂ ಕೂಡ ತಿಳಿದಿಲ್ಲ ಆದರೆ ಈ ದಿನ ನಾವು ಈರುಳ್ಳಿ ಸಿಪ್ಪೆಯನ್ನು ಬಳಸಿ ಅದರಿಂದ ಯಾವುದೆಲ್ಲ ಉಪಯೋಗವನ್ನು ಪಡೆದುಕೊಳ್ಳಬಹುದು

ಎಂಬುದನ್ನು ಈ ದಿನ ತಿಳಿಯೋಣ ಹೌದು ಈರುಳ್ಳಿ ಸಿಪ್ಪೆಯನ್ನು ನಾವು ಅಡುಗೆಗೆ ಬಳಸದೆ ಹೋದರು ಅದನ್ನು ಪ್ರತಿನಿತ್ಯ ಹೇಗೆ ಬಳಸುವುದು ಎಂಬ ವಿಷಯವನ್ನು ಈ ದಿನ ತಿಳಿದುಕೊಳ್ಳೋಣ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಈರುಳ್ಳಿ ಸಿಪ್ಪೆಯಲ್ಲಿರುವಂತಹ ಅಂಶ ನೀರಿನಲ್ಲಿ ಚೆನ್ನಾಗಿ ಬಿಡುವ ತನಕ ಕುದಿಸಿಕೊಂಡು ಆ ನೀರನ್ನು ಶೋಧಿಸಿಕೊಳ್ಳಬೇಕು.

ನಂತರ ಆ ನೀರಿಗೆ ಒಂದು ಪಚ್ಚ ಕರ್ಪೂರ ಹಾಗೂ ಅರ್ಧ ಚಮಚ ತಿಂಡಿ ಸೋಡಾ ಅಂದರೆ ಅಡುಗೆ ಸೋಡಾ ಇವೆರಡನ್ನು ಆ ನೀರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಈ ನೀರನ್ನು ನಿಮ್ಮ ಅಡುಗೆ ಮನೆಯಲ್ಲಿ ಪ್ರತಿಯೊಂದು ಜಾಗದಲ್ಲಿಯೂ ಕೂಡ ಜಿರಳೆಗಳು ಇರುತ್ತವೆ ಅಂತ ಸ್ಥಳಗಳಿಗೆ ಈ ನೀರನ್ನು ಹಾಕಿ ಒರೆಸಿಕೊಳ್ಳುವುದರಿಂದ ಜೊತೆಗೆ ಹತ್ತಿಯಲ್ಲಿ ಈ ನೀರನ್ನು ಹಚ್ಚಿ ಜಿರಳೆ ಓಡಾಡುವಂತಹ ಸ್ಥಳಗಳಿಗೆ ಇಡುವುದರಿಂದ.

ಜಿರಳೆಗಳು ಈರುಳ್ಳಿಯ ವಾಸನೆಗೆ ಎಲ್ಲಿಯೂ ಕೂಡ ಬರುವುದಿಲ್ಲ ಜೊತೆಗೆ ನಿಮ್ಮ ಮನೆಯಲ್ಲಿ ಯಾವ ಯಾವ ಜಾಗದಲ್ಲಿ ಜಿರಳೆಗಳು ಇರುತ್ತವೆ ಆ ಜಾಗಕ್ಕೆಲ್ಲ ಈ ನೀರನ್ನು ಸ್ಪ್ರೇ ಮಾಡುವುದರಿಂದ ಜಿರಳೆಗಳಿಂದ ಮುಕ್ತಿಯನ್ನು ಪಡೆಯಬಹುದು ಜೊತೆಗೆ ಯಾರಿಗೆ ತಲೆಯಲ್ಲಿ ಹೇನು ಅಲರ್ಜಿ ಇರುತ್ತದೆಯೋ ಅಂತವರು ಇದನ್ನು ತಲೆಗೆ ಹಚ್ಚಿ ನಂತರ ತಲೆ ತೊಳೆಯುವುದ ರಿಂದ ಹೇನಿನ ಸಮಸ್ಯೆಯೂ ಕೂಡ ಗುಣವಾಗುತ್ತದೆ.

ಇದರ ಜೊತೆ ಮೊದಲೇ ಹೇಳಿದಂತೆ ನೀರಿನಲ್ಲಿ ಕುದಿಸಿ ಸ್ವೀಕರಿಸಿಟ್ಟುಕೊಂಡಂತಹ ಈರುಳ್ಳಿ ಸಿಪ್ಪೆಯನ್ನು ನಿಮ್ಮ ಗಿಡಗಳಿಗೆ ಹಾಕುವುದರಿಂದ ಗಿಡಗಳಿಗೆ ಒಳ್ಳೆಯ ಗೊಬ್ಬರವಾಗುತ್ತದೆ ಜೊತೆಗೆ ಇದರಿಂದ ಗಿಡಗಳಿಗೆ ಮಾರು ಬರುವುದಾಗಲಿ ಯಾವುದೇ ಹುಳಗಳು ಗಿಡವನ್ನು ಹಾಳು ಮಾಡುವುದಿಲ್ಲ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *