ಪಂಡರಪುರ ಕ್ಷೇತ್ರಕ್ಕೆ ಹುಟ್ಟಿದ ರೋಚಕ ಕಥೆ ಇಲ್ಲಿದೆ ನೋಡಿ..ಪಾಂಡುರಂಗನ ಬಗ್ಗೆ ನೀವು ಅರಿಯದ ವಿಷಯ ಇದು... - Karnataka's Best News Portal

ಫಂಢರಾಪುರ ಕ್ಷೇತ್ರ ಹುಟ್ಟಿದ ರೋಚಕ ಕಥೆ ಇಲ್ಲಿದೆ||
ಒಂದು ಕಾಲಕ್ಕೆ ಕರ್ನಾಟಕದ ಭಾಗವಾಗಿದ್ದ ಮತ್ತು ಈಗಲೂ ಕನ್ನಡದವರೇ ಜಾಸ್ತಿ ಇರುವ ಪ್ರಸ್ತುತ ಮಹಾರಾಷ್ಟ್ರದ ಭಾಗವಾಗಿರುವ ಸೊಲ್ಲಾಪುರ ಜಿಲ್ಲೆಯ ಭೀಮ ನದಿಯ ತಟದಲ್ಲಿರುವ ಹಿಂದುಗಳ ಪವಿತ್ರ ಶ್ರೀ ಕ್ಷೇತ್ರವೇ ಪಂಡರಾಪುರ ಅಲ್ಲಿ ಪ್ರಭು ಪಾಂಡುರಂಗ ವಿಠಲ ಇಟ್ಟಿಗೆಯ ಮೇಲೆ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ ವಿಠ್ಠ ಎಂದರೆ ಇಟ್ಟಿಗೆ ಎಂದರ್ಥ.

ಭಗವಾನ್ ಶ್ರೀ ಕೃಷ್ಣ ಇಲ್ಲಿ ಇಟ್ಟಿಗೆಯ ಮೇಲೆ ಆಯತಾಕಾರದ ಕಲ್ಲಿನ ಮೇಲೆ ಒಂದೇ ಕಾಲಿನ ಮೇಲೆ ನಿಂತಿರುವ ಕಾರಣ ಶ್ರೀ ಕೃಷ್ಣನನ್ನು ಇಲ್ಲಿ ವಿಠಲ ಎಂದು ಕರೆಯುತ್ತಾರೆ ಇದೇ ರೀತಿ ದ್ವಾರಕ ದಿಂದ ಅವನು ಪಂಡರಾಪುರಕ್ಕೆ ಬಂದಾಗ ಕಪ್ಪಾಗಿದ್ದರೂ ಅವನ ಮುಖದ ಮೇಲೆ ಬಿಳಿ ಮರಳು ಇದ್ದುದರಿಂದ ಪಾಂಡುರಂಗ ಎಂದು ಕರೆಯುತ್ತಾರೆ ಅಂದರೆ ಮರಾಠಿಯಲ್ಲಿ ಪಾಂಡ್ರಾ ಎಂದರೆ ಬಿಳಿ ರಂಗ ಎಂದರೆ ಶ್ರೀ ಕೃಷ್ಣ ಎಂದರ್ಥ.

ಇದೇ ಕಾರಣದಿಂದ ವಿಠಲನನ್ನು ಇಲ್ಲಿ ಪಾಂಡುರಂಗ ಎಂದು ಕೂಡ ಕರೆಯಲಾಗುತ್ತದೆ ಇಲ್ಲಿ ಭಗವಾನ್ ಶ್ರೀ ಕೃಷ್ಣ ಸೊಂಟದ ಮೇಲೆ ಕೈ ಇಟ್ಟುಕೊಂಡು ಇಟ್ಟಿಗೆಯ ಮೇಲೆ ನಿಂತುಕೊಂಡಿರುವುದಕ್ಕೂ ಕೂಡ ಒಂದು ರೋಚಕ ಕಥೆ ಇದೆ ಹಿಂದೆ ಪುಂಡಲಿಕ ಎಂಬ ಒಬ್ಬ ಭಕ್ತ ತನ್ನವರೊಂದಿಗೆ ಕಾಶಿಗೆ ಹೋಗುವ ಮಾರ್ಗದಲ್ಲಿ.

ಕುಕ್ಕುಟ ಎಂಬ ಋಷಿಯ ಆಶ್ರಮ ತಲುಪಿ ಅವರ ಬಳಿ ಕಾಶಿಗೆ ಹೋಗುವ ದಾರಿಯನ್ನು ಕೇಳುತ್ತಾನೆ ತಾನು ಕಾಶಿಗೆ ಎಂದು ಹೋಗದ ಕಾರಣ ತನಗೆ ಕಾಶಿಗೆ ಹೋಗುವ ದಾರಿ ಗೊತ್ತಿಲ್ಲ ಎಂದು ತನಗೆ ಪ್ರಾಮಾಣಿಕವಾಗಿ ಕುಕ್ಕುಟ ಋಷಿಗಳು ಹೇಳಿದಾಗ ಪುಂಡಲೀಕನಿಗೆ ಸಿಟ್ಟು ಹಾಗೂ ದರ್ಪದಿಂದ ನಿಮ್ಮಂಥ ಋಷಿಗಳು ಕಾಶಿಗೆ ಹೋಗಿ ಭೇಟಿ ನೀಡಬೇಕಾಗಿತ್ತು ಯಾಕೆ ಹೋಗಿಲ್ಲ ಎಂದು ಹಂಗಿಸುತ್ತಾನೆ.

ಕುಕ್ಕುಟ ಮಹರ್ಷಿಗಳು ಪುಂಡಲೀಕನ ಮಾತಿಗೆ ಯಾವುದೇ ಉತ್ತರವನ್ನು ಹೇಳದೆ ಸುಮ್ಮನಿರುತ್ತಾರೆ ಆಶ್ರಮದಲ್ಲಿ ಆ ರಾತ್ರಿ ತಂಗಿದ್ದ ಗಾಢ ಇದ್ರೆಯಲ್ಲಿದ್ದ ಪುಂಡಲೀಕನಿಗೆ ಇದ್ದಕ್ಕಿದ್ದ ಹಾಗೆ ಕೆಲವು ಮಹಿಳೆಯರ ಧ್ವನಿಯಿಂದ ಎಚ್ಚರವಾಗುತ್ತದೆ ಮೂರು ಮಹಿಳೆಯರು ಆಶ್ರಮದ ಕಸಗೂಡಿಸಿ ನೀರನ್ನು ಚುಮುಕಿಸಿ ಶುಚಿಗೊಳಿಸುತ್ತಿರುವುದನ್ನು ಕಂಡು ಆ ಮೂವರು ಮಹಿಳೆಯರು ಯಾರು ಎಂದು ವಿಚಾರಿಸಿದಾಗ ಅವರು ಪವಿತ್ರ ನದಿಗಳಾದಂತಹ ಗಂಗಾ ಯಮುನಾ ಹಾಗೂ ಸರಸ್ವತಿ ಗಳಾಗಿದ್ದರು.

ಅವರು ಪ್ರತಿನಿತ್ಯ ಕುಕ್ಕುಟ ಋಷಿಗಳ ಆಶ್ರಮವನ್ನು ಸ್ವಚ್ಛಗೊಳಿಸುವುದಾಗಿ ಬರುವುದಾಗಿ ಹೇಳಿಕೊಳ್ಳುತ್ತಾರೆ ಇದನ್ನು ಕಂಡು ಕುಕ್ಕುಟ ಋಷಿಗಳ ಶಕ್ತಿ ಸಾಮರ್ಥ್ಯ ಅರಿವಾಗಿ ಅಂಥವರನ್ನು ಅವಮಾನ ಮಾಡಬಾರದಿತ್ತು ನಿಂದನೆ ಮಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾನೆ ಧಾರ್ಮಿಕತೆ ಆಧ್ಯಾತ್ಮಿಕತೆ ಮತ್ತು ಭಕ್ತಿಯ ಕೆಲವು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದಾಗಲಿ ಆಡಂಬರದ ಆಚರಣೆ ಮಾಡುವುದ ರಿಂದಾಗಲಿ ದೇವರು ಒಲಿಯುವುದಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *