ಸರ್ಕಾರವನ್ನು ಟೀಕೆ ಮಾಡಿದ್ರು ದುಡ್ಡು ಬರುತ್ತೆ..ಸಿದ್ದರಾಮಯ್ಯನವರ ಸಂಬಳ ಎಷ್ಟು ಏನೆಲ್ಲಾ ಉಚಿತವಾಗಿ ಸಿಗುತ್ತೆ ಗೊತ್ತಾ ? » Karnataka's Best News Portal

ಸರ್ಕಾರವನ್ನು ಟೀಕೆ ಮಾಡಿದ್ರು ದುಡ್ಡು ಬರುತ್ತೆ..ಸಿದ್ದರಾಮಯ್ಯನವರ ಸಂಬಳ ಎಷ್ಟು ಏನೆಲ್ಲಾ ಉಚಿತವಾಗಿ ಸಿಗುತ್ತೆ ಗೊತ್ತಾ ?

ಸರ್ಕಾರವನ್ನು ಟೀಕೆ ಮಾಡಿದರು ಬರುತ್ತೆ ದುಡ್ಡು||
ಸಿದ್ದರಾಮಯ್ಯ ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ ಸರ್ಕಾರವನ್ನು ಟೀಕಿಸಿ ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವುದು ಇವರ ಕೆಲಸ ಹೀಗೆ ಸರ್ಕಾರವನ್ನು ಟೀಕಿಸುವುದಕ್ಕೂ ಸರ್ಕಾರ ಇವರಿಗೆ ವೇತನವನ್ನು ಕೊಡುತ್ತದೆ ಹಾಗಾದರೆ ಸಿದ್ದರಾಮಯ್ಯ ಅವರ ತಿಂಗಳ ವೇತನ ಎಷ್ಟು ಹಾಗೂ ವೇತನದ ಜೊತೆಗೆ ಸರ್ಕಾರ ಸಿದ್ದರಾಮಯ್ಯ ಅವರಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡುತ್ತದೆ ಎಂಬ ಮಾಹಿತಿಯನ್ನು ಈ ಕೆಳಗೆ ನೋಡೋಣ.

ಹಾಗಾದರೆ ಮೊದಲನೆಯದಾಗಿ ಸಿದ್ದರಾಮಯ್ಯ ಅವರ ತಿಂಗಳ ವೇತನ ಎಷ್ಟು ಎಂದು ನೋಡುವುದಾದರೆ ಸಿದ್ದರಾಮಯ್ಯ ಅವರ ವಿರೋಧ ಪಕ್ಷದ ನಾಯಕರಾಗಿರುವುದರಿಂದ ವಿಪಕ್ಷ ನಾಯಕರಿಗೆ ಎಷ್ಟು ಸಂಬಳ ಇರುತ್ತದೆಯೋ ಅಷ್ಟೇ ಸಂಬಳ ಸಿದ್ದರಾಮಯ್ಯ ಅವರಿಗೂ ಕೂಡ ಇರುತ್ತದೆ ಸದ್ಯ ಈ ಹುದ್ದೆಗೆ 60,000 ಬೇಸಿಕ್ ಸ್ಯಾಲರಿ ಅಥವಾ ಮೂಲವೇತನ ಇದೆ.

WhatsApp Group Join Now
Telegram Group Join Now

ಹೀಗಾಗಿ ಸಿದ್ದರಾಮಯ್ಯ ಅವರು ತಿಂಗಳಿಗೆ 60,000 ಮೂಲವೇತನವನ್ನು ಪಡೆಯುತ್ತಾರೆ ಎಂದರ್ಥ ತಿಂಗಳಿಗೆ 60,000 ಎಂದರೆ ವರ್ಷಕ್ಕೆ 7,20,000 ಆಗುತ್ತದೆ ಹಾಗಾದರೆ ಇಷ್ಟೇ ಅವರ ಸಂಬಳ ಎಂದು ಕೊಳ್ಳಬೇಡಿ ಅಸಲಿ ವಿಚಾರ ಏನು ಎಂದರೆ ವರ್ಷಕ್ಕೆ 2,50,000 ಲಕ್ಷ ಆತಿಧ್ಯ ಭತ್ಯೆ ಹೌದು ತಿಂಗಳ ವೇತನದ ಜೊತೆಗೆ ವಿಪಕ್ಷ ನಾಯಕರಿಗೆ ಪ್ರತಿ ವರ್ಷ 2,50,000 ಆತಿಧ್ಯ ಭತ್ಯೆ ಸಿಗುತ್ತದೆ.

ವರ್ಷಕ್ಕೆ ಎರಡುವರೆ ಲಕ್ಷ ಅಂದರೆ ತಿಂಗಳಿಗೆ 20,000 ಬರುತ್ತದೆ ಎಂದರ್ಥ ವಿಪಕ್ಷ ನಾಯಕರಿಗೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಸುಸಜ್ಜಿತ ಮನೆಯೊಂದನ್ನು ಕೊಡುತ್ತದೆ ಈ ಮನೆ ಬೆಂಗಳೂರು ನಗರದ 30 ಕಿಲೋ ಮೀಟರ್ ಅಂತರದಲ್ಲಿಯೇ ಸುತ್ತಮುತ್ತ ಇರುತ್ತದೆ ಮನೆಯ ನಿರ್ವಹಣೆಯ ಎಲ್ಲಾ ಖರ್ಚು ವೆಚ್ಚಗಳನ್ನು ಕೂಡ ರಾಜ್ಯ ಸರ್ಕಾರವೇ ಭರಿಸುತ್ತದೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿರುವವರೆಗೆ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಮತ್ತು ಆ ಹುದ್ದೆಯನ್ನು ಕಳೆದುಕೊಂಡ 60 ದಿನಗಳವರೆಗೆ ಈ ಸರ್ಕಾರಿ ಮನೆಯಲ್ಲಿ ವಾಸ ಇರಬಹುದು ಒಂದು ವೇಳೆ ತಮಗೆ ಬೇರೆ ಮನೆ ಇದೆ ಸರ್ಕಾರಿ ಮನೆ ಬೇಡ ಎನ್ನುವುದಾದರೆ ತಿಂಗಳಿಗೆ 1,60,000 ರೂಪಾಯಿ ಬಾಡಿಗೆ ಭತ್ಯೆ ಪಡೆಯಬಹುದು ಈ ಭತ್ಯೆ ಪಡೆದರೆ ಮನೆಯಲ್ಲಿ ನಿರ್ವಹಣೆ ಮತ್ತು ಸ್ವಚ್ಛತೆಗೆ ಎಂದು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳು ಸಿಗುತ್ತದೆ.

ವಿಪಕ್ಷ ನಾಯಕರಿಗೆ ರಾಜ್ಯ ಸರ್ಕಾರ ಬೇಕಿದ್ದರೆ ಕಾರನ್ನು ಕೊಡಬಹುದು ಜೊತೆಗೆ ಕಾರಿನ ರಿಪೇರಿ ಖರ್ಚು ಕಾರಿನ ಡ್ರೈವರ್ ಹಾಗೂ ಕ್ಲೀನರ್ ಗೆ ಸಂಬಳವನ್ನು ಸರ್ಕಾರವೇ ಭರಿಸುತ್ತದೆ ಇದಲ್ಲದೆ ಪ್ರತಿ ತಿಂಗಳು 2000 ಲೀಟರ್ ಪೆಟ್ರೋಲ್ ಚಾರ್ಜ್ ಅನ್ನು ವಾಹನ ಭತ್ಯೆಯಾಗಿ ನೀಡುತ್ತದೆ ವಿಪಕ್ಷ ನಾಯಕರು ಕರೆಂಟ್ ಹಾಗೂ ವಾಟರ್ ಬಿಲ್ ಅನ್ನು ಕೇವಲ 200 ರೂ ಮಾತ್ರ ಕಟ್ಟಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">