ವರ್ಷಕ್ಕೊಮ್ಮೆ ದರ್ಶನ ಕೊಡುವ ವಿಶೇಷ ದೈವ ಸರ್ಪ ಇದು.. ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಈ ಪವಾಡ ಕಣ್ಣಾರೆ ನೋಡಿ - Karnataka's Best News Portal

ವರ್ಷಕ್ಕೊಮ್ಮೆ ದರ್ಶನ ಕೊಡುವ ದೈವ ಸರ್ಪ||
ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವಾನುದೇವತೆ ಗಳಿಗೆ ಬಹಳ ಉನ್ನತವಾದಂತಹ ಸ್ಥಾನವನ್ನು ಪ್ರತಿಯೊಬ್ಬರೂ ಕೂಡ ಕೊಟ್ಟಿದ್ದೇವೆ ಅದರಂತೆ ಎಲ್ಲಾ ದೇವಾನು ದೇವತೆಗಳು ಕೂಡ ನಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯನ್ನು ನಾವೆಲ್ಲರೂ ಕೂಡ ಇಟ್ಟು ಕೊಂಡಿದ್ದೇವೆ ಅದರಂತೆ ದೇವಾನು ದೇವತೆಗಳಲ್ಲಿ ಹಲವಾರು ದೈವಗಳ ಮಹತ್ವ ಹಾಗೂ ಆ ದೇವರ ಪವಾಡಗಳನ್ನು ನಾವು ನೋಡಿದ್ದೇವೆ ಹಾಗೂ ಈಗಲೂ ಕೂಡ ನೋಡುತ್ತಿದ್ದೇವೆ.

ಅದರಂತೆ ಮೊದಲೇ ಹೇಳಿದಂತೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ನೀವು ಯಾವುದೇ ದೇವರನ್ನು ಆರಾಧನೆ ಮಾಡಿದರು ಕೂಡ ಈ ದೇವರನ್ನು ಆರಾಧನೆ ಮಾಡಲಿಲ್ಲ ಎಂದರೆ ನೀವು ಬಹಳ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತೀರ ಎಂದೇ ಹೇಳಲಾಗುತ್ತದೆ ಹೌದು ಈ ಗಾಗಲೇ ಹೇಳಿರುವಂತೆ ನಾಗದೇವರ ಆರಾಧನೆಯನ್ನು ಮಾಡದೆ ಇದ್ದರೆ ಆ ದೇವರ ಶಾಪಕ್ಕೆ ಪ್ರತಿಯೊಬ್ಬರೂ ಕೂಡ ಗುರಿಯಾಗುತ್ತೇವೆ.

ಅದರಂತೆ ಎಲ್ಲರೂ ಕೂಡ ನಾಗದೇವರನ್ನು ಆರಾಧನೆ ಮಾಡಲೇಬೇಕು ವರ್ಷಕ್ಕೆ ಒಮ್ಮೆ ಬರುವಂತಹ ನಾಗರ ಪಂಚಮಿಯಂದು ಪ್ರತಿಯೊಬ್ಬರೂ ಕೂಡ ಮಡಿಯಾಗಿ ಸ್ನಾನ ಮಾಡಿ ಹುತ್ತಕ್ಕೆ ಹೋಗಿ ಹಾಲನ್ನು ಎರೆದು ನಾಗದೇವರ ಪೂಜೆಯನ್ನು ಮಾಡಿಕೊಂಡು ಬರುತ್ತೇವೆ ಅದರಂತೆ ಪ್ರತಿಯೊಬ್ಬರೂ ಕೂಡ ಯಾವುದೇ ಜಾತಿ ಭೇದವಿಲ್ಲದೆ ಆರಾಧಿಸುವಂತಹ ದೈವ ಯಾವುದು ಎಂದರೆ ಅದು ನಾಗದೇವರು ಹೌದು.

ಈಗಾಗಲೇ ಮೇಲೆ ಹೇಳಿದಂತೆ ಈ ಒಂದು ದೇವಾಲಯದಲ್ಲಿ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಈ ಒಂದು ಸರ್ಪ ಬಹಳ ಹಿಂದಿನ ಕಾಲದಿಂದಲೂ ಕೂಡ ಇದ್ದು ಇದು ವರ್ಷಕ್ಕೆ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತದೆ ಹಾಗಾಗಿ ಈ ದೇವಾಲಯದಲ್ಲಿರುವಂತಹ ಸರ್ಪ ಹಾಗೂ ಮುನೇಶ್ವರ ದೇವರಿಗೆ ಪೂಜೆ ಮಾಡುವಂತಹ ಆ ವ್ಯಕ್ತಿ ಬಂದು ಆ ಸರ್ಪಕ್ಕೆ ಪೂಜೆಯನ್ನು ಸಲ್ಲಿಸಿ ಹೋಗುತ್ತಾರೆ

ಹೌದು ಈ ದೇವಾಲಯ ಇರುವುದು ಬೆಂಗಳೂರಿನ ಮುನೇಶ್ವರ ದೇವಸ್ಥಾನ ದೊಡ್ಡ ಕಲ್ಲಸಂದ್ರ ಎಂಬ ಸ್ಥಳದಲ್ಲಿ ಈ ದೇವಾಲಯದಲ್ಲಿ ಮುನೇಶ್ವರ ದೇವರ ಪಕ್ಕದಲ್ಲಿಯೇ ಹುತ್ತ ಇದ್ದು ಆ ಹುತ್ತದಲ್ಲಿ ಈ ನಾಗದೇವರು ವಾಸವಾಗಿದ್ದಾರೆ ವರ್ಷಕ್ಕೆ ಒಮ್ಮೆ ದರ್ಶನ ಕೊಡುವಂತಹ ಈ ಸರ್ಪಕ್ಕೆ ಅಲ್ಲಿನ ಪೂಜಾರಿ ಪೂಜೆ ಮಾಡಿ ಆ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಹಾಗೂ ಈ ಒಂದು ಹುತ್ತ ಮತ್ತು ಈ ದೇವಾಲಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದು.

ಇಲ್ಲಿ ಇರುವಂತಹ ಸರ್ಪ ಯಾರಿಗೂ ಕೂಡ ಯಾವುದೇ ರೀತಿಯ ತೊಂದರೆಯನ್ನು ಕೂಡ ಮಾಡಿಲ್ಲ ಎಂದೇ ಅಲ್ಲಿನ ಎಲ್ಲ ಜನರು ಹೇಳುತ್ತಾರೆ ಅದರಂತೆ ಪ್ರತಿಯೊಬ್ಬರೂ ಕೂಡ ಈ ಸರ್ಪದ ದರ್ಶನವನ್ನು ಪಡೆಯಲು ವರ್ಷಕ್ಕೆ ಒಮ್ಮೆ ಹೋಗಿ ಪೂಜೆಯನ್ನು ಮಾಡಿ ನಾಗ ಸರ್ಪವನ್ನು ದರ್ಶನ ಮಾಡಿ ಬರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *