ಕಾಲಿನ ಆಣಿಗೆ ಪವರ್ ಪುಲ್ ಮನೆಮದ್ದು..ಯಾವುದೇ ಆಪರೇಷನ್ ಬೇಡ ಮಾತ್ರೆಗಳು ಬೇಡ ಹೀಗೆ ಮಾಡಿದರೆ ಸಾಕು - Karnataka's Best News Portal

ಕಾಲಿನ ಆಣೆಗೆ ಮನೆಮದ್ದು||ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಸೋಂಕು ತಗುಲಿದ ತಕ್ಷಣ ಬೇಗನೆ ಸಮಸ್ಯೆಯನ್ನು ಎದುರಿಸುವುದು ನಮ್ಮ ಚರ್ಮ ಹೌದು ಯಾರು ಸ್ವಚ್ಛವಾಗಿ ಇರುವುದಿಲ್ಲವೋ ಹಾಗೂ ಯಾರು ಕಾಲಿಗೆ ಚಪ್ಪಲಿ ಇಲ್ಲದೆ ನಡೆಯುತ್ತಾರೋ ಹಾಗೂ ಯಾರು ಹೆಚ್ಚಾಗಿ ಕೆಸರಿನಲ್ಲಿ ನಿಂತು ಕೆಲಸ ಮಾಡುತ್ತಿರುತ್ತಾರೋ ಅಂಥವರಿಗೆ ಕೆಸರು ಗುಳ್ಳೆಗಳು ಉಗುರು ಸುತ್ತು ಹಾಗೂ ಕಾಲಿನಲ್ಲಿ ಆಣೆ ಆಗುವುದು ಈ ರೀತಿಯಾದಂತಹ ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಇಂತಹ ಸಮಸ್ಯೆಗಳನ್ನು ನಾವು ಆಸ್ಪತ್ರೆಗಳಿಗೆ ಹೋಗಿ ತೋರಿಸಿ ಗುಣಪಡಿಸಿಕೊಳ್ಳಬೇಕು ಎಂದೇನೂ ಇಲ್ಲ ಬದಲಾಗಿ ನಾವು ಮನೆಯಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಕಾಲಿನಲ್ಲಿ ಕಾಣಿಸಿಕೊಳ್ಳುವಂತಹ ಆಣೆಯನ್ನು ಗುಣಪಡಿಸಿಕೊಳ್ಳ ಬಹುದಾಗಿದೆ ಈ ಒಂದು ಸಮಸ್ಯೆ ನಮ್ಮ ಪಾದದಲ್ಲಿ ಕಾಣಿಸಿಕೊಳ್ಳುತ್ತದೆ ಕಾಲಿನ ಕೆಳ ಭಾಗದಲ್ಲಿ ಚರ್ಮವು ಒರಟಾಗಿದ್ದು ಅಲ್ಲಿ ಚಿಕ್ಕ ಚಿಕ್ಕ ಗಂಟುಗಳ ರೀತಿ ಕಾಲಿನಲ್ಲಿ ಆಣೆಗಳು ಕಾಣಿಸಿಕೊಳ್ಳುತ್ತದೆ.

ಇದು ನಮ್ಮ ಚರ್ಮವನ್ನು ಹೆಚ್ಚು ಗಟ್ಟಿಯಾಗಿ ಮಾಡಿ ಚರ್ಮ ತನ್ನಲ್ಲಿರುವಂತಹ ಎಲ್ಲಾ ಶಕ್ತಿಯನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಇದು ಸಮಸ್ಯೆಯನ್ನು ತಂದೊಡ್ಡುತ್ತದೆ ಹಾಗೂ ಕೆಲವೊಬ್ಬರು ಇದನ್ನು ಕತ್ತರಿಸಿ ತೆಗೆಯುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದರಿಂದ ಇನ್ನೂ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಈ ದಿನ ಕಾಲಿನಲ್ಲಿ ಕಾಣಿಸಿಕೊಳ್ಳುವಂತಹ ಆಣೆಯನ್ನು ಹೇಗೆ ಗುಣಪಡಿಸಿಕೊಳ್ಳಬಹುದು.

ಹಾಗೂ ಯಾವ ಒಂದು ಮನೆ ಮದ್ದನ್ನು ಬಳಸಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಅದಕ್ಕೂ ಮೊದಲು ಈ ಒಂದು ಸಮಸ್ಯೆಗೆ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ಚರ್ಮದಲ್ಲಿ ಇರುವಂತಹ ಎಪಿಡರ್ಮಲ್ ಸೆಲ್ಸ್ ಈ ಒಂದು ಸೆಲ್ಸ್‌ಗೆ ಇಂತಿಷ್ಟು ಎಂಬ ಜೀವಿತಾವಧಿ ಇರುತ್ತದೆ ಆ ಜೀವಿತಾವಧಿಯ ನಂತರ ಅವು ನಶಿಸಿಹೋಗುವುದಕ್ಕೆ.

ದೇಹದಿಂದ ಅವು ಹೊರಗಡೆ ಹೋಗಬೇಕು ಆದರೆ ಹಲವಾರು ಕಾರಣಗಳಿಂದ ಈ ಸೆಲ್ಸ್ ಗಳು ದೇಹದಲ್ಲಿ ಹಾಗೆ ಉಳಿದುಕೊಳ್ಳುತ್ತದೆ ಆ ಸಮಸ್ಯೆಯನ್ನೇ ಆಣೆ ಎಂದು ಕರೆಯಲಾಗುತ್ತದೆ ಹಾಗಾದರೆ ಇದನ್ನು ಹೇಗೆ ಮನೆಯಲ್ಲಿ ಸರಿಪಡಿಸಿಕೊಳ್ಳಬಹುದು ಎಂದರೆ ಅರಿಶಿಣವನ್ನು ಎಕ್ಕದ ಗಿಡದ ಹಾಲಿನಲ್ಲಿ ಮಿಶ್ರಣ ಮಾಡಿ ನಂತರ ನಿಂಬೆ ಹಣ್ಣನ್ನು ರಸ ಹಿಂಡಿ ಅದನ್ನು ಉಲ್ಟಾ ಮಾಡಿ ಅದಕ್ಕೆ ಈ ಅರಿಶಿಣವನ್ನು ಹಚ್ಚಿ.

ಆಣೆ ಆಗಿರುವಂತ ಜಾಗಕ್ಕೆ ಆ ನಿಂಬೆಹಣ್ಣನ್ನು ಇಟ್ಟು ಬಟ್ಟೆಯಿಂದ ಕಟ್ಟಬೇಕು ಹೀಗೆ ಪ್ರತಿನಿತ್ಯ ಬದಲಾಯಿಸಿ ಮಾಡುವುದರಿಂದ ಚರ್ಮ ದಿನೇ ದಿನೇ ಮೃದುವಾಗು ತ್ತದೆ ನಂತರ ಆ ಚರ್ಮ ಓದುರುವುದಕ್ಕೆ ಪ್ರಾರಂಭಿಸು ತ್ತದೆ ಹೀಗೆ ಪ್ರತಿನಿತ್ಯ ಮಾಡುವುದರಿಂದ ಈ ಒಂದು ಸಮಸ್ಯೆಯನ್ನು ಯಾವುದೇ ರೀತಿಯ ತೊಂದರೆ ಆಗದೆ ಸರಿಪಡಿಸಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *