ವೈಕುಂಠ ಏಕಾದಶಿ ದಿನ ಮನೆಯಲ್ಲಿ ಇದೊಂದು ಮಾಡಿದರೆ ಮುಕ್ಕೋಟಿ ದೇವತೆಗಳು ಹರಸ್ತಾರೆ..ಜೀವನದ ಪ್ರತಿ ಸಂಕಷ್ಟಗಳು ಕಳೆಯುತ್ತೆ - Karnataka's Best News Portal

ವೈಕುಂಠ ಏಕಾದಶಿ ದಿನ ಮನೆಯಲ್ಲಿ ಇದೊಂದು ಮಾಡಿದರೆ ಮುಕ್ಕೋಟಿ ದೇವತೆಗಳು ಹರಸುತ್ತಾರೆ||ಈಗಾಗಲೇ ಈ ತಿಂಗಳು ಪ್ರಾರಂಭವಾಗಿರುವಂತಹ ಧನುರ್ಮಾಸವನ್ನು ಪ್ರತಿಯೊಬ್ಬರೂ ಕೂಡ ಭಕ್ತಿಯಿಂದ ಆರಾಧಿಸುತ್ತಿರುತ್ತೀರಾ ಈ ಧನುರ್ಮಾಸದ ಸಮಯದಲ್ಲಿಯೇ ವೈಕುಂಠ ಏಕಾದಶಿಯು ಬರುತ್ತದೆ ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಥವಾ ಮೋಕ್ಷಕ ಏಕಾದಶಿ ಎಂದು ಕರೆಯುತ್ತಾರೆ ಇದು ಶುಕ್ಲ ಪಕ್ಷದಲ್ಲಿ ಹುಣ್ಣಿಮೆಗಿಂತ ಮುಂಚೆ ಬರುತ್ತದೆ.

ವೈಕುಂಠ ಏಕಾದಶಿಯ ದಿನ ಯಾರೆಲ್ಲಾ ಪೂಜೆಯನ್ನು ಮಾಡುತ್ತಾರೋ ಏಕಾದಶಿಯ ಮಂತ್ರವನ್ನು ಹೇಳುತ್ತಾ ರೋ ಹಾಗೂ ಏಕಾದಶಿಯ ದಿನ ತುಳಸಿಯನ್ನು ದೇವರಿಗೆ ಯಾರು ಅರ್ಪಿಸುತ್ತಾರೋ ಅವರೆಲ್ಲರ ಇಷ್ಟಾರ್ಥಗಳು ಕೂಡ ನೆರವೇರುತ್ತದೆ ಅವರಿಗೆ ಒಳ್ಳೆಯ ಮೋಕ್ಷ ಸಿಗುತ್ತದೆ ಮುಕ್ಕೋಟಿ ದೇವತೆಗಳು ಅವರಿಗೆ ಹರಸುತ್ತಾರೆ ಎನ್ನುವಂತಹ ನಂಬಿಕೆ ಇದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಭಕ್ತಿಯಿಂದ ಏಕಾದಶಿಯ ದಿನ ದೇವರನ್ನು ಆರಾಧನೆ ಮಾಡುತ್ತಾರೆ.

ಹಾಗಾದರೆ ಮುಂದೆ ಬರುವಂತಹ 2023ರ ವರ್ಷದಲ್ಲಿ ಯಾವ ದಿನ ವೈಕುಂಠ ಏಕಾದಶಿ ಬಂದಿದೆ ಎಂದು ನೋಡುವುದಾದರೆ ಜನವರಿ 1 ಭಾನುವಾರ ಬೆಳಗ್ಗೆ 7 ಗಂಟೆ 10 ನಿಮಿಷಕ್ಕೆ ಅಂದರೆ ರಾತ್ರಿ ಇದು ಶುರುವಾಗಿ ಜನವರಿ 2ನೇ ತಾರೀಖು ಸೋಮವಾರ ರಾತ್ರಿ 8:25ಕ್ಕೆ ವೈಕುಂಠ ಏಕಾದಶಿಯು ಮುಗಿಯುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ವೈಕುಂಠ ಏಕಾದಶಿಯ ದಿನ.

ಯಾರೆಲ್ಲ ವೈಕುಂಠ ದ್ವಾರವನ್ನು ಪ್ರವೇಶ ಮಾಡಬೇಕು ತಮಗೆ ಒಳ್ಳೆಯ ಮೋಕ್ಷ ಬೇಕು ತಮ್ಮ ಎಲ್ಲಾ ಸಂಕಷ್ಟ ಗಳು ದೂರವಾಗಬೇಕು ಹಾಗೂ ನಿಮ್ಮ ಎಲ್ಲಾ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬೇಕು ಎಂದು ಬಯಸುತ್ತಿರುತ್ತಾರೋ ಅವರೆಲ್ಲರೂ ಕೂಡ ಭಗವಂತ ವಿಷ್ಣುವಿನ ನಾಮವನ್ನು ಜಪವನ್ನು ಪಾರಾಯಣ ಮಾಡುವುದರಿಂದ ಇವೆಲ್ಲವೂ ಕೂಡ ಸರಿ ಹೋಗುತ್ತದೆ ಎಂದೇ ಹೇಳಬಹುದಾಗಿದೆ ಜೊತೆಗೆ ಪ್ರತಿಯೊಬ್ಬರೂ ಕೂಡ ಈ ದಿನ ಉಪವಾಸವನ್ನು ಮಾಡುವುದು ಅತ್ಯಂತ ಶ್ರೇಷ್ಠವಾಗಿರುತ್ತದೆ.

ಉಪವಾಸ ಮಾಡಲು ಸಾಧ್ಯವಿಲ್ಲ ಎನ್ನುವವರು ಅನ್ನವನ್ನು ತಿನ್ನಬೇಡಿ ಬದಲಿಗೆ ಹಾಲು ಹಣ್ಣನ್ನು ತಿನ್ನುವುದು ಉಪಯುಕ್ತವಾಗಿದೆ. ಜೊತೆಗೆ ಹೆಚ್ಚಿನ ಜನ ಹಲವಾರು ತಪ್ಪುಗಳನ್ನು ಮಾಡಿರುತ್ತಾರೋ ಅಂಥವರು ಈ ದಿನ ನಿಮ್ಮ ಎಲ್ಲಾ ಪಾಪಗಳನ್ನು ಕೂಡ ಕೊನೆಗಾಣಿಸಿಕೊಳ್ಳಬಹುದಾಗಿದೆ ಹೌದು ಈ ಒಂದು ದ್ವಾರವನ್ನು ಪ್ರವೇಶ ಮಾಡುವುದರಿಂದ ನಿಮ್ಮ ಎಲ್ಲ ಪಾಪ ಕರ್ಮಗಳನ್ನು ದೂರಮಾಡಿಕೊಳ್ಳಬಹುದು

ಅದರಲ್ಲೂ ಬಹಳ ಮುಖ್ಯವಾಗಿ ಈ ದಿನ ಭಗವಂತನಿಗೆ ತುಳಸಿಯನ್ನು ಅರ್ಪಣೆ ಮಾಡಬೇಕು ಜೊತೆಗೆ ಹುಗ್ಗಿ ಅನ್ನವನ್ನು ನೈವೇದ್ಯ ಮಾಡಬೇಕು ಅಥವಾ ಬಾಳೆಹಣ್ಣು ತೆಂಗಿನ ಕಾಯಿಯನ್ನು ನೈವೇದ್ಯ ಮಾಡಬೇಕು ಹೀಗೆ ಮಾಡುವುದರಿಂದ ಒಳ್ಳೆಯ ಫಲವನ್ನು ಪಡೆಯಬಹುದು ಇನ್ನು ಈ ದಿನ ರಾಮನ ಕೃಷ್ಣನ ವೆಂಕಟೇಶ್ವರನ ನಾಮವನ್ನು ಜಪ ಮಾಡುವು ದು ಅತ್ಯಂತ ಶ್ರೇಷ್ಠವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *