ಕೊಳೆತ ನಿಂಬೆಹಣ್ಣನ್ನು ಎಸೆಯುತ್ತಿದ್ದೀರಾ ಈ ತಪ್ಪು ಮಾಡಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ||ನಿಂಬೆಹಣ್ಣು ಸರ್ವೇ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಇದ್ದೇ ಇರುತ್ತದೆ ಕೆಲವೊಮ್ಮೆ ಕಡಿಮೆ ಬೆಲೆಗೆ ಇದು ಸಿಗುತ್ತದೆ ಎಂದರೆ ಜಾಸ್ತಿ ಖರೀದಿಸಿ ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಏಕೆಂದರೆ ಇದನ್ನು ಹೆಚ್ಚಿನ ದಿನಗಳವರೆಗೆ ಇಟ್ಟುಕೊಳ್ಳಬಹುದು ಏನು ಆಗುವುದಿಲ್ಲ ಎನ್ನುವ ಉದ್ದೇಶದಿಂದ ತಂದು ಇಟ್ಟುಕೊಳ್ಳುತ್ತೇವೆ.
ಇನ್ನು ಕೆಲವರು ನಿಂಬೆ ಹಣ್ಣಿನ ಗಿಡವನ್ನು ಕೂಡ ಬೆಳೆದಿರುತ್ತಾರೆ ಇಂಥವರ ಮನೆಯಲ್ಲಿಯೂ ಕೂಡ ಹೆಚ್ಚಾಗಿ ಇರುತ್ತದೆ ಕೆಲವೊಮ್ಮೆ ಹೆಚ್ಚು ಇದ್ದರೆ ಜೊತೆಗೆ ಶೀತದ ವಾತಾವರಣವಿದ್ದರೆ ಅದರಲ್ಲಿ ಕೆಲವೊಂದಷ್ಟು ನಿಂಬೆಹಣ್ಣು ಕೊಳೆತು ಹೋಗುವ ಸಾಧ್ಯತೆ ಇರುತ್ತದೆ ಹಾಗಾದರೆ ಅವುಗಳನ್ನು ಏನು ಮಾಡಬೇಕು ಕೆಲವರು ಅದನ್ನು ಬಿಸಾಕುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ಇದನ್ನು.
ಉಪಯೋಗಿಸಿಕೊಳ್ಳಬಹುದು ಹೌದು ನಿಂಬೆಹಣ್ಣು ನಮ್ಮ ಮನೆಯ ಅತಿ ದೊಡ್ಡ ಕೆಲಸಕ್ಕೆ ಬೇಕಾಗುತ್ತದೆ ಹಾಗಾದರೆ ಅದನ್ನು ಯಾವ ರೀತಿ ಉಪಯೋಗಿಸ ಬಹುದು ಎಂದು ನೋಡುವುದಾದರೆ ಕೊಳೆತ ಎಲ್ಲ ನಿಂಬೆ ಹಣ್ಣನ್ನು ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು ನಂತರ ಅದನ್ನು ಒಂದು ಪಾತ್ರೆಗೆ ಶೋಧಿಸಿಕೊಳ್ಳಿ ನಂತರ ಅದಕ್ಕೆ ಅಡುಗೆ ಸೋಡವನ್ನು ಕಲಸಿ ಆ ನೀರನ್ನು ಶೇಖರಿಸಿಟ್ಟುಕೊಳ್ಳಬಹುದು.
ಹೀಗೆ ಶೇಖರಿಸಿದಂತಹ ಈ ನೀರನ್ನು ಯಾವ ಕೆಲಸಗಳಿಗೆ ಉಪಯೋಗಿಸಬಹುದು ಎಂದರೆ ನಿಮ್ಮ ಅಡುಗೆ ಮನೆಯ ಟೈಲ್ಸ್ ಗಳಲ್ಲಿ ಎಣ್ಣೆ ಕರೆ ಆಗಿದ್ದರೆ ಅಲ್ಲಿಗೆ ಈ ನೀರನ್ನು ಹಾಕಿ ತೊಳೆಯುವುದರಿಂದ ಎಣ್ಣೆಯ ಜಿಡ್ಡು ಹೋಗುತ್ತದೆ ಜೊತೆಗೆ ಬಾತ್ ರೂಮ್ ನಲ್ಲಿರುವಂತಹ ಶಿಂಕ್ ಮತ್ತು ಗೋಡೆಗಳಿಗೆ ಕೂಡ ಈ ನೀರನ್ನು ಹಾಕಿ ತೊಳೆಯುವುದರಿಂದ ಸುಲಭವಾಗಿ ಕೊಳೆ ಬೇಗನೆ ಹೋಗುತ್ತದೆ.
ಮತ್ತು ಮುಖ್ಯವಾಗಿ ದೇವರ ಮನೆಯಲ್ಲಿರುವಂತಹ ತಾಮ್ರ ಹಿತ್ತಾಳೆ ಪಾತ್ರಗಳು ಹೆಚ್ಚು ಕೊಳೆಯಿಂದ ಕೂಡಿದ್ದರೆ ಅವುಗಳಿಗೆ ಈ ನೀರನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ನಂತರ ಸಬೀನಾ ಅಥವಾ ಸೋಪ್ ನ ಸಹಾಯದಿಂದ ಇದನ್ನು ಸ್ವಲ್ಪ ಉಜ್ಜಿದರೆ ಸಾಕು ಆ ಪಾತ್ರೆಗಳು ಪಳಪಳನೆ ಹೊಳೆಯುತ್ತದೆ ಜೊತೆಗೆ ಸ್ನಾನ ಮಾಡುವಂತಹ ಕೋಣೆಯ ನಲ್ಲಿಗಳಿಗೂ ಕೂಡ ಇದನ್ನು ಹಾಕಿ ತೊಳೆಯುವುದರಿಂದ ಬೇಗ ಶುಚಿಯಾಗುತ್ತದೆ.
ಹೀಗೆ ಕೊಳೆತ ನಿಂಬೆಹಣ್ಣನ್ನು ಯಾವ ರೀತಿಯೆಲ್ಲ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ನೀವು ನೋಡಿದಿರಿ ಹಾಗಾದರೆ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ಪದಾರ್ಥವನ್ನು ಉಪಯೋಗಿಸು ವುದರಿಂದ ನಿಮ್ಮ ಹಣವನ್ನು ಉಳಿಸಿಕೊಳ್ಳಬಹುದು ಜೊತೆಗೆ ಹೆಚ್ಚಿನ ಹಣ ಖರ್ಚು ಇಲ್ಲದೆ ಸುಲಭವಾಗಿ ಇದನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳ ಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.