ಬ್ರಿಟಿಷರು ತಿರುಪತಿಯ ಸಂಪತ್ತನ್ನ ಯಾಕೆ ಮುಟ್ಟಲಿಲ್ಲ ದೇಗುಲವನ್ನ 12 ದಿನಗಳಲ್ಲಿ ಕಟ್ಟಿದ್ದು ನಿಜವೇನಾ!..ತಿರುಪತಿಯ ಕುರಿತಾದ ರಹಸ್ಯ ಸಂಗತಿಗಳು - Karnataka's Best News Portal

ನಿಮಗೆ ಗೊತ್ತಿರದ ತಿರುಪತಿಯ ರಹಸ್ಯ ಮಾಹಿತಿಗಳು.!
ನಾವು ಭಾರತ ಮಾತ್ರವಲ್ಲದೆ ವಿಶ್ವದಲ್ಲಿಯೇ ಅತಿ ದೊಡ್ಡ ದೇವಸ್ಥಾನವಾದ ಶ್ರೀ ತಿರುಪತಿ ತಿರುಮಲ ದೇವಾಲಯದ ಬಗ್ಗೆ ಹಾಗೂ ಅದರ ಸುತ್ತ ಮುತ್ತ ಇರುವ ಒಂದಷ್ಟು ಚಾರಿತ್ರಿಕ ವಿಚಾರಗಳ ಬಗ್ಗೆ ತಿಳಿಯೋಣ ಕಲಿಯುಗದ ಜನರನ್ನು ಅಧರ್ಮ ಮಾರ್ಗದಿಂದ ತಪ್ಪಿಸಿ ಧರ್ಮ ಮಾರ್ಗಕ್ಕೆ ತರಲು ಹಾಗೂ ಅವರನ್ನು ರಕ್ಷಿಸುವ ಸಲುವಾಗಿ.

ಶ್ರೀ ಮಹಾವಿಷ್ಣು ಎತ್ತಿದ ಅವತಾರವೇ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಎಂಬ ನಂಬಿಕೆ ನಮ್ಮಲ್ಲಿ ಇದೆ ಇದಕ್ಕೆ ಭೂಲೋಕದ ವೈಕುಂಠ ವೆಂಕಟಾದ್ರಿ ಎಂಬ ಹೆಸರುಗಳು ಸಹ ಇದೆ ಇಲ್ಲಿ ನೆಲೆಸಿರುವ ಶ್ರೀನಿವಾಸನ ದರ್ಶನವನ್ನು ಪಡೆದು ಆತನ ಸ್ಮರಣೆಯಲ್ಲಿ ಕಳೆದು ಹೋದರೆ ನಾವು ಆತನ ಜೊತೆಯಲ್ಲಿ ವೈಕುಂಠದ ಲ್ಲಿಯೇ ಇದ್ದೇವೆ ನಮ್ಮ ಜೊತೆ ವೆಂಕಟೇಶ್ವರ ಇದ್ದಾರೆ ಎನ್ನುವಂತಹ ಪೂಜ್ಯ ಭಾವವನ್ನು ಈ ಸ್ಥಳ ನಮಗೆ ಕೊಡುತ್ತದೆ.


ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಭೂಲೋಕದಿಂದ ಕಾಣಲು ಈ ಕ್ಷೇತ್ರ ನೋಡುವುದರಿಂದಲೇ ಸಾಧ್ಯ ಎನ್ನುವ ವಾದವು ಶಾಸ್ತ್ರಗಳಲ್ಲಿ ಇದೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ ನೀವು ತಿರುಪತಿ ಹಾಗೂ ಅದರ ದೇಗುಲಗಳ ಬಗ್ಗೆ ಮೊದಲಿನಿಂದಲೂ ಕೇಳುತ್ತಾ ಬಂದ ಎಷ್ಟೋ ಸಂಗತಿಗಳು ಅವು ವಾಸ್ತವವಲ್ಲ ಎನ್ನುವ ಸತ್ಯವನ್ನು ಅವು ಯಾವ ರೀತಿ ನಿಜವಲ್ಲ ಎನ್ನುವುದನ್ನು.

ನೀವು ಈ ಕೆಳಗಿನಂತೆ ತಿಳಿಯಬಹುದು ಮೊದಲನೆ ಯದು ಶ್ರೀ ತಿರುಪತಿ ಸ್ವಾಮಿಯ ತಲೆಯ ಮೇಲೆ ಕೂದಲು ಬೆಳೆದಿದೆ ಎನ್ನುವ ವಿಷಯ ಇದು ಸತ್ಯವಲ್ಲ ಈ ವಿಷಯ ಕೇವಲ ಕಟ್ಟುಕಥೆ ಎಂದು ಆರು ವರ್ಷಗಳ ಹಿಂದೆ ನಡೆದ ಒಂದು ಸಂದರ್ಶನದಲ್ಲಿ TTD ಯ ಮುಖ್ಯ ಅರ್ಚಕರಾದ ಶ್ರೀ ರಮಣ ದೀಕ್ಷಿತ್ ಎನ್ನುವವರೇ ಸ್ಪಷ್ಟಪಡಿಸಿದ್ದರು.

ಕೂದಲು ಬೆಳೆಯುವುದು ಉಗುರು ಬೆಳೆಯುವುದು ಚರ್ಮ ಉದುರುವುದು ಇವೆಲ್ಲ ನಮ್ಮ ನಿಮ್ಮಂತೆ ಮಾನವರಲ್ಲಿ ಹಾಗೂ ಇತರೆ ಜೀವಿಗಳಲ್ಲಿ ಉಂಟಾಗುವ ಸಾಮಾನ್ಯbಪ್ರಕ್ರಿಯೆಗಳು ಮಾತ್ರ ಇವುಗಳನ್ನು ದೈವಗಳ ಜೊತೆ ಸಮೀಕರಿಸಿ ಅವುಗಳೊಂದಿಗೆ ಹೋಲಿಸುವುದು ನಮ್ಮ ದಡ್ಡತನ ಇಂತಹ ಗಾಳಿ ಸುದ್ದಿಗಳನ್ನು ನಂಬುವುದು ಸಹ ಅದಕ್ಕಿಂತ ದೊಡ್ಡ ಮೂರ್ಖತನ ಹಾಗೂ ತಿರುಪತಿ ಕ್ಷೇತ್ರದಲ್ಲಿ ಸುಮಾರು 20 ಕಿ.ಮೀ ದೂರ ಇರುವ.

ಯಾರಿಗೂ ತಿಳಿಯದ ನಿಗೂಢವಾದ ಒಂದು ಹಳ್ಳಿಯಿಂದಲೇ ದೇವಸ್ಥಾನಕ್ಕೆ ಬೇಕಾದಂತಹ ಹೂವುಗಳು ಬರುತ್ತದೆ ಎನ್ನುವ ವಿಷಯವು ಸಹ ಸುಳ್ಳು ಇದು ಈಗಲೂ ಕೂಡ ಚಾಲ್ತಿಯಲ್ಲಿರುವಂತಹ ಸುಳ್ಳಾಗಿದೆ ದೇವಸ್ಥಾನಕ್ಕೆ ಬೇಕಾದಂತಹ ಹೂಗಳನ್ನು ಭಕ್ತರು ಕೊಡುವಂತಹ ಹೂಗಳಿಂದ ಮತ್ತು ಅಲ್ಲಿಯೇ ಬೆಳೆದಂತಹ ಕೈತೋಟಗಳಿಂದ ತಂದು ಅರ್ಪಿಸಲಾಗು ತ್ತದೆ ಎನ್ನುವ ವಿಷಯ ನಿಮಗೆ ತಿಳಿದಿರುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *