ಇಷ್ಟು ದಿನ ಗೊತ್ತಿಲ್ಲದೆ ಎಷ್ಟು ಕಷ್ಟ ಪಟ್ಟಿದ್ದಿವೋ ಎಲ್ಲಾ ಮಹಿಳೆಯರಿಗೆ ಉಪಯೋಗವಾಗುತ್ತೆ..ಹೀಗೆ ಮಾಡಿ ಮನೆಗೆ ಉಪಯೋಗವಾಗುವ ಟಿಪ್ಸ್.. - Karnataka's Best News Portal

ಇಷ್ಟು ದಿನ ಗೊತ್ತಿಲ್ಲದೆ ಎಷ್ಟು ಕಷ್ಟ ಪಟ್ಟಿದ್ದಿವೋ ಎಲ್ಲಾ ಮಹಿಳೆಯರಿಗೆ ಉಪಯೋಗವಾಗುತ್ತೆ..ಹೀಗೆ ಮಾಡಿ ಮನೆಗೆ ಉಪಯೋಗವಾಗುವ ಟಿಪ್ಸ್..

ನಿಮ್ಮ ಶ್ರಮವನ್ನು ಕಡಿಮೆ ಮಾಡಿ ಮನೆ ಕೆಲಸವನ್ನು ಈಜಿಯಾಗಿಸುವ ಅದ್ಭುತವಾದ ಅಡುಗೆ ಮನೆಯ ಟಿಪ್ಸ್||
ಅಡುಗೆ ಮನೆಗಳಲ್ಲಿ ಎಷ್ಟೇ ಕೆಲಸ ಮಾಡಿದರು ಕೂಡ ಕೆಲವೊಮ್ಮೆ ಕೆಲಸಗಳೇ ಮುಗಿಯುವುದಿಲ್ಲ ಅದಕ್ಕಾಗಿ ಕೆಲವರು ಅಡುಗೆಮನೆ ಕೆಲಸ ಎಂದರೆ ದೂರ ಉಳಿಯುತ್ತಾರೆ. ಅದೇ ರೀತಿ ಕೆಲವೊಬ್ಬರು ಅಡಿಗೆ ಮನೆಯಲ್ಲಿ ಸುಲಭವಾಗುವಂತಹ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಅಡಿಗೆ ಮನೆಯ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಹೊರಗಡೆ ಹೋಗಿ ಕೆಲಸ ಮಾಡುವಂತಹ ಪ್ರತಿಯೊಬ್ಬರಿಗೂ ಕೂಡ ಅಡುಗೆ ಮನೆಯ ಕೆಲಸವನ್ನು ಹೇಗೆ ಸುಲಭ ರೀತಿಯಲ್ಲಿ ಮಾಡಿಕೊಳ್ಳುವುದು ಸುಲಭ ವಿಧಾನ ಯಾವುದು ಎನ್ನುವುದರ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಿರುತ್ತಾರೆ ಅದೇ ರೀತಿ ಈ ದಿನ ಅಡುಗೆ ಮನೆಗೆ ಸಂಬಂಧಪಟ್ಟಂತೆ ಯಾವ ಒಂದು ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.


ಮೊದಲನೆಯದಾಗಿ ಕೆಲವೊಬ್ಬರಿಗೆ ತೊಗರೆ ಬೇಳೆಯನ್ನು ನೇರವಾಗಿ ಅಡುಗೆ ಮಾಡಿ ತಿನ್ನುವುದರಿಂದ ಗ್ಯಾಸ್ಟಿಕ್ ಎದೆಯುರಿ ಎನ್ನುತ್ತಿರುತ್ತಾರೆ ಅಂತವರು ತೊಗರಿ ಬೇಳೆಯನ್ನು ಉಪಯೋಗಿಸುವುದಕ್ಕೂ ಮೊದಲು ಸ್ವಲ್ಪ ಹುರಿದು ಅದನ್ನು ಅಡುಗೆ ಮಾಡುವುದರಿಂದ ಆ ಒಂದು ಸಮಸ್ಯೆ ಬಾರದಂತೆ ತಡೆಗಟ್ಟಬಹುದು ಜೊತೆಗೆ ಅಂಗಡಿಯಿಂದ ತಂದ ದಿನವೇ ಅಥವಾ ಬಿಡುವಿದ್ದ ಸಮಯದಲ್ಲಿ ಈ ರೀತಿ ಮಾಡಿಟ್ಟುಕೊಂಡರೆ ಅಡುಗೆ ಮಾಡುವ ಸಮಯದಲ್ಲಿ ಸುಲಭವಾಗಿ ಬೇಗನೆ ಅಡುಗೆ ಮಾಡಬಹುದು.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಅಡುಗೆ ಮನೆಯಲ್ಲಿ ಪ್ರತಿಯೊಂದು ದಿನಸಿ ಪದಾರ್ಥಗಳು ಇರುವುದರಿಂದ ಅಲ್ಲಿ ಹೆಚ್ಚಾಗಿ ಜಿರಳೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಜೊತೆಗೆ ಸಿಂಕ್ ಕೆಳಗಡೆಯ ಭಾಗಗಳಲ್ಲಿ ಜಿರಳೆಗಳು ಸಾಧಾರಣವಾಗಿ ಇರುತ್ತದೆ ಆದರೆ ಅವುಗಳನ್ನು ಹೇಗೆ ಹೋಗಲಾಡಿಸು ವುದು ಎಂದರೆ ಒಂದು ಚಿಕ್ಕ ಬೌಲಿಗೆ ಯಾವುದಾದರೂ ಶಾಂಪೂ ಹಾಕಿ ನಂತರ ಅದಕ್ಕೆ ನಾಲ್ಕು ಚಮಚ ವಿನೀಗರ್ ನಾಲ್ಕು ಚಮಚ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ನಂತರ ಇದನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿಟ್ಟುಕೊಂಡು ಜಿರಳೆಗಳು ಓಡಾಡುವಂತಹ ಜಾಗಗಳಿಗೆ ಹಾಕಿದರೆ ಆ ಜಾಗಕ್ಕೆ ಜಿರಳೆಗಳು ಬರುವುದಿಲ್ಲ ಮತ್ತು ಅಡುಗೆ ಮನೆಯಲ್ಲಿ ಇಡುವಂತಹ ಪ್ರತಿಯೊಂದು ಡಬ್ಬಿಗಳನ್ನು ಸಹ ನಾವು ಸದಾ ಕಾಲ ಶುಚಿಯಾಗಿ ಇಡುತ್ತೇವೆ ಅದರಂತೆ ಅವುಗಳನ್ನು ಇಡುವಂತಹ ಸ್ಥಳದಲ್ಲಿ ಕೆಳಗಿನ ಭಾಗದಲ್ಲಿ ನ್ಯೂಸ್ ಪೇಪರ್ ಅಥವಾ ಇನ್ಯಾವುದಾದರೂ ಪೇಪರ್ ಇಟ್ಟು ನಂತರ ಅದರ ಮೇಲೆ.

ಡಬ್ಬಿಗಳನ್ನು ಇಡುವುದರಿಂದ ನೀವು ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು ಜೊತೆಗೆ ಸುಲಭವಾಗಿ ಅಡುಗೆಮನೆಯನ್ನು ಕಡಿಮೆ ಸಮಯದಲ್ಲಿ ಬೇಗ ಕೆಲಸ ಮುಗಿಸಬಹುದು ಹೀಗಾಗಿ ಮೇಲೆ ಹೇಳಿದಂತಹ ಟಿಪ್ಸ್ ಗಳು ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುತ್ತದೆ ಜೊತೆಗೆ ಈ ವಿಧಾನ ಗಳು ಕೆಲವೊಬ್ಬರಿಗೆ ಈಗಾಗಲೇ ತಿಳಿದಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]