ಹಳೆಯ ಕ್ಯಾಲೆಂಡರ್ ಬಿಸಾಕುವ ಬದಲು ಹೀಗೆ ಮಾಡಿ ಗ್ರ್ಯಾಂಡ್ ಆಗಿ ಚೆನ್ನಾಗಿರುತ್ತೆ ಮಿಸ್ ಕೊಳ್ಳದೆ ಈ ವಿಡಿಯೋ ನೋಡಿ - Karnataka's Best News Portal

ಹಳೆಯ ಕ್ಯಾಲೆಂಡರ್ ಬಿಸಾಕುವ ಬದಲು ಈ ರೀತಿ ಮಾಡಿ ಉಪಯೋಗಿಸಿ||ಹೆಣ್ಣು ಮಕ್ಕಳು ಮನೆಯಲ್ಲಿ ಸುಮ್ಮನೆ ಕುಳಿತಿರುವು ದರ ಬದಲು ನಿಮ್ಮ ಬುದ್ಧಿವಂತಿಕೆಯನ್ನು ಒಂದಲ್ಲ ಒಂದು ವಿಷಯದಲ್ಲಿ ತೋರಿಸ ಬೇಕು ಅದೇ ರೀತಿ ಕೆಲವೊಬ್ಬರು ಮನೆಯಲ್ಲಿ ಯಾವುದಾದರೂ ಒಂದು ಹಳೆಯ ಪದಾರ್ಥ ಸಿಕ್ಕರೂ ಕೂಡ ಅದನ್ನು ಮತ್ತೆ ಉಪಯೋಗಿಸಿಕೊಂಡು ಹೊಸ ವಸ್ತುವನ್ನು ತಯಾರಿಸುತ್ತಾರೆ. ಅದೇ ರೀತಿ ಯಾವುದೇ ಒಂದು ಪದಾರ್ಥವಾಗಲಿ ಒಂದು ಪೇಪರ್ ಸಿಕ್ಕರೂ ಕೂಡ.

ಅದನ್ನು ಹೇಗೆ ಉಪಯೋಗಿಸಬಹುದು ಹಾಗೂ ಅದರಿಂದ ಯಾವ ರೀತಿಯಾದಂತಹ ಹೊಸ ಪದಾರ್ಥ ಮಾಡಬಹುದು ಎಂಬುದರ ಬಗ್ಗೆ ಹೆಚ್ಚು ಗಮನವನ್ನು ವಹಿಸುತ್ತಿರುತ್ತಾರೆ ಅದೇ ರೀತಿ ಪೇಪರ್ ಸಿಕ್ಕರೆ ಅದನ್ನು ಉಪಯೋಗಿಸಿಕೊಂಡು ಬಾಗಿಲಿಗೆ ಹಾಕುವಂಥ ತೋರಣಗಳನ್ನಾಗಲಿ ಅಥವಾ ಅವುಗಳನ್ನು ಉಪಯೋಗಿಸಿ ಮನೆಗೆ ಬೇಕಾದಂಥ ಮನೆಯ ಅಲಂಕಾರಿಕ ವಸ್ತುವನ್ನಾಗಿ ಮಾಡುತ್ತಿರುತ್ತಾರೆ.


ಮತ್ತು ಪ್ರತಿದಿನ ಮನೆಯಲ್ಲಿ ಉಪಯೋಗಿಸುವಂತಹ ಹಾಲಿನ ಪ್ಯಾಕೆಟ್ ಸಾಧಾರಣವಾಗಿ ಎಲ್ಲರೂ ಬಿಸಾಕುತ್ತಿರುತ್ತೇವೆ ಆದರೆ ಕೆಲವೊಬ್ಬರು ಅವುಗಳನ್ನು ಉಪಯೋಗಿಸಿ ಅವುಗಳಿಂದ ಮನೆಯ ಮುಂಭಾಗ ಲಿಗೆ ಹಾರಗಳನ್ನು ಮಾಡುವುದರ ಮುಖಾಂತರ ತಮ್ಮ ಬುದ್ಧಿವಂತಿಕೆಯನ್ನು ತೋರಿಸಿಕೊಳ್ಳುತ್ತಿರುತ್ತಾರೆ ಹಾಗೂ ಇನ್ನೂ ಹಲವಾರು ಇನ್ಯಾವುದೇ ರೀತಿಯಾದ ಪದಾರ್ಥವನ್ನು ಉದಾಹರಣೆಗೆ ಪ್ಲಾಸ್ಟಿಕ್ ಬಾಟಲ್ ಉಪಯೋಗಿಸಿಕೊಂಡು ಅದರಿಂದಲೂ ಕೂಡ ಮನೆಗೆ ಬೇಕಾದಂತ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿರುತ್ತಾರೆ

ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಇನ್ನೇನು ಹಳೆ ವರ್ಷ ಮುಗಿಯುತ್ತಾ ಬಂದಿತು ಹೊಸ ವರ್ಷ ಪ್ರಾರಂಭವಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ನಿಮ್ಮ ಮನೆಯಲ್ಲಿರುವಂತಹ ಕ್ಯಾಲೆಂಡರ್ ಅನ್ನು ತೆಗೆಯುತ್ತೀರಿ ಆದರೆ ಅವುಗಳನ್ನು ಕೂಡ ಉಪಯೋಗಿಸಿಕೊಂಡು ಯಾವುದೆಲ್ಲ ವಿಧಾನಕ್ಕೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ಈ ಕೆಳಗೆ ಈ ದಿನ ತಿಳಿಯೋಣ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಕ್ಯಾಲೆಂಡರ್ ಇದ್ದೇ ಇರುತ್ತದೆ ಅದನ್ನು ಯಾವ ರೀತಿ ಉಪಯೋಗಿಸಬಹುದು ಎಂದರೆ.

ಕೆಲವೊಂದು ಕ್ಯಾಲೆಂಡರ್ ನಲ್ಲಿ ಮೇಲಿನ ಭಾಗದಲ್ಲಿ ದಿನಾಂಕ ಮತ್ತು ಆ ತಿಂಗಳ ವಿಶೇಷತೆಗಳು ಎಲ್ಲವೂ ಕೂಡ ಇರುತ್ತದೆ ಮತ್ತು ಅದರ ಹಿಂಭಾಗದಲ್ಲಿ ಯಾವುದೇ ರೀತಿಯಾದಂತಹ ಬರವಣಿಗೆ ಇರುವುದಿಲ್ಲ ಅಂತಹ ಸಮಯದಲ್ಲಿ ಅದನ್ನು ಮಕ್ಕಳಿಗೆ ಬುಕ್ಲೆಟ್ ಮಾಡುವುದರ ಮುಖಾಂತರ ಅವರ ಉಪಯೋಗಕ್ಕೆ ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಜೊತೆಗೆ ಅವುಗಳನ್ನು ನಿಮ್ಮ ಅಡುಗೆ ಮನೆಯ ಶೆಲ್ಫ್ ಗಳಿಗೆ ಹಾಕಿ ಅಡುಗೆಮನೆಯನ್ನು ಸ್ವಚ್ಛವಾಗಿಯೂ ಕೂಡ ಇಟ್ಟುಕೊಳ್ಳುವುದಕ್ಕೆ ಬಳಸಬಹುದು.

ಜೊತೆಗೆ ಅದನ್ನು ಸಣ್ಣದಾಗಿ ಸುತ್ತಿ ಅದಕ್ಕೆ ಉಲ್ಲನ್ ನಿಂದ ಸುತ್ತಿ ಅದನ್ನು ಕೂಡ ನಿಮಗೆ ಹೊಳೆಯುವಂತೆ ಮನೆಗೆ ಅಲಂಕಾರಿಕ ವಸ್ತುವನ್ನಾಗಿಯೂ ಕೂಡ ಉಪಯೋಗಿಸಬಹುದು ಜೊತೆಗೆ ತೋರಣವನ್ನಾಗಿ ಯೂ ಕೂಡ ತಯಾರಿಸಬಹುದು ಹೀಗೆ ಪ್ರತಿ ಯೊಬ್ಬರೂ ಕೂಡ ಒಂದಲ್ಲ ಒಂದು ವಸ್ತುವನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಲಿತುಕೊಂಡರೆ ನಮ್ಮ ಪರಿಸರವೂ ಕೂಡ ಹಾಳಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *