ಓಂ ಶಕ್ತಿ ಮಾಲೆ ಹಾಕುವವರು ಖಂಡಿತವಾಗಿ ಇದನ್ನು ನೋಡಿ ...ಇದನ್ನು ತಿಳಿಯದೆ ಮಾಲೆ ಹಾಕಬೇಡಿ - Karnataka's Best News Portal

ಓಂ ಶಕ್ತಿ ಮಾಲೆ ಹಾಕುವವರು ಖಂಡಿತವಾಗಿ ಇದನ್ನು ನೋಡಿ …ಇದನ್ನು ತಿಳಿಯದೆ ಮಾಲೆ ಹಾಕಬೇಡಿ

ಓಂ ಶಕ್ತಿ ಮಾಲೆ ಹಾಕುವವರು ಖಂಡಿತ ಇದನ್ನು ನೋಡಿ|| ಓಂ ಶಕ್ತಿ ಮೂಲ ಮಂತ್ರ||ಅರಳ್‌ಮಿಗು ಆದಿಪರಾಶಕ್ತಿ ಸಿದ್ದರ ಪೀಠ ತಮಿಳು ನಾಡಿನ ಮೇಲ್‌ಮರವತ್ತೂರಿನಲ್ಲಿರುವ ಆರಾಧನಾ ಕೇಂದ್ರವಾಗಿದೆ 21 ಪುರುಷ ಮತ್ತು 21 ಮಹಿಳಾಸಿದ್ದರು ಇಲ್ಲಿ ಜೀವಂತ ಸಮಾಧಿಯಾಗಿದ್ದಾರೆ ಎಂಬ ನಂಬಿಕೆ ಇದೆ ಈ ಒಂದು ಪವಿತ್ರವಾದಂತಹ ಸ್ಥಳ ಜಗತ್ತಿನಾ ದ್ಯಂತ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ ಇಲ್ಲಿ ನೆಲೆಸಿರುವ ಸಿದ್ದರು.

ಹಲವಾರು ಸಮುದಾಯಕ್ಕೆ ಸೇರಿದವರಾಗಿದ್ದು ಮಹಿಳಾಸಿದ್ದೆ ಇಲ್ಲಿ ಶಾಶ್ವತವಾಗಿ ನೆಲೆಸಿ ಭಕ್ತರನ್ನು ಪೊರೆಯುತ್ತಾಳೆ ಎಂಬುದು ಈ ಸ್ಥಳಕ್ಕೆ ವಿಶೇಷ ಮಾನ್ಯತೆ ತಂದು ಕೊಟ್ಟಿದೆ ಓಂ ಶಕ್ತಿ ತಾಯಿ ಇಲ್ಲಿ ಬರುವಂತಹ ಭಕ್ತರೊಂದಿಗೆ ಮಾತನಾಡುತ್ತಾಳೆ ಎಂದು ಪ್ರಸಿದ್ಧಿಯನ್ನು ಪಡೆದಿದ್ದು ಮಾತಿನಂತೆಯೇ ನಡೆದು ಕೊಳ್ಳುತ್ತಾಳೆ ಎನ್ನುವಂತಹ ನಂಬಿಕೆಯ ಮೇಲೆ ಇಲ್ಲಿ ಎಲ್ಲಾ ನಡೆಯುತ್ತದೆ ಎಂದು ಕೂಡ ಹೇಳುತ್ತಾರೆ.


ಪ್ರತಿ ವರ್ಷ ಲಕ್ಷಾಂತರ ಭಕ್ತರು ಮಾಲೆಯನ್ನು ಧರಿಸಿ ದೇವಿಯ ದರ್ಶನವನ್ನು ಪಡೆಯಲು ಬರುತ್ತಾರೆ ಡಿಸೆಂಬರ್ ನಿಂದ ಫೆಬ್ರವರಿಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಮಾಲೆಯನ್ನು ಉತ್ತರಿಸುತ್ತಾರೆ. ಚಿಕ್ಕವರು ದೊಡ್ಡವರು ಮಕ್ಕಳು ವಯಸ್ಕರು ಎಂಬ ವಯಸ್ಸಿನ ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ಕೂಡ ಮಾಲೆ ಯನ್ನು ಧರಿಸುತ್ತಾರೆ ಜೊತೆಗೆ ಓಂ ಶಕ್ತಿ ವ್ರತಧಾರಿಗಳು ಕೆಂಪು ಬಟ್ಟೆಯನ್ನು ಮಾತ್ರ ಧರಿಸುತ್ತಾರೆ ಇದನ್ನು ಬಿಟ್ಟು ಬೇರೆ ಬಣ್ಣದ ಬಟ್ಟೆಗಳನ್ನು ಅವರು ಧರಿಸುವಂತಿಲ್ಲ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಅದರಲ್ಲೂ ಮಾಲೆ ಧರಿಸುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು ಇರುತ್ತದೆ ಹೆಚ್ಚಿನ ಜನಕ್ಕೆ ಯಾಕೆ ಕೆಂಪು ಬಣ್ಣದ ಬಟ್ಟೆಯನ್ನು ಮಾತ್ರ ಧರಿಸಬೇಕು ಎಂಬ ಪ್ರಶ್ನೆ ಇರುತ್ತದೆ ಅದಕ್ಕೆ ಉತ್ತರ ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ಹರಿಯುತ್ತಿರುವ ರಕ್ತ ಒಂದೇ ಬಣ್ಣ ಆದ್ದರಿಂದ ಎಲ್ಲರೂ ಸಮಾನ ಎನ್ನುವಂತಹ ಅರ್ಥವನ್ನು ಸೂಚಿಸುವಂತೆ ಕೆಂಪು ಬಣ್ಣದ ಬಟ್ಟೆ ಯನ್ನು ಧರಿಸಲು ಇಲ್ಲಿ ಮಾನ್ಯತೆಯನ್ನು ನೀಡಲಾಗಿದೆ.

ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಓಂ ಶಕ್ತಿಗೆ ಹೋಗುವಂತವರು ಯಾವ ನಿಯಮ ಗಳನ್ನು ಅನುಸರಿಸಬೇಕು ಯಾವ ವಿಧಾನದಲ್ಲಿ ಪೂಜೆಗಳನ್ನು ಮಾಡಬೇಕು ಹಾಗೆ ಅವರು ಯಾವ ಒಂದು ಮಂತ್ರವನ್ನು ಪಠಿಸಬೇಕು ಅವರು ದೇವಸ್ಥಾ ನಕ್ಕೆ ಹೋಗಿ ಬರುವ ತನಕ ಯಾವುದೆಲ್ಲ ವಿಚಾರ ಗಳನ್ನು ಹೆಚ್ಚಾಗಿ ತಿಳಿದುಕೊಂಡಿರಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಓಂ ಶಕ್ತಿಮಾಲೆಯನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ಒಂದು ದಿನದ ಮಟ್ಟಿಗೆ ಮಾಲೆಯನ್ನು ಹಾಕಿ ಪೂಜೆ ಸಲ್ಲಿಸಿ ಬರುತ್ತಾರೆ ಇನ್ನು ಕೆಲವೊಬ್ಬರು ಒಂಬತ್ತು ದಿನ ಮತ್ತು 11 ದಿನ ಹಾಕುವವರು ಕೂಡ ಇರುತ್ತಾರೆ.9 ವರ್ಷ ನಿರಂತರವಾಗಿ ಮಾಲೆ ಹಾಕಿದವರು ಗುರು ಶಕ್ತಿಮಾಲೆಯನ್ನು ಹಾಕಿಕೊಳ್ಳುತ್ತಾರೆ ಹೀಗೆ 9 ವರ್ಷ ನಿರಂತರವಾಗಿ ಮಾಡಿದವರು ಹಳದಿ ಬಟ್ಟೆಯನ್ನು ಧರಿಸಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

[irp]