ನಮಸ್ಕಾರ ಸ್ನೇಹಿತರೇ ಇದೀನದ ವಿಡಿಯೋ ಅಲ್ಲಿ ಕಾಂಗ್ರೆಸ್ ಗಿಡ ,ಕಾಂಗ್ರೆಸ್ ಗಿಡ ಅಂದ ತಕ್ಷಣ ರೈತರು ಗಾಡ ನಿದ್ರೆಯಲ್ಲಿ ಇದ್ದರೂ ಸಹಿತ ಬೆಚ್ಚಿ ಬಿದ್ದು ಎದ್ದು ಕೂರುತ್ತಾರೆ.ಯಾಕೆಂದರೆ ಇದು ಅಷ್ಟೊಂದು ನಾಶಕಾರಿ ಗುಣವನ್ನು ಹೊಂದಿದೆ. ಹೆಚ್ಚು ಸಮಸ್ಯೆಗಳ ಸರಮಾಲೆಯನ್ನ ರೈತರಿಗೆ ನೀಡುತ್ತದೆ.ಬಿತ್ತನೆ ಕಾರ್ಯ ಮುಗಿದ ನಂತರ ಬೀಜ ಮೊಳಕೆ ಒಡೆಯುತ್ತೊ ಇಲ್ಲವೊ ಗೊತ್ತಿಲ್ಲ ಅದರೆ ಕಾಂಗ್ರೆಸ್ ಗಿಡ ಮಾತ್ರ ಸೊಂಪಾಗಿ ಬೆಳೆಯುತ್ತದೆ.
ಇಗಾಗಿ ನಮ್ಮ ರೈತರಿಗೆ ಬಿತ್ತನೆ ಕಾರ್ಯದಿಂದ ಇಡಿದು ಇಳುವರಿ ಪಡೆಯೋವರೆಗು ಕೂಡ ಕಾಂಗ್ರೆಸ್ ಗಿಡದ ಟೆನ್ಷನ್ ಇದ್ದೆ ಇರುತ್ತದೆ. ಇಗಾಗಿ ನಮ್ಮ ರೈತರು ಕಾಂಗ್ರೆಸ್ ಗಿಡಕ್ಕೆ ದಶಕಗಳಿಂದಲೂ ಇಡಿಶಾಪ ಆಕುತ್ತಾನೆ ಬಂದಿದ್ದಾರೆ ಅದರೆ ವಿಪರ್ಯಾಸ ನೋಡಿ ಕಾಂಗ್ರೆಸ್ ಗಿಡ ರೈತರ ಗಿಡದಿಂದ ಬಿಟ್ಟು ಹೋಗುತ್ತಾನೆ ಇಲ್ಲ .ಹಾಗಾಗಿ ಈದಿನದ ವಿಡಿಯೋ ಅಲ್ಲಿ ಕರೆಯದೆ ಬರುವ ಅತಿಥಿ ಕಾಂಗ್ರೆಸ್ ಗಿಡದ ಮಹತ್ವವೇನು ಕಾಂಗ್ರೆಸ್ ಗಿಡದ ಮೇಲೆ ರೈತರು ಕೆಲವೊಂದಿಷ್ಟು ತಪ್ಪು ತಿಳಿವಳಿಕೆಯನ್ನು ಹೊಂದಿದ್ದಾರೆ ಹಾಗಾದರೆ ಆ ತಪ್ಪು ತಿಳುವಳಿಕೆ ಏನು ನಿಜಕ್ಕೂ ಕಾಂಗ್ರೆಸ್ ಗಿಡ ಹಿಂಸೆ ಕೊಡುವಂತಹ ಕ್ರೂರಿನ ಅಥವಾ ರೈತರಿಗೆ ಸಹಾಯ ಮಾಡಲು ಬಂದಂತಹ ನೈಸರ್ಗಿಕ ಗೊಬ್ಬರ ಕೀಟನಾಶಕ ಹಾಗೆ ಈ ಕಾಂಗ್ರೆಸ್ ಗಿಡ ಹೇಗೆ ಬಂತು ಇದನ್ನು ಹಾಗೆ ಬಿಟ್ಟರು ನಷ್ಟ ಎಷ್ಟು ಉಪಯೋಗಿಸಿಕೊಂಡರೆ ಲಾಭ ಎಷ್ಟು.
ಕಾಂಗ್ರೆಸ್ ಗಿಡದ ಪರಿಚಯ ಮೊದಲನೇಯದಾಗಿ ಕಾಂಗ್ರೆಸ್ ಗಿಡದ ಪರಿಚಯವನ್ನು ನೋಡುತ್ತ ಹೋಗೋಣ ಬನ್ನಿ. ಕಾಂಗ್ರೆಸ್ ಗಿಡ ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಪಾರ್ಥಿನೆಮ್ ಎಂದು ಕರೆಯುತ್ತಾರೆ.ಪಾರ್ಥಿನೆಮ್ ಲ್ಯಾಟಿನ್ ಭಾಷೆಯ ಪದ ಈ ಪಾರ್ಥಿನೆಮ್ ಅಷ್ಟ ದೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ ಇಗಾಗಿ ಇದನ್ನು ಪಾರ್ಥಿನೆಮ್ ಇಸ್ಟಿನೊ ಪೊರಸ್ ಎಂದು ಕರೆಯುತ್ತಾರೆ. ಇದು ಪರಿಚಯವಾದ ನಂತರ ಕಾಂಗ್ರೆಸ್ ಗಿಡವನ್ನು ನಮ್ಮ ರೈತರು ಹಲವು ಪದಗಳಿಂದ ನಾಮಕರಣ ಮಾಡಿದರು
ಅವು ಯಾವುವು ಅಂತ ಇವಾಗಗಲೆ ನಿಮಗೆ ಗೊತ್ತಿರುವ ವಿಚಾರ ಕಾಂಗ್ರೆಸ್ ಗಿಡ,ಸಪೆದಾ ಟೋಪಿ,ಬಿಳಿ ಟೋಪಿ ಕಳೆ,ನಕ್ಷತ್ರ ಗಿಡ,ಗಜ್ಜರಿ ಕಸ,ಚಟಕ್ ಚಂದಿನಿ ಈಗೆ ಹಲವು ಪದಗಳಿಂದ ನಾಮಕರಣ ಮಾಡಿದ್ದರು ನಮ್ಮ ರೈತರು ಇದು ಸರಿಸುಮಾರು ಒಂದರಿಂದ ಒಂದುವರೆ ಮೀಟರ್ ಎತ್ತರ ಬೆಳೆಯುತ್ತದೆ ಗಿಡದ ತುಂಬಾ ಎಲೆಗಳು ಸೊಂಪಾಗಿ ಬೆಳೆದು ಗಿಡ ಅಚ್ಚ ಹಸಿರು ಆಗಿರುತ್ತದೆ ಇದರ ಎಲೆಗಳು ಮೂಲಂಗಿಯ ಎಲೆಗಳನ್ನು ಹೋಲುತ್ತದೆ.
ಈ ಕಾಂಗ್ರೆಸ್ ಗಿಡದ ಜೀವಿತಾವದಿ ಬಂದು ಮೂರು ವರ್ಷ ಈ ಜೀವಿತಾವದಿಯಲ್ಲಿ ಸರಿ ಸುಮಾರು ಐದು ಸಾವಿರ ಬೀಜಗಳನ್ನು ಉತ್ಪಾದಿಸುವ ಶಕ್ತಿ ಇದೆ ಬೀಜಗಳು ತುಂಬಾ ಹಗುರವಾಗಿ ಇರುವುದರಿಂದಾಗಿ ಗಾಳಿಯಲ್ಲಿ ತೂರಿ ಕೊಂಡು ರಸ್ತೆಯಲ್ಲಿ ಒಡಾಡುವ ವಾಹನಗಳ ಚಕ್ರಗಳಿಗೆ ಅಂಟಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಹರಡುತ್ತದೆ ಸ್ವಲ್ಪವೇ ಮಣ್ಣಿದ್ದರು ಸಹಿತ ಗಿಡ ಬಹಳ ಸೊಂಪಾಗಿ ಬೆಳೆಯುವ ರಾಕ್ಷಸಿ ಕಳೆ ಅಂತ ಅಂದರೆ ತಪ್ಪಾಗುವುದಿಲ್ಲ.
ಇನ್ನೂ ಇದು ರೈಲು ಹಳಿಗಳ ಬದಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಪಾಳು ಬಿದ್ದ ಜಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗಿಡವಾಗಿ ಬೆಳೆಯುತ್ತದೆ ಅಷ್ಟೇ ಅಲ್ಲ ರೈತ ಬೆಳೆಯುವ ಬೆಳೆಯ ಜೊತೆಯು ಕೂಡ ಹೊಲಸಾಗಿ ಬೆಳೆದು ಬೆಳೆಗೆ ನೀಡಿರುವಂತಹ ಗೊಬ್ಬರವನ್ನು ತಾನು ಉಂಡು ಬೆಳೆಗೆ ಗೊಬ್ಬರದ ಅಭಾವವನ್ನ ಸೃಷ್ಟಿಸುತ್ತದೆ .ಇಳುವರಿಯನ್ನು ಕುಂಟಿಸಿ ಬಿಡುತ್ತದೆ.
ಆಗ ರೈತ ಅಂದುಕೊಂಡಂತಹ ಇಳುವರಿ ಸಿಗದೆ ರೈತರು ಕಷ್ಟಕ್ಕೆ ಸಿಲುಕುತ್ತಾರೆ ಔದು ರೈತರು ಬೆಳೆಗಳಿಗೆ ಅಂತ ಹಾಕಿರುವಂತಹ ಗೊಬ್ಬರವನ್ನು ತಾನು ಉಂಡು ಅತಿರೇಕವಾಗಿ ಬೆಳೆದು ಪ್ರಮುಖ ಬೆಳೆಗೆ ಗೊಬ್ಬರದ ಅಭಾವವನ್ನ ಸೃಷ್ಟಿ ಮಾಡುತ್ತದೆ ಇಳುವರಿಯಲ್ಲಿ ಶೇಕಡಾ ನಲವತ್ತರಷ್ಟು ಪ್ರಮಾಣವನ್ನ ಇಳಿಕೆ ಮಾಡಿದೆ ಹಾಗಾದರೆ ರೈತರು ಇಷ್ಟೊಂದು ಕಷ್ಟವನ್ನ ಅನುಭವಿಸುವಂತಹ ಪರಿಸ್ಥಿತಿಯನ್ನು ಎದುರು ಮಾಡಿರುವಂತಹ ಈ ಕಾಂಗ್ರೆಸ್ ಕಳೆ ಹೇಗೆ ಬಂತು .
ಈ ಕಾಂಗ್ರೆಸ್ ಗಿಡ 1956 ರಲ್ಲಿ ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರದ ಪುಣೆಗೆ ಕಾಲಿಟ್ಟಿತು ಹೇಗಂದರೆ 1956 ರ ದಶಕದಲ್ಲಿ ಭಾರತವೂ ಆಹಾರದ ಕೊರತೆಯನ್ನು ಎದುರಿಸುತ್ತ ಇತ್ತು ಈ ಬಿಕ್ಕಟ್ಟನ್ನು ತಗ್ಗಿಸಲು ಆ ಸಮಯದಲ್ಲಿ ಕೇಂದ್ರದಲ್ಲಿ ಇದ್ದ ಸರ್ಕಾರವೂ ಯು ಎಸ್ ಎ ಇಂದ ಗೋಧಿಯನ್ನು ಆಮದು ಮಾಡಿಕೊಳ್ಳಲು ನಿರ್ದರಿಸಿತು.
ಯು ಎಸ್ ಎ ಪಿಎಲ್ ಪಾರ್ ಎಟಿ ಅಂದರೆ ಶಾಂತಿಗಾಗಿ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಆಹಾರ ಧಾನ್ಯವನ್ನು ಪಡೆಯಲಾಗಿತ್ತು.ಆಗ ಭಾರತಕ್ಕೆ ರಾವಾನೆಯಾದ ಗೋಧಿಯಲ್ಲಿ ಈ ಕಾಂಗ್ರೆಸ್ ಗಿಡದ ಬಿಜಗಳು ಪತ್ತೆಯಾದವು ಅಂದು ಪತ್ತೆಯಾದ ಕಾಂಗ್ರೆಸ್ ಗಿಡದ ಬೀಜ ಇಂದೂ ದೇಶದ ಹಲವು ಎಕ್ಟೇರ್ ಪ್ರದೇಶದಲ್ಲಿ ಅವರಿಸಿಕೊಂಡಿದೆ ನಿರ್ಮೂಲನೆ ಮಾಡಲು ಅಗದ ಸ್ಥಿತಿಯಲ್ಲಿ ಬಂದು ತಲುಪಿದೆ.ಇಗೆ ಭಾರತಕ್ಕೆ ಕಾಂಗ್ರೆಸ್ ಗಿಡ ಬಂತು.ಈ ಪಾರ್ಥಿನೆಮ್ ಸಸ್ಯವನ್ನ ಯಾಕೆ ಕಾಂಗ್ರೆಸ್ ಗಿಡ ಅಂತ ಕರೆಯುತ್ತಾರೆ ಆರು ದಶಕಗಳ ಇಂದೆ ಅಮೇರಿಕಾದಿಂದ ಗೋದಿಯ ಜೊತೆ ಈ ಪಾರ್ಥಿನಿ ಬೀಜ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಅದರ ಹರಡುವಿಕೆಯನ್ನು ತಡೆಗಟ್ಟಲು ಅಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪರಿಗಣಿಸಿ ಇದನ್ನ ಕಾಂಗ್ರೆಸ್ ಹುಲ್ಲು,ಕಾಂಗ್ರೆಸ್ ಗಿಡ,ಕಾಂಗ್ರೆಸ್ ಕಳೆ ಎಂದು ನಾಮಕರಣ ಮಾಡಿದರು .ಹೀಗಾಗಿ ಇದನ್ನ ರೈತರು ಕಾಂಗ್ರೆಸ್ ಗಿಡ ಎಂದು ಕರೆಯುತ್ತಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.